ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೇರಳದ ಯುವಕನ ನಿಗೂಢ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌: ಆರ್‌ಎಸ್‌ಎಸ್‌ನಿಂದ ಸ್ಪಷ್ಟನೆ

ಕೇರಳದ ಐಟಿ ಉದ್ಯೋಗಿ ಅನಂತು ಅಜಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು, ಆತ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಗಂಭೀರ ಮಾನಸಿಕ ಕಾಯಿಲೆಗಳೇ ಆತ್ಮಹತ್ಯೆಗೆ ಮುಖ್ಯ ಕಾರಣ ಎಂದು ಆರ್‌ಎಸ್‌ಎಸ್‌ ಸ್ಪಷ್ಟಪಡಿಸಿದೆ.

ಕೇರಳದ ಯುವಕನ ಆತ್ಮಹತ್ಯೆ ಪ್ರಕರಣ: ಆರ್‌ಎಸ್‌ಎಸ್‌ ಹೇಳಿದ್ದೇನು?

-

Ramesh B Ramesh B Oct 13, 2025 6:41 PM

ತಿರುವನಂತಪುರಂ, ಅ. 13: ಕೇರಳದ ಐಟಿ ಉದ್ಯೋಗಿ 26 ವರ್ಷದ ಅನಂತು ಅಜಿ (Anandu Aji) ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು, ಆತ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಗಂಭೀರ ಮಾನಸಿಕ ಕಾಯಿಲೆಗಳೇ ಆತ್ಮಹತ್ಯೆಗೆ ಮುಖ್ಯ ಕಾರಣ ಎಂದು ಆರ್‌ಎಸ್‌ಎಸ್‌ (Rashtriya Swayamsevak Sangh) ಸ್ಪಷ್ಟಪಡಿಸಿದೆ. ಅನಂತು ಒಸಿಡಿ, ಆತಂಕ, ಪ್ಯಾನಿಕ್ ಅಟ್ಯಾಕ್ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಎಂದು ಆರ್‌ಎಸ್‌ಎಸ್‌ ಮುಖಂಡರು ತಿಳಿಸಿದ್ದಾರೆ. ಇದಕ್ಕಾಗಿ ಆತ ನಿಯಮಿತ ಚಿಕಿತ್ಸೆ ಮತ್ತು ಸಮಾಲೋಚನೆಗೆ ಒಳಗಾಗುತ್ತಿದ್ದ ಎಂದೂ ವಿವರಿಸಿದೆ. ಕೋಟಯಂ ನಿವಾಸಿ ಅನಂತು ಇತ್ತೀಚೆಗೆ ತಿರುವನಂತಪುರಂನ ಲಾಡ್ಜೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ.

ಆರ್‌ಎಸ್‌ಎಸ್‌ ಸದಸ್ಯರ ನಿರಂತರ ಲೈಂಗಿಕ ದೌರ್ಜನ್ಯನಿಂದ ಬೇಸತ್ತು ಅನಂತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಸುದ್ದಿ ಸದ್ಯ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ ಈಗ ಸ್ಪಷ್ಟನೆ ನೀಡಿದೆ.

ಆರ್‌ಎಸ್‌ಎಸ್‌ ಹೇಳಿಕೆ:



ಈ ಸುದ್ದಿಯನ್ನೂ ಓದಿ: Self Harming: ಬೇರೊಬ್ಬಳ ಜೊತೆ ಗಂಡನ ಚಾಟಿಂಗ್, ನೊಂದು ನವವಿವಾಹಿತೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಏನಿದು ವಿವಾದ?

ಆತ್ಮಹತ್ಯೆಗೆ ಶರಣಾಗುವ ಮುನ್ನ ಅನಂತು ಸೋಶಿಯಲ್‌ ಮೀಡಿಯಾದಲ್ಲಿ ತನ್ನ ಮೇಲೆ ನಿರಂತರವಾಗಿ ದೌರ್ಜನ್ಯ ನಡೆದಿತ್ತು ಎಂದು ಬರೆದುಕೊಂಡಿದ್ದ. ʼʼಆರ್‌ಎಸ್‌ಎಸ್‌ ಸದಸ್ಯರು ಶಾಖೆಗಳಲ್ಲಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ನಾನು ಮಾತ್ರವಲ್ಲ ದೇಶಾದ್ಯಂತ ಹರಡಿರುವ ಆರ್‌ಎಸ್‌ಎಸ್‌ ಕ್ಯಾಂಪ್‌ಗಳಲ್ಲಿ ಇಂತಹ ಸಾಕಷ್ಟು ಮಂದಿ ಸಂತ್ರಸ್ತರಿದ್ದಾರೆʼʼ ಎಂದು ಆರೋಪಿಸಿದ್ದ.

ಮೂಲಗಳ ಪ್ರಕಾರ, ದಿವಂಗತ ಅಜಿ ಅವರ ಪುತ್ರ ಅನಂತು ಈ ಹಿಂದೆ ಆರ್‌ಎಸ್‌ಎಸ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ. ಆದರೆ ತೋಡುಪುಳದ ಅಲ್-ಅಜರ್ ಕಾಲೇಜಿಗೆ ಸೇರಿದ ನಂತರ ಸುಮಾರು 5 ವರ್ಷಗಳಿಂದ ಶಾಖೆಯಿಂದ ಅಂತರ ಕಾಯ್ದುಕೊಂಡಿದ್ದ. ಅದಾಗ್ಯೂ ಆರ್‌ಎಸ್‌ಎಸ್‌ನ ಹಲವು ಸ್ನೇಹಿತರೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದಾಗಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದ.

ಮಾನಸಿಕ ಆರೋಗ್ಯ ಸಮಸ್ಯೆ

ಅನಂತು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಎನ್ನುವ ವಿಚಾರ ಇದೀಗ ಗೊತ್ತಾಗಿದ್ದು, ಆರ್‌ಎಸ್‌ಎಸ್‌ ಹೆಸರು ಕೆಡಿಸಲು ಉದ್ದೇಶಪೂರ್ವಕವಾಗಿ ಆರೋಪ ಹೊರಿಸಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆತ ಒಸಿಡಿ, ಪ್ಯಾನಿಕ್ ಅಟ್ಯಾಕ್ ಮತ್ತು ಖಿನ್ನತೆಯಂತಹ ಸಮಸ್ಯೆ ಹೊಂದಿದ್ದ. ಇದಕ್ಕಾಗಿ ನಿರಂತರ ಚಿಕಿತ್ಸೆಯನ್ನೂ ಪಡೆಯುತ್ತಿದ್ದ. ಈ ಕಾರಣಕ್ಕೆ ಇತ್ತೀಚೆಗೆ ಅಂತರ್ಮುಖಿಯಾಗಿದ್ದ. ಇದರಿಂದ ಮನೆಯವರಿಂದಲೂ ಅಂತರ ಕಾಯ್ದುಕೊಂಡಿದ್ದ. ಇದುವೇ ಆತ್ಮಹತ್ಯೆಗೆ ಮೂಲ ಕಾರಣ ಎಂದು ವರದಿಯೊಂದು ಹೇಳಿದೆ. ಜತೆಗೆ ಈ ನಿರ್ಧಾರದ ಹಿಂದೆ ಕೌಟುಂಬಿಕ ಸಮಸ್ಯೆಯೂ ಇರಬಹುದು ಎಂದು ಮೂಲಗಳು ತಿಳಿಸಿವೆ. ಅನಂತು ಸಹೋದರಿ ಅಮ್ಮು ಇದೀಗ ಬಶೀರ್ ಎಂಬ ಮುಸ್ಲಿಂ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದು ಮದುವೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.

ಪ್ರಜ್ಞಾ ಪೂರ್ವಕ ಕೃತ್ಯ

ಇನ್‌ಸ್ಟಾಗ್ರಾಮ್‌ನಲ್ಲಿ ಕಂಡುಬಂದ ಅನಂತು ಬರೆದಿದ್ದೆನ್ನಲಾದ ಡೆತ್‌ನೋಟ್‌ ಬಗ್ಗೆಯೇ ಆರ್‌ಎಸ್‌ಎಸ್‌ ಸಂದೇಹ ವ್ಯಕ್ತಪಡಿಸಿದೆ. ಈ ಪೋಸ್ಟ್‌ ಅನ್ನು ಸಾಕಷ್ಟು ಬಾರಿ ಎಡಿಟ್‌ ಮಾಡಲಾಗಿದೆ ಎಂದು ತಿಳಿಸಿದೆ. ಡೆತ್‌ನೋಟ್‌ ಅನಂತು ಬರೆದಿದ್ದೇ ಅಥವಾ ಮೂರನೇ ವ್ಯಕ್ತಿಯ ಕೈವಾಡವಿದೆಯೇ ಎನ್ನುವುದನ್ನು ನಿರ್ಧರಿಸಲು ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ಹೇಳಿದೆ.

ಈ ಮಧ್ಯೆ ಎಡ ಪಕ್ಷಗಳು ಮತ್ತು ಕಾಂಗ್ರೆಸ್‌ ಅನಂತು ಆತ್ಮಹತ್ಯೆ ಪ್ರಕರಣವನ್ನು ರಾಜಕೀಯಗೊಳಿಸಿವೆ. ಈ ಪ್ರಕರಣದ ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ಆಗ್ರಹಿಸಿದ್ದಾರೆ.