ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಸೀದಿಯೊಳಗೆ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಮೌಲ್ವಿಗೆ ಜೀವಾವಧಿ ಶಿಕ್ಷೆ

Maulvi Sentenced to Life Imprisonment: ಉತ್ತರ ಪ್ರದೇಶದ ಹಮೀರ್‌ಪುರದ ವಿಶೇಷ ಪೋಕ್ಸೋ ನ್ಯಾಯಾಲಯವು ಮಸೀದಿ ಆವರಣದೊಳಗೆ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಧರ್ಮಗುರುವಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಪರಾಧಿ ಮುಂತಜಿರ್ ಆಲಂಗೆ 26,000 ರುಪಾಯಿ ದಂಡವನ್ನು ಸಹ ವಿಧಿಸಲಾಗಿದೆ.

ಮಸೀದಿಯೊಳಗೆ ಅತ್ಯಾಚಾರ ಎಸಗಿದ ಮೌಲಿ ಮುಂತಜಿರ್ ಆಲಂ ಮತ್ತು ಸಾಂದರ್ಭಿಕ ಚಿತ್ರ

ಲಖನೌ, ಮೇ 24: ಉತ್ತರ ಪ್ರದೇಶದ (Uttar Pradesh) ಹಮೀರ್‌ಪುರದ ವಿಶೇಷ ಪೋಕ್ಸೋ ನ್ಯಾಯಾಲಯವು ಮಸೀದಿ ಆವರಣದೊಳಗೆ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಸೀದಿಯ ಧರ್ಮಗುರುವಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಪರಾಧಿ ಮುಂತಜಿರ್ ಆಲಂಗೆ 26,000 ರುಪಾಯಿ ದಂಡ ವಿಧಿಸಲಾಗಿದೆ. ಪೋಕ್ಸೋ ನ್ಯಾಯಾಲಯದ ವಿಶೇಷ ಸೆಷನ್ಸ್ ನ್ಯಾಯಾಧೀಶ ಅನಿಲ್ ಕುಮಾರ್ ಖರ್ವಾರ್ ಈ ಆದೇಶ ನೀಡಿದ್ದಾರೆ (Crime News).

ಸರ್ಕಾರಿ ವಕೀಲ ರುದ್ರ ಪ್ರತಾಪ್ ಸಿಂಗ್ ಅವರ ಪ್ರಕಾರ, ಅತ್ಯಾಚಾರ 2023ರ ನವೆಂಬರ್ 29ರ ಬೆಳಗ್ಗೆ ಕುರಾರಾ ಪೊಲೀಸ್ ವ್ಯಾಪ್ತಿಯ ಹಳ್ಳಿಯಲ್ಲಿ ನಡೆದಿದೆ. 11 ವರ್ಷದ ಬಾಲಕಿ ಮತ್ತು ಆಕೆಯ 10 ವರ್ಷದ ಸಹೋದರ ಆಲಂ ದಿನನಿತ್ಯದ ಪಾಠಕ್ಕಾಗಿ ಗ್ರಾಮದ ಮಸೀದಿಗೆ ಹೋಗಿದ್ದರು.

ತರಗತಿ ಮುಗಿದ ಬಳಿಕ ಮೌಲ್ವಿ ಮುಂತಜಿರ್ ಆಲಂ ಇತರ ಮಕ್ಕಳನ್ನು ಬೇಗನೆ ಮನೆಗೆ ಕಳುಹಿಸಿದ್ದ. ನಂತರ ಅವನು ಬಾಲಕಿಯ ಸಹೋದರನಿಗೆ ಹೊರಗಿದ್ದ ಪಾತ್ರೆಗಳನ್ನು ತೊಳೆಯುವಂತೆ, ನೆಲವನ್ನು ಗುಡಿಸುವಂತೆ ಆದೇಶಿಸಿದ್ದ. ಆಕೆ ಒಬ್ಬಂಟಿಯಾಗಿದ್ದಾಗ ಆಲಂ ಅವಳನ್ನು ಬಲವಂತವಾಗಿ ಹಾಸಿಗೆಗೆ ಎಳೆದುಕೊಂಡು ಹೋಗಿ ದೌರ್ಜನ್ಯ ಎಸಗಿದ್ದ.

4 ವರ್ಷಗಳ ಕಾಲ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಬಾಕ್ಸಿಂಗ್ ಕೋಚ್ ವಿರುದ್ಧ ದೂರು

ಬಳಿಕ ಆತನ ಹಿಡಿತದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಬಾಲಕಿ, ಮನೆಗೆ ತಲುಪಿ ತನ್ನ ಅಜ್ಜಿಗೆ ನಡೆದ ಘಟನೆಯನ್ನು ವಿವರಿಸಿದಳು. ಅಪರಾಧದ ಗಂಭೀರತೆಯನ್ನು ಅರಿತುಕೊಂಡ ಆಕೆಯ ಚಿಕ್ಕಪ್ಪ ಕುರಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಪೊಲೀಸರು, ಭಾರತೀಯ ನ್ಯಾಯ ಸಂಹಿತೆ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡರು. ಕೂಲಂಕಷ ತನಿಖೆಯ ನಂತರ, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಯಿತು.

ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರ

ತೆಲಂಗಾಣದಲ್ಲಿ 20 ವರ್ಷದ ಸಹಪಾಠಿಗೆ ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ತೃತೀಯ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಉದಯ್ ಕುಮಾರ್ ಮತ್ತು ಸಂತ್ರಸ್ತೆ ಇಬ್ಬರೂ ಇಬ್ರಾಹಿಂಪಟ್ನಂ ಪ್ರದೇಶದ ಪ್ರಮುಖ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಇಬ್ಬರಿಗೂ ಮೊದಲಿನಿಂದಲೂ ಪರಿಚಯವಿತ್ತು ಎನ್ನಲಾಗಿದೆ.

ಮೇ 14ರಂದು ಅತ್ಯಾಚಾರ ಎಸಗಲಾಗಿತ್ತು. ಆರೋಪಿಯು ಚಹಾ ಕುಡಿಯಲು ಬರುವಂತೆ ಸಹಪಾಠಿಯನ್ನು ದಿಲ್‌ಸುಖ್‌ನಗರಕ್ಕೆ ಆಹ್ವಾನಿಸಿದ್ದ. ಅಲ್ಲಿಂದ ಹಾಸ್ಟೆಲ್‌ಗೆ ಹಿಂದಿರುಗುವಾಗ, ಉದಯ್ ಕುಮಾರ್ ಮದ್ಯ ಖರೀದಿಸಿ ಬಿಡಿಎಲ್ ರಸ್ತೆಯತ್ತ ತೆರಳಿದ್ದಾನೆ. ನಂತರ ನಿರ್ಜನ ಪ್ರದೇಶದಲ್ಲಿ ಯುವತಿಗೆ ಬಲವಂತವಾಗಿ ಮದ್ಯ ಕುಡಿಸಿದ್ದಾನೆ. ಬಳಿಕ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿದ್ದ ಯುವತಿಯನ್ನು ರಾತ್ರಿ ತಂಗುವ ನೆಪದಲ್ಲಿ ಇಬ್ರಾಹಿಂಪಟ್ನಂನಲ್ಲಿರುವ ತನ್ನ ಸ್ನೇಹಿತನ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ.