ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anti National Post: ದೇಶ ವಿರೋಧಿ ಪೋಸ್ಟ್‌ ಮಾಡಿದ ಮಂಗಳೂರಿನ ವೈದ್ಯೆ ಕೆಲಸದಿಂದ ವಜಾ, ಕೇಸು

ಸಾಮಾಜಿಕ ಜಾಲತಾಣದಲ್ಲಿ ದೇಶ ವಿರೋಧಿ ಪೋಸ್ಟ್‌ ಹಾಕಿದ್ದ ಆರೋಪದಲ್ಲಿ ವೈದ್ಯೆ ಅಫೀಫಾ ಫಾತೀಮಾ ವಿರುದ್ಧ ಕೇಸ್ ದಾಖಲಾಗಿದೆ. ನೋಟಿಸ್ ನೀಡಿ, ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗ್ರವಾಲ್‌ ತಿಳಿಸಿದ್ದಾರೆ. ಆಸ್ಪತ್ರೆ ಆಡಳಿತ ಮಂಡಳಿ ವೈದ್ಯೆ ಅಫೀಫಾ ಫಾತೀಮಾ ಅವರನ್ನು ಹುದ್ದೆಯಿಂದ ವಜಾಗೊಳಿಸಿದೆ.

ದೇಶ ವಿರೋಧಿ ಪೋಸ್ಟ್‌ ಮಾಡಿದ ಮಂಗಳೂರಿನ ವೈದ್ಯೆ ಕೆಲಸದಿಂದ ವಜಾ, ಕೇಸು

ಹರೀಶ್‌ ಕೇರ ಹರೀಶ್‌ ಕೇರ May 1, 2025 3:16 PM

ಮಂಗಳೂರು: ಭಾರತ ವಿರೋಧಿ (Anti national post) ಹೇಳಿಕೆಗಳನ್ನು ತಮ್ಮ ಸೋಶಿಯಲ್‌ ಮೀಡಿಯಾ (Social media) ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿದ ಮಂಗಳೂರಿನ (Mangaluru news) ಖಾಸಗಿ ಆಸ್ಪತ್ರೆಯೊಂದರ ವೈದ್ಯೆಯ ಮೇಲೆ ಪೊಲೀಸ್‌ ಪ್ರಕರಣ ದಾಖಲಿಸಲಾಗಿದೆ. ಆಕೆಯನ್ನು ಕೆಲಸದಿಂದ ಆಸ್ಪತ್ರೆ ಆಡಳಿತ ಮಂಡಳಿ ತೆಗೆದುಹಾಕಿದೆ. ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಡಯಟಿಶಿಯನ್ ಆಗಿರುವ (Doctor) ಅಫೀಫಾ ಫಾತೀಮಾ ಎನ್ನುವ ಯುವತಿ, ಧರ್ಮ ಹಾಗೂ ದೇಶ ವಿರೋಧಿ ಪೋಸ್ಟ್ ಮಾಡಿದ್ದರು. ವಿವಾದಾತ್ಮಕ ಪೋಸ್ಟ್‌ ಹಿನ್ನೆಲೆಯಲ್ಲಿ ಹೈಲ್ಯಾಂಡ್‌ ಆಸ್ಪತ್ರೆ ಎಚ್‌.ಆರ್‌. ಅಧಿಕಾರಿ ಮಹಮ್ಮದ್‌ ಅಸ್ಲಾಂ ಅವರು ಅಫೀಫಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಕೇಸ್​ ದಾಖಲಾಗಿದೆ.

ಒಂದೆಡೆ ಜಮ್ಮು-ಕಾಶ್ಮೀರದ ಪೆಹಲ್ಗಾಮ್​ನಲ್ಲಿ ನಡೆದ ಉಗ್ರ ದಾಳಿಯಿಂದಾಗಿ ಭಾರತೀಯರಲ್ಲಿ ಪ್ರತೀಕಾರದ ಕಿಚ್ಚು ಉರಿಯುತ್ತಿದೆ; ಇಂಥ ಸಂದರ್ಭದಲ್ಲಿಯೇ ಕೆಲವರು ಈ ಥರದ ಪೋಸ್ಟ್‌ಗಳ ಮೂಲಕ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಎರಡು ದಿನಗಳ ಹಿಂದೆ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಿದ್ದಕ್ಕಾಗಿ ಮುಸ್ಲಿಂ ಯುವಕನೊಬ್ಬನನ್ನು ಮಂಗಳೂರಿನಲ್ಲಿಯೇ ಥಳಿಸಿ ಕೊಲ್ಲಲಾಗಿತ್ತು. ಇದೀಗ ವೈದ್ಯೆಯ ಸರದಿ.

ಸಾಮಾಜಿಕ ಜಾಲತಾಣದಲ್ಲಿ ದೇಶ ವಿರೋಧಿ ಪೋಸ್ಟ್‌ ಹಾಕಿದ್ದ ಆರೋಪದಲ್ಲಿ ವೈದ್ಯೆ ಅಫೀಫಾ ಫಾತೀಮಾ ವಿರುದ್ಧ ಕೇಸ್ ದಾಖಲಾಗಿದೆ. ನೋಟಿಸ್ ನೀಡಿ, ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗ್ರವಾಲ್‌ ತಿಳಿಸಿದ್ದಾರೆ. ವೈದ್ಯೆಯ ದೇಶ ವಿರೋಧಿ ಪೋಸ್ಟ್​ ಖಂಡಿಸಿ ವಿಹಿಂಪ ಮುಖಂಡ ಶರಣ್‌ ಪಂಪ್‌ವೆಲ್‌ ಆಕ್ರೋಶ ವ್ಯಕ್ತಪಡಿಸಿದ್ದರು. ಕೇಸು ದಾಖಲಿಸುವಂತೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಆಸ್ಪತ್ರೆ ಆಡಳಿತ ಮಂಡಳಿ ವೈದ್ಯೆ ಅಫೀಫಾ ಫಾತೀಮಾ ಅವರನ್ನು ಹುದ್ದೆಯಿಂದ ವಜಾಗೊಳಿಸಿದೆ.

ವಿವಾದಾತ್ಮಕ ಪೋಸ್ಟ್‌ ಹಿನ್ನೆಲೆಯಲ್ಲಿ ಹೈಲ್ಯಾಂಡ್‌ ಆಸ್ಪತ್ರೆ ಎಚ್‌.ಆರ್‌. ಅಧಿಕಾರಿ ಮಹಮ್ಮದ್‌ ಅಸ್ಲಾಂ ಅವರು ಅಫೀಫಾ ವಿರುದ್ಧ ಪೊಲೀಸ್‌ ದೂರು ನೀಡಿದ್ದಾರೆ. ಪಾಂಡೇಶ್ವರ ಠಾಣೆಯಲ್ಲಿ ಯುವತಿ ವಿರುದ್ಧ ಬಿಎನ್‌ಎಸ್‌ ಕಲಂ 196(1)ಎ, 353 (2)ಅಡಿಯಲ್ಲಿ ಕೇಸ್​ ದಾಖಲಾಗಿದೆ.

ಯುವತಿಯ ಪೋಸ್ಟ್‌ನಲ್ಲಿ ಏನಿದೆ?

HELP STINKY HINDUS BEHIND ME (ಕಾಪಾಡಿ, ಕೊಳಕು ಹಿಂದೂಗಳು ನನ್ನ ಹಿಂದೆ ಬಿದ್ದಿದ್ದಾರೆ), AM I INDIAN- YES, DO I HATE INDIA - YES, (ನಾನು ಭಾರತೀಯಳೇ- ಹೌದು, ನಾನು ಭಾರತವನ್ನು ದ್ವೇಷಿಸುತ್ತೇನೆಯೇ - ಹೌದು) ಎಂದು ಸಾಮಾಜಿಕ ಜಾಲತಾಣದಲ್ಲಿಅಫೀಫ ಫಾತೀಮಾ ಪೋಸ್ಟ್ ಮಾಡಿದ್ದರು. ಅಫೀಫ ಫಾತಿಮಾ ಅವರ ವಿವಾದಾತ್ಮಕ ಪೋಸ್ಟ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಯಿತು. ಅಫೀಫ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬಂದಿತ್ತು.

ಇದನ್ನೂ ಓದಿ: Pakistan Zindabad: ಮಂಗಳೂರಿನಲ್ಲಿ ಮುಸ್ಲಿಂ ಯುವಕನ ಹತ್ಯೆ; ಇನ್ಸ್‌ಪೆಕ್ಟರ್‌ ಸೇರಿ ಮೂವರು ಸಸ್ಪೆಂಡ್