ಬೆಳಗಾವಿ: ಗುಂಡು ಮಗು ಹುಟ್ಟಿದೆ ಪಾರ್ಟಿ ಕೊಡಿಸು ಎಂದು ಕೇಳಿದ ಸ್ನೇಹಿತನನ್ನೇ ಕೊಲೆ ಮಾಡಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ನಡೆದಿದೆ.ವಣ್ಣೂರ (Murder Case) ಗ್ರಾಮದ ಹನುಮಂತಪ್ಪ ಯಮನಪ್ಪ ಇಟಗಿ ಕೊಲೆಯಾದ ವ್ಯಕ್ತಿ. ಅದೇ ಊರಿನ ವಿಶ್ವನಾಥ ಪೂಜೇರಿ ಕೊಲೆ ಮಾಡಿರುವ ಆರೋಪಿ. ಹನುಮಂತಪ್ಪನನ್ನು ವಿಶ್ವನಾಥ ಕಲ್ಲಿನಿಂದ ಕೊಲೆ ಮಾಡಿದ್ದಾನೆ. ಮದ್ಯದ ಅಮಲಿನಲ್ಲಿ ಗ್ರಾಮದ ಕಟ್ಟೆಯ ಮೇಲೆ ಕುಳಿತು ಇಬ್ಬರು ಮಾತನಾಡುತ್ತಾ ಕುಳಿತಿದ್ದರು. ಇದೇ ವೇಳೆ ವಿಶ್ವನಾಥಗೆ ಹನುಮಂತಪ್ಪ ಆತ್ಮೀಯತೆಯಿಂದ ಪಾರ್ಟಿ ಕೊಡಿಸುವಂತೆ ಕೇಳಿದ್ದಾನೆ.
ಈ ವೇಳೆ ಮಾತಿನ ಭರದಲ್ಲಿ ವಿಶ್ವನಾಥ ಕಣ್ಣಿಗೆ ರಭಸವಾಗಿ ಹನುಮಂತಪ್ಪ ಬೆರಳು ತಾಗಿದೆ. ಇದೇ ಸಿಟ್ಟು ಇಟ್ಟುಕೊಂಡ ವಿಶ್ವನಾಥ ಹನುಮಂತಪ್ಪ ತಲೆಗೆ ಕಲ್ಲಿನಿಂದ ಹೊಡೆದಿದ್ದಾನೆ. ಹೊಡೆತದ ತೀವ್ರತೆಗೆ ರಕ್ತಸ್ರಾವವಾಗಿ ಸ್ಥಳದಲ್ಲೇ ಹನುಮಂತಪ್ಪ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಹನುಮಂತಪ್ಪ ಕುಸಿದು ಬೀಳುತ್ತಿದ್ದಂತೆ ಸ್ಥಳದಿಂದ ಆರೋಪಿ ವಿಶ್ವನಾಥ ಪರಾರಿಯಾಗಿದ್ದ. ಈ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದ ನೇಸರಗಿ ಪೊಲೀಸರು ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧನ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕೊಲೆಯಾದ ಹನುಮಂತಪ್ಪ ಅವರ ತಾಯಿ ಸುಜಾತಾ ಇಟಗಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದು, ನನ್ನ ಕಾಲಿನ ಸಮಸ್ಯೆ ಆಗಿದ್ದಕ್ಕೆ ನಾಲ್ಕು ವರ್ಷಗಳಿಂದ ನನ್ನ ಮಗ ಜೋಪಾನ ಮಾಡುತ್ತಿದ್ದ. ಅವನೇ ಅಡುಗೆ ಮಾಡಿ ಊಟ ಮಾಡಿಸುತ್ತಿದ್ದ. ಊರಿನಲ್ಲಿ ಎಲ್ಲರ ಜೊತೆಗೂ ಒಳ್ಳೆಯ ಸಂಬಂಧ ಹೊಂದಿದ್ದ. ಬಹಳ ಒಳ್ಳೆಯ ಹುಡುಗ ಇದ್ದ. ಯಾರ ಜೊತೆಯೂ ಜಗಳ ಮಾಡುತ್ತಿರಲಿಲ್ಲ. ಈ ವರ್ಷ ಮದುವೆ ಮಾಡಲು ಹುಡುಗಿ ನೋಡುತ್ತಿದ್ದೆವು. ಅಷ್ಟರೊಳಗೆ ಈ ರೀತಿ ಆಗಿದೆ. ಈಗ ನಮ್ಮನ್ನು ಅನಾಥ ಮಾಡಿ ಹೋದ. ಕೊಲೆ ಮಾಡಿರುವ ಆರೋಪಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಕೇತನ್ ಕೊಲೆ ಪ್ರಕರಣ: ತಪ್ಪಿತಸ್ಥಳಾದರೆ ಸಿಯಾಳಿಗೂ ಅದೇ ಶಿಕ್ಷೆ ಬೇಕು ಎಂದ ಪೋಷಕರು
ತ್ರಿವಳಿ ಕೊಲೆ ಆರೋಪಿಗಳ ಬಂಧನ
ಇಲ್ಲಿನ ಕೆಆರ್ ಪುರದ ಸಿಗೇಹಳ್ಳಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಮೂವರನ್ನು ನಾವೇ ಹತೈಗೈದಿರುವುದಾಗಿ ಆರೋಪಿಗಳಾದ ಶ್ವೇತಾ ಹಾಗೂ ಕೆನತ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಕಳೆದ ಸೋಮವಾರ ಕೌಟುಂಬಿಕ ಕಲಹದ ಹಿನ್ನೆಲೆ ಶ್ವೇತಾ ಮತ್ತು ಆಕೆಯ ಪ್ರಿಯಕರ ಕೆನತ್ ಸೇರಿಕೊಂಡು ಶ್ವೇತಾಳ ತಂದೆ ಸೋಮಸುಂದರ್, ತಾಯಿ ಮುತ್ತು ಲಕ್ಷ್ಮೀ ಮತ್ತು ಸಹೋದರಿ ಸುಪ್ರಿಯಾಳನ್ನು ತನ್ನ ಫ್ಲ್ಯಾಟ್‌ನಲ್ಲೇ ಬರ್ಬರವಾಗಿ ಇರಿದು ಕೊಲೆ ಮಾಡಿದ್ರು. ನಂತರ ಇಬ್ಬರನ್ನು ಪುದುಚೇರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.