ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gulshan Devaiah: ರಿಷಬ್ ಶೆಟ್ಟಿ ಜತೆಗಿನ ಬಾಂಧವ್ಯ ಹೇಗಿತ್ತು ಎಂದು ತಿಳಿಸಿದ ನಟ ಗುಲ್ಶನ್ ದೇವಯ್ಯ

ʼಕಾಂತಾರ ಚಾಪ್ಟರ್ 1ʼ ಚಿತ್ರದ ಹಲವು ಪಾತ್ರಗಳು ಥಿಯೇಟರ್‌ನಿಂದ ಹೊರ ಬಂದಾಗಲೂ ನೆನಪಿನಲ್ಲಿ ಉಳಿಯುತ್ತವೆ. ಅದರಲ್ಲೂ ಸದಾ ಪಾನಮತ್ತನಾಗಿಯೇ ಇರುವ ರಾಜ ಕುಲಶೇಖರನ ಪಾತ್ರ ಸಿನಿಪ್ರಿಯರನ್ನು ಸೆಳೆದಿದೆ. ಈ ಪಾತ್ರದಲ್ಲಿ ಕಾಣಿಸಿಕೊಂಡಿರುವವರು ಕೊಡಗು ಮೂಲದ ಬಾಲಿವುಡ್‌ ನಟ ಗುಲ್ಶನ್ ದೇವಯ್ಯ. ಸದ್ಯ ಅವರು ʼಕಾಂತಾರ ಚಾಪ್ಟರ್‌ 1' ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರೊಂದಿಗೆ ತೆರೆ ಹಂಚಿಕೊಂಡಿರುವ ಅನುಭವದ ಬಗ್ಗೆ ಮಾತನಅಡಿದ್ದಾರೆ.

ರಿಷಬ್ ಶೆಟ್ಟಿ ಬಗ್ಗೆ ʼಕಾಂತಾರʼ ನಟ ಗುಲ್ಶನ್ ದೇವಯ್ಯ ಹೇಳಿದ್ದೇನು?

Gulshan Devaiah -

Profile Pushpa Kumari Oct 13, 2025 8:34 PM

ಬೆಂಗಳೂರು: ರಿಷಬ್ ಶೆಟ್ಟಿ (Rishab Shetty) ಅಭಿನಯದ 'ಕಾಂತಾರ ಚಾಪ್ಟರ್ 1' (Kantara Chapter 1) ಸಿನಿಮಾವು ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ಚಿತ್ರ ನೋಡಿದ ಪ್ರೇಕ್ಷಕರು ಮಾತ್ರವಲ್ಲದೇ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ರಿಷಬ್‌ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇನ್ನು ʼಕಾಂತಾರ ಚಾಪ್ಟರ್ 1ʼ ಚಿತ್ರದಲ್ಲಿನ ಹಲವು ಪಾತ್ರಗಳು ಥಿಯೇಟರ್‌ನಿಂದ ಹೊರಬಂದಾಗಲೂ ನೆನಪಿನಲ್ಲಿ ಉಳಿಯುತ್ತವೆ. ಈ ಪೈಕಿ ಕುಲಶೇಖರ ಪಾತ್ರವೂ ಒಂದು. ಸದಾ ಪಾನಮತ್ತನಾಗಿಯೇ ಇರುವ ರಾಜ ಕುಲಶೇಖರನಾಗಿ ಬಾಲಿವುಡ್‌ ನಟ, ಕೊಡಗು ಮೂಲದ ಗುಲ್ಶನ್ ದೇವಯ್ಯ (Gulshan Devaiah) ಕಾಣಿಸಿಕೊಂಡಿದ್ದಾರೆ. ಸದ್ಯ ಅವರು ʼಕಾಂತಾರʼ ಚಿತ್ರದ ಬಗ್ಗೆ, ರಿಷಬ್ ಶೆಟ್ಟಿ ಅವರೊಂದಿಗಿನ ತಮ್ಮ ಒಡನಾಟದ ಬ್ಗೆ ಮಾತನಾಡಿದ್ದಾರೆ.

ಗುಲ್ಶನ್ ದೇವಯ್ಯ ಹಿಂದಿಯಲ್ಲಿ ಚಿತ್ರರಂಗದಲ್ಲಿ ಜನಪ್ರಿಯ ನಟ. ʼಕಾಂತಾರ ಚಾಪ್ಟರ್‌ 1' ಅವರ ಮೊದಲ ಕನ್ನಡ ಸಿನಿಮಾ. ಚಿತ್ರದಲ್ಲಿ ಕುಲಶೇಖರ ಎನ್ನುವ ನೆಗೆಟಿವ್ ರೋಲ್ ಗಮನ ಸೆಳೆದಿದೆ. ಸಿಟ್ಟು, ನಗು ಹಾಗೂ ಸದಾ ಪಾನಮತ್ತನಾಗಿಯೇ ಇರುವ ರಾಜನಾಗಿ ಗುಲ್ಶನ್ ದೇವಯ್ಯ ಪೂರ್ಣಾಂಕ ಗಿಟ್ಟಿಸಿಕೊಂಡಿದ್ದಾರೆ. ಇವರ ನಟನೆಗೆ ರಿಷಬ್‌ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಗುಲ್ಶನ್‌ ಹೇಳಿಕೊಂಡಿದ್ದಾರೆ.

ಗುಲ್ಶನ್ ದೇವಯ್ಯ ಚಿತ್ರದ ಯಶಸ್ಸು ಮತ್ತು ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಶ್ರಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಗುಲ್ಶನ್, "ನಾನು ಈವರೆಗೂ ಕೆಲಸ ಮಾಡಿದ ಅತ್ಯುತ್ತಮ ಇಬ್ಬರು ನಟರನ್ನು ನನ್ನ ಎರಡು ಬೆರಳುಗಳಲ್ಲಿ ಎಣಿಸಬಹುದು ಎಂದು ರಿಷಬ್ ಯಾವಾಗಲೂ ಹೇಳುತ್ತಿದ್ದರು. ಇದು ಕೇವಲ ತನ್ನ ಕಲೆಯ ಬಗ್ಗೆ ಮಾತ್ರವಲ್ಲ, ನಟನೆಯ ಜವಾಬ್ದಾರಿ ಬಗ್ಗೆಯೂ ಆಗಿತ್ತು. ಹಾಗಾಗಿ ರಿಷಬ್‌ ನನ್ನ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರುʼʼ ಎಂದು ಹೇಳಿಕೊಂಡಿದ್ದಾರೆ.

ಇದನ್ನು ಓದಿ:Kantara Chapter 1 Box Office Collection: ಮತ್ತೂ ಜೋರಾಯ್ತು ʼಕಾಂತಾರ ಚಾಪ್ಟರ್‌ 1ʼ ಹವಾ; ಭಾರತದಲ್ಲೇ 435 ಕೋಟಿ ರೂ. ಮೀರಿತು ಕಲೆಕ್ಷನ್‌

ʼʼಒಬ್ಬ ಕಲಾವಿದ ಇನ್ನೊಬ್ಬ ಕಲಾವಿದನನ್ನು ಗುರುತಿಸುವುದು ಸುಲಭವಲ್ಲ. ಅವರು ನನ್ನನ್ನು ಬಹಳಷ್ಟು ನಂಬಿದ್ದರು. ಅದಕ್ಕಾಗಿಯೇ ಅವರು ನನ್ನನ್ನು ಸಿನಿಮಾದಲ್ಲಿ ಆಯ್ಕೆ ಮಾಡಿದ್ದಾಗಿ ತಿಳಿಸಿದರುʼʼ ಎಂದ ಗುಲ್ಶನ್ ಹೇಳಿದ್ದಾರೆ.