ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಕ್ರಮವಾಗಿ 300 ಕೋಟಿ ರುಪಾಯಿ ವಹಿವಾಟು: ಹವಾಲಾ ಹಗರಣದಲ್ಲಿ ರ‍್ಯಾಪಿಡೋ ಚಾಲಕ

ಕೇವಲ 10,000 ರೂ. ಸಂಬಳ ಪಡೆಯುತ್ತಿದ್ದ ರಾಪಿಡೋ ಚಾಲಕನ ಖಾತೆ ಮೂಲಕ 300 ಕೋಟಿ ರೂ. ವಹಿವಾಟು ನಡೆಸಿರುವುದನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಹವಾಲಾ ಹಗರಣದಲ್ಲಿ ರಾಪಿಡೋ ಚಾಲಕನ ನಂಟು ಇರಬಹುದು ಎನ್ನುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.

ಹವಾಲಾ ಹಗರಣದಲ್ಲಿ ರ‍್ಯಾಪಿಡೋ ಚಾಲಕ

ಸಂಗ್ರಹ ಚಿತ್ರ -

ಬೆಂಗಳೂರು: ರಾಪಿಡೋ ಚಾಲಕನೊಬ್ಬ (Rapido driver) ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿರುವುದನ್ನು ಜಾರಿ ನಿರ್ದೇಶನಾಲಯ (Enforcement Directorate) ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಹವಾಲಾ ಹಗರಣದಲ್ಲಿ (hawala scam) ರಾಪಿಡೋ ಚಾಲಕ ನಂಟು ಹೊಂದಿರಬಹುದೆನ್ನುವ ಶಂಕೆಯಿಂದ ಅಧಿಕಾರಿಗಳು ತನಿಖಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ರೈಡ್-ಹೇಲಿಂಗ್ ಚಾಲಕ ಪ್ರದೀಪ್ ಓಡೆ ಅವರ ಬ್ಯಾಂಕ್ ಖಾತೆಯನ್ನು ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ಮತ್ತು ಷೇರು ಮಾರುಕಟ್ಟೆಗೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಮಾಡಲು ಬಳಸಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ತಿಂಗಳಿಗೆ ಕೇವಲ 10 ರಿಂದ 12 ಸಾವಿರ ರೂ. ಆದಾಯ ಗಳಿಸುವ ರಾಪಿಡೋ ಚಾಲಕನ ಬ್ಯಾಂಕ್ ಖಾತೆಯಿಂದ ಕೋಟ್ಯಂತರ ರೂಪಾಯಿ ಅಕ್ರಮವಾಗಿ ವರ್ಗಾವಣೆಯಾಗಿರುವುದನ್ನು ಪತ್ತೆ ಹಚ್ಚಿದ ತನಿಖಾ ಸಂಸ್ಥೆ ಅಧಿಕಾರಿಗಳು, ಈ ಹಣ ಅಹಮದಾಬಾದ್‌ನಲ್ಲಿ ಹವಾಲಾ ದಂಧೆಗೆ ಬಳಕೆಯಾಗಿರುವುದನ್ನು ಕಂಡು ಕೊಂಡಿದ್ದಾರೆ. ಸುಮಾರು 550 ಕೋಟಿ ರೂ. ಅನ್ನು ನಕಲಿ ಬ್ಯಾಂಕ್ ಖಾತೆಗಳಿಗೆ ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ವರ್ಗಾವಣೆ ಮಾಡಲಾಗಿದೆ.

Missing Case: ಪರೀಕ್ಷೆ ತಪ್ಪಿಸಿಕೊಳ್ಳಲು ಪಿಯುಸಿ ವಿದ್ಯಾರ್ಥಿನಿಯರು ನಾಪತ್ತೆ, ಒಂದು ತಿಂಗಳಾದರೂ ಪತ್ತೆಯಿಲ್ಲ

ಚಾಲಕ ಪ್ರದೀಪ್ ಓಡೆ ಖಾತೆಯಿಂದ 300 ಕೋಟಿ ರೂ. ಗೂ ಹೆಚ್ಚು ವಹಿವಾಟು ನಡೆದಿದ್ದು, ಈ ಕುರಿತು ತನಿಖೆ ನಡೆಸಿದಾಗ ಆತನಿಗೆ ಗೊತ್ತಿಲ್ಲದಂತೆ ಆತನ ಬ್ಯಾಂಕ್ ಖಾತೆಯನ್ನು ಬಳಸಲಾಗುತ್ತಿದೆ ಎಂಬುದನ್ನು ಇಡಿ ಅಧಿಕಾರಿಗಳು ಕಂಡುಕೊಂಡಿದ್ದಾರೆ.

ಈ ಕುರಿತು ಅಹಮದಾಬಾದ್ ಅಪರಾಧ ಶಾಖೆಯಲ್ಲಿ ದೂರು ದಾಖಲಿಸಿರುವ ಇಡಿ ಸಹಾಯಕ ನಿರ್ದೇಶಕರು ಬಳಿಕ ಓಡೆ ಅವರನ್ನು ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಆತ ತನ್ನ ಬ್ಯಾಂಕ್ ಖಾತೆಯನ್ನು ಕಿರಣ್ ಪರ್ಮಾರ್ ಎಂಬ ವ್ಯಕ್ತಿಗೆ 25,000 ರೂ. ಗೆ ಬಳಸಲು ನೀಡಿದ್ದಾಗಿ ತಿಳಿಸಿದ್ದಾರೆ. ಆತ ಸಹಿ ಮಾಡಿದ ಪ್ರತಿ ಚೆಕ್‌ಗೆ 400 ರೂ. ಗಳನ್ನು ಪಾವತಿಸಲಾಗಿದೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

ಓಡೆ ಅವರ ಗುರುತಿನ ದಾಖಲೆಗಳನ್ನು ಬಳಸಿಕೊಂಡು ಪ್ರದೀಪ್ ಎಂಟರ್‌ಪ್ರೈಸ್, ಕಮಲೇಶ್ ಟ್ರೇಡಿಂಗ್ ಮತ್ತು ರೌನಕ್ ಟ್ರೇಡರ್ಸ್ ಎಂಬ ನಕಲಿ ಸಂಸ್ಥೆಗಳನ್ನು ರಚಿಸಲಾಗಿದೆ. ಇದನ್ನು 2024 ರಲ್ಲಿ ನೋಂದಾಯಿಸಲಾಗಿದೆ. ಆದರೆ ಇದು ಯಾವುದೇ ವ್ಯವಹಾರ ನಡೆಸಿಲ್ಲ. ಬ್ಯಾಂಕ್ ಖಾತೆಗಳಲ್ಲಿ ಬೃಹತ್ ಠೇವಣಿಗಳನ್ನು ಇರಿಸಿ ವಹಿವಾಟಿನ ಭಾಗವಾಗಿ 80.50 ಕೋಟಿ ರೂ., 52.11 ಕೋಟಿ ರೂ. ಮತ್ತು 22.86 ಕೋಟಿ ರೂ.ಗಳನ್ನು ನಕಲಿ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ. ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ನಿಂದ ಬರುವ ಹಣವನ್ನು ವರ್ಗಾಯಿಸಲು ಈ ಖಾತೆಗಳನ್ನು ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Assault Case: ಖಮೇನಿ ಹತ್ಯೆ ಕುರಿತು ಸ್ಟೋರಿ ಹಾಕಿದ ಹಿಂದೂ ಯುವಕನ ಮೇಲೆ ಹಲ್ಲೆ

ಷೇರು ಮಾರುಕಟ್ಟೆಯಲ್ಲೂ ಕೂಡ ಅಕ್ರಮವಾಗಿ ಆದಾಯ ಗಳಿಸಲು ಇವರ ಖಾತೆಯನ್ನು ಬಳಸಲಾಗಿದೆ. ಶೇಖ್ ಮೊಯಿನ್, ಮೊಹಮ್ಮದ್ ಶಫಿ ಎಂಬ ಹೆಸರುಗಳಿರುವ ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆಯಾಗಿರುವುದನ್ನು ಕಂಡು ಕೊಂಡಿರುವ ಅಧಿಕಾರಿಗಳು ಇದರ ಜಾಲವನ್ನು ಭೇದಿಸಲು ಇಡಿ ತನಿಖೆಯನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.