ಹೈದರಾಬಾದ್: ಪ್ರಿಯಕರನೇ ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, 35 ವರ್ಷದ ನೌಕಾಪಡೆಯ (Murder Case) ಅಧಿಕಾರಿಯೊಬ್ಬರು ತನ್ನ ಪ್ರಿಯತಮೆಯನ್ನು ಕೊಂದು, ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ, ಅವಶೇಷಗಳನ್ನು ವಿಲೇವಾರಿ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೃತ ಯುವತಿಯನ್ನು ಮೌನಿಕಾ ಎಂದು ಗುರುತಿಸಲಾಗಿದೆ.
ಭಾರತೀಯ ನೌಕಾ ಹಡಗು (ಐಎನ್‌ಎಸ್) ದೇಗಾದಲ್ಲಿ ನಿಯೋಜಿತರಾಗಿರುವ ನೌಕಾಪಡೆಯ ಅಧಿಕಾರಿ ಚಿಂತಾದ ರವೀಂದ್ರ, 2021 ರಲ್ಲಿ ಡೇಟಿಂಗ್ ಆ್ಯಪ್‌ನಲ್ಲಿ ಭೇಟಿಯಾದ 29 ವರ್ಷದ ಪೋಲಿಪಲ್ಲಿ ಮೌನಿಕಾ ಅವರೊಂದಿಗೆ ಪ್ರೇಮ ಸಂಬಂಧವನ್ನು ಹೊಂದಿದ್ದರು.
ರವೀಂದ್ರಗೆ ಆಗಲೇ ಮದುವೆಯಾಗಿದ್ದರೂ ಸಹ ಯುವತಿಯನ್ನು ಆಗಾಗ್ಗೆ ವಿಶಾಖಪಟ್ಟಣಂನ ವಿವಿಧ ಸ್ಥಳಗಳಲ್ಲಿ ಭೇಟಿಯಾಗುತ್ತಿದ್ದರು. ಹೆಂಡತಿ ಇಲ್ಲದ ಸಮಯದಲ್ಲಿ ರವೀಂದ್ರ ಮೌನಿಕಾಳನ್ನು ಮನೆಗೆ ಆಹ್ವಾನಿಸಿದ್ದ. ಕೆಲ ವಿಷಯಗಳ ಬಗ್ಗೆ ಅವರಿಬ್ಬರ ನಡುವೆ ಕಲಹ ಉಂಟಾಗಿದೆ. ಸಿಟ್ಟಲ್ಲಿ ರವೀಂದ್ರ ಮೌನಿಕಾಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಮೌನಿಕಾ ಸಾವನ್ನಪ್ಪಿದ್ದಾಳೆ. ಆಕೆಯ ಮೃತದೇಹವನ್ನು ರವೀಂದ್ರ ತುಂಡು ತುಂಡಾಗಿ ಕತ್ತರಿಸಿ ಚೀಲದಲ್ಲಿ ಪ್ಯಾಕ್ ಮಾಡಿ ರೆಫ್ರಿಜರೇಟರ್‌ನಲ್ಲಿ ಇಟ್ಟಿರುವುದು ತಿಳಿದು ಬಂದಿದೆ.
ಕೊಲೆ ಮಾಡಿದ ಬಳಿಕ ಆತನೇ ಪೊಲೀಸ್ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡಿದ್ದಾನೆ. ಮೌನಿಕಾ ತನ್ನಿಂದ 3.5 ಲಕ್ಷ ರೂ.ಗಳನ್ನು ಪಡೆದಿದ್ದಳು ಮತ್ತು ತನ್ನ ಹೆಂಡತಿಗೆ ತಮ್ಮ ಸಂಬಂಧವನ್ನು ಬಹಿರಂಗಪಡಿಸುವುದಾಗಿ ಆಗಾಗ್ಗೆ ಬೆದರಿಕೆ ಹಾಕುತ್ತಿದ್ದಳು ಎಂದು ರವೀಂದ್ರ ತಿಳಿಸಿದ್ದಾನೆ. ಪೊಲೀಸರು ಅಪರಾಧ ಸ್ಥಳಕ್ಕೆ ಧಾವಿಸಿದಾಗ, ರೆಫ್ರಿಜರೇಟರ್ ಮತ್ತು ಮನೆಯೊಳಗೆ ಕತ್ತರಿಸಿದ ದೇಹದ ಭಾಗಗಳು ಕಂಡುಬಂದವು. ಮೌನಿಕಾಳ ತಲೆ ಕಾಣೆಯಾಗಿತ್ತು. ರವೀಂದ್ರ ಅದನ್ನು ಬೇರೆ ಸ್ಥಳದಲ್ಲಿ ವಿಲೇವಾರಿ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಕಾಣೆಯಾದ ದೇಹದ ಭಾಗಗಳನ್ನು ಹುಡುಕಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ. ಕೊಲೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಅಕ್ರಮ ಸಂಬಂಧಕ್ಕೆ ಕೊಲೆ
ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸಿ ಜಗಳ ಮಾಡಿದ್ದಕ್ಕೆ ವ್ಯಕ್ತಿಯನ್ನು ಕೊಲೆ ಮಾಡಿ, ಅದನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಿದ ಆರೋಪದಡಿ ಕೊಲೆಯಾದವನ ಪತ್ನಿ ಸೇರಿ ಮೂವರ ವಿರುದ್ಧ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಮನಳ್ಳಿ ತಾಂಡಾದ ಆಟೊ ಚಾಲಕ ಸಾಗರ್ ಬಾಬು ರಾಠೋಡ (28) ಕೊಲೆಯಾದವರು. ಕೊಲೆಗೆ ಕುಮ್ಮಕ್ಕು ನೀಡಿದ ಆರೋಪದಡಿ ಸಾಗರ್ ಪತ್ನಿ ಪೂಜಾ ಹಾಗೂ ಕೊಲೆಗೈದ ಆಪಾದನೆಯಡಿ ಅದೇ ತಾಂಡಾದ ರೆಡ್ಡಿ ಬಲರಾಮ ರಾಠೋಡ ಹಾಗೂ ಆತನ ಸ್ನೇಹಿತ ಮಹೇಶ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.