ಗುಜರಾತ್: ಕೇವಲ 10 ರುಪಾಯಿಗಾಗಿ ಅಂಗವಿಕಲ ವ್ಯಕ್ತಿಯನ್ನು (disabled man murder case) ಹೊಡೆದು ಕೊಂದ (Crime) ಘಟನೆ ಗುಜರಾತ್‌ನ (Gujarat) ನರ್ಮದಾ ಜಿಲ್ಲೆಯ (Narmada district) ಭದರ್ವಾ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. 41 ವರ್ಷದ ಅಂಗವಿಕಲ ವ್ಯಕ್ತಿ ರಾಜೇಶ್‌ಭಾಯ್ ಧಂಜಿಭಾಯ್ ತಡ್ವಿ ಅವರನ್ನು 33 ವರ್ಷದ ಧರ್ಮೇಂದ್ರಭಾಯ್ (ಅಲಿಯಾಸ್ ಧಾಮೋ) ಗಣಪತ್‌ಭಾಯ್ ತಡ್ವಿ ಎಂಬಾತ ತಡೆದು ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ರಾಜೇಶ್‌ಭಾಯ್ ಧಂಜಿಭಾಯ್ ತಡ್ವಿ ಸ್ಥಳದಲ್ಲೇ (Murder case) ಸಾವನ್ನಪ್ಪಿದ್ದಾರೆ.
ಪಾರ್ಶ್ವವಾಯು ಸೇರಿದಂತೆ ದೈಹಿಕ ಅಂಗವೈಕಲ್ಯದಿಂದ ಬಳಲುತ್ತಿದ್ದ ರಾಜೇಶ್‌ಭಾಯ್ ಧಂಜಿಭಾಯ್ ತಡ್ವಿ ಅವರು ಶುಕ್ರವಾರ ಬೆಳಗ್ಗೆ ಗ್ರಾಮದ ಬಸ್ ನಿಲ್ದಾಣದಿಂದ ದಿನಸಿ ತರಲೆಂದು ಹೋಗಿದ್ದರು. ಅವರು ಮನೆಗೆ ಹಿಂದಿರುಗುತ್ತಿದ್ದಾಗ ಅಡ್ಡಗಟ್ಟಿದ ಧರ್ಮೇಂದ್ರಭಾಯ್ ವೈಯಕ್ತಿಕ ಖರ್ಚಿಗಾಗಿ 10 ರೂ. ಕೇಳಿದ್ದಾನೆ.
ವಿಡಿಯೊ ಇರುವುದು ನಿಜ, ಆದ್ರೆ ಆಕೆಯೇ ರೆಕಾರ್ಡ್ ಮಾಡಿದ್ದು; ಯುವತಿ ಮೊಬೈಲ್ ಚೆಕ್ ಮಾಡಿ ಎಂದ ಸಮೀರ್
ಇದನ್ನು ಕೊಡಲು ರಾಜೇಶ್‌ಭಾಯ್ ನಿರಾಕರಿಸಿದ್ದರಿಂದ ಧರ್ಮೇಂದ್ರ ಗ್ರಾಮದ ರಾಜೇಶ್‌ಭಾಯ್ ಅವರನ್ನು ರಸ್ತೆಗೆ ಬೀಳಿಸಿ ಕ್ರೂರವಾಗಿ ಹಲ್ಲೆ ನಡೆಸಿ, ಎದೆ ಮತ್ತು ಕುತ್ತಿಗೆಗೆ ಒದ್ದಿದ್ದಾನೆ. ಅಲ್ಲದೇ ರಾಜೇಶ್‌ಭಾಯ್ ಅವರ ಗಂಟಲಿನ ಮೇಲೆ ಕಾಲು ಇಟ್ಟು ಕತ್ತು ಹಿಸುಕಿದನು. ರಾಜೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.
ಘಟನೆಯ ಬಳಿಕ ಗ್ರಾಮದ ಮುಖ್ಯಸ್ಥರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತನ ದೇಹದ ಮೇಲೆ ಗಾಯಗಳನ್ನು ಗುರುತಿಸಿದ್ದಾರೆ.
ಇನ್ಸ್‌ಪೆಕ್ಟರ್ ಎ.ಪಿ. ಸೋಲಂಕಿ ನೇತೃತ್ವದ ಪೊಲೀಸರು ಧರ್ಮೇಂದ್ರ ತಡ್ವಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.
ಪೊಲೀಸರಿಗೆ ದೂರು ನೀಡಿದ ಭರತ್‌ಭಾಯಿ ತಡ್ವಿ ಎಂಬವರು ತಮ್ಮ ಸೋದರಸಂಬಂಧಿ ರಾಜೇಶ್ ದೈಹಿಕ ಸ್ಥಿತಿ ದುರ್ಬಲವಾಗಿರುವುದು ಗೊತ್ತಿದ್ದರೂ ಆತನ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ವಧುವರರ ಮೇಲೆ ಹಲ್ಲೆ
ಮದುವೆ ಮನೆಯಲ್ಲಿ ಮದ್ಯದ ವಿಚಾರದಲ್ಲಿ ಗಲಾಟೆ ನಡೆದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಗಳು ವಧು- ವರನನ್ನು ಥಳಿಸಿ ಹಲ್ಲೆ ನಡೆಸಿದ್ದಾರೆ. ಮಧ್ಯ ಪ್ರದೇಶದ ಗ್ವಾಲಿಯರ್ ಜಿಲ್ಲೆಯ ಪಟಾಯಿ ಗ್ರಾಮದಲ್ಲಿ ಮಹೇಶ್ ಜಾತವ್ ಅವರ ವಿವಾಹ ನಡೆದಿತ್ತು. ಮದುವೆಯಾದ ಬಳಿಕ ಮಹೇಶ್ ಪತ್ನಿಯೊಂದಿಗೆ ಗ್ರಾಮಕ್ಕೆ ಮರಳಿದ್ದು ಅಲ್ಲಿ ಔತಣ ಕೂಟ ಏರ್ಪಡಿಸಲಾಗಿತ್ತು.
Self Harming: ಮದುವೆಯಾಗಲಿಲ್ಲ ಅಂತ ನೊಂದು ತೆಂಗಿನಮರಕ್ಕೆ ನೇಣು ಹಾಕಿಕೊಂಡು ಯುವಕ ಆತ್ಮಹತ್ಯೆ
ಈ ಸಂದರ್ಭದಲ್ಲಿ ಮಹೇಶ್ ಅವರ ಕುಟುಂಬದಿಂದ ಮದ್ಯ ಖರೀದಿಸಲು ನೆರೆಮನೆಯ ವ್ಯಕ್ತಿಗಳು ಹಣ ಕೇಳಿದ್ದು, ಇದಕ್ಕೆ ಮಹೇಶ್ ನಿರಾಕರಿಸಿದ್ದರಿಂದ ಜಗಳ ಉಂಟಾಗಿದೆ. ಈ ಸಂದರ್ಭದಲ್ಲಿ ಆರೋಪಿಗಳು ವಧು, ವರ, ವರನ ತಾಯಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಆರೋಪಿಗಳು ಮನೆಯೊಳಗೆ ನುಗ್ಗಿ ನಗದು, ಗೃಹೋಪಯೋಗಿ ವಸ್ತುಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ.