ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೀರತ್ ಬ್ಲೂ ಡ್ರಮ್ ಕೇಸ್: ಜಿಲ್ಲಾ ನ್ಯಾಯಾಲಯದ ಗಲ್ಲು ಶಿಕ್ಷೆ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಮುಸ್ಕಾನ್-ಸಾಹಿಲ್!

2025ರ ಮಾರ್ಚ್ ತಿಂಗಳಲ್ಲಿ ನಡೆದಿರುವ ವ್ಯಾಪಾರಿ ನೌಕಾ ಅಧಿಕಾರಿ ಸೌರಭ್ ರಜಪೂತ್ ಹತ್ಯೆ ಪ್ರಕರಣದ ಆರೋಪಿಗಳಾಗಿರುವ ಮುಸ್ಕಾನ್ ರಸ್ತೋಗಿ, ಸಾಹಿಲ್ ಶುಕ್ಲಾ ಅವರಿಗೆ ವಿಧಿಸಲಾದ ಮರಣದಂಡನೆಯನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಆರೋಪಿಗಳ ಪರ ವಕೀಲರ ತಂಡ ಮುಸ್ಕಾನ್ ರಸ್ತೋಗಿ, ಸಾಹಿಲ್ ಶುಕ್ಲಾ ಪರ ಸರಿಯಾದ ಸಾಕ್ಷ್ಯಗಳು ಇಲ್ಲ ಎಂದು ವಾದಿಸಿವೆ.

ಸಂಗ್ರಹ ಚಿತ್ರ

ಉತ್ತರ ಪ್ರದೇಶ: ಮೀರತ್ ಬ್ಲೂ ಡ್ರಮ್ ಕೊಲೆ (Meerut Blue Drum Murder Case) ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ಮುಸ್ಕಾನ್ ರಸ್ತೋಗಿ (Muskan Rastogi), ಸಾಹಿಲ್ ಶುಕ್ಲಾ (Sahil Shukla) ಅವರಿಗೆ ವಿಧಿಸಲಾದ ಮರಣದಂಡನೆಯನ್ನು (Death Sentence) ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ಗೆ (Allahabad High Court) ಮೇಲ್ಮನವಿ ಸಲ್ಲಿಸಲಾಗಿದೆ. 2025ರ ಮಾರ್ಚ್ ತಿಂಗಳಲ್ಲಿ ನಡೆದಿರುವ ವ್ಯಾಪಾರಿ ನೌಕಾ ಅಧಿಕಾರಿ ಸೌರಭ್ ರಜಪೂತ್ ಹತ್ಯೆ (Saurabh Rajput murder case) ಪ್ರಕರಣಕ್ಕೆ ಸಂಬಂಧಿಸಿ ಮುಸ್ಕಾನ್ ರಸ್ತೋಗಿ, ಸಾಹಿಲ್ ಶುಕ್ಲಾ ಅವರ ವಿರುದ್ಧ ಸರಿಯಾದ ಸಾಕ್ಷ್ಯಗಳು ಇಲ್ಲ ಎಂದು ವಾದಿಸಿ ಅವರ ಪರ ವಕೀಲರು ಮೇಲ್ಮನವಿ ಸಲ್ಲಿಸಿದ್ದಾರೆ.

ಬ್ಲೂ ಡ್ರಮ್ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಮುಸ್ಕಾನ್ ರಸ್ತೋಗಿ ಮತ್ತು ಸಾಹಿಲ್ ಶುಕ್ಲಾ ಅವರಿಗೆ ಮರಣದಂಡನೆಯನ್ನು ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅವರ ಪರ ವಕೀಲರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಜಂಟಿಯಾಗಿ ಮೇಲ್ಮನವಿ ಸಲ್ಲಿಸಿದ್ದಾರೆ.

Tiger shroff: ಇನ್ನೂ ಗುಂಡಿನ ದಾಳಿಯ ಶಾಕ್‌ನಲ್ಲಿಯೇ ಇದ್ದಾರಾ ಟೈಗರ್ ಶ್ರಾಫ್?

ಸೌರಭ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೀರತ್ ಜಿಲ್ಲಾ ವಿಚಾರಣಾ ನ್ಯಾಯಾಲಯವು ಮುಸ್ಕಾನ್ ಮತ್ತು ಸಾಹಿಲ್ ಗೆ ಮರಣದಂಡನೆ ಮತ್ತು ತಲಾ 50,000 ರೂ. ದಂಡ ವಿಧಿಸಿದ್ದು, ಅವರ ಪರ ಹಿರಿಯ ರಕ್ಷಣಾ ವಕೀಲರ ತಂಡವು ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಮತ್ತು ಎಲ್ಲಾ ಆರೋಪಗಳಿಂದ ಅವರನ್ನು ಖುಲಾಸೆಗೊಳಿಸುವಂತೆ ಹೈಕೋರ್ಟ್ ಅನ್ನು ಒತ್ತಾಯಿಸಿದ್ದಾರೆ.

ಅರ್ಜಿಯಲ್ಲಿ ಮೇಲ್ಮನವಿದಾರರು ವಿಚಾರಣಾ ನ್ಯಾಯಾಲಯದ ಶಿಕ್ಷೆಯ ತೀರ್ಪು ಕಾನೂನುಬಾಹಿರವಾಗಿದೆ. ಊಹಾಪೋಹಗಳ ಮೇಲೆ ಆಧಾರಿತವಾಗಿದೆ. ಸಂಪೂರ್ಣ ಪ್ರಾಸಿಕ್ಯೂಷನ್ ನಿರೂಪಣೆಯು ಸಾಂದರ್ಭಿಕ ಸಾಕ್ಷ್ಯಗಳ ಮೇಲೆ ಮಾತ್ರ ನಿಂತಿದೆ ಎಂದು ಹೇಳಿದ್ದಾರೆ.

ಅಪರಾಧಕ್ಕೆ ಬಳಕೆ ಮಾಡಲಾಗಿದೆ ಎನ್ನಲಾದ ವಸ್ತುಗಳ ದಾಖಲೆಗಳಿಗೆ ಸಂಬಂಧಿಸಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು ಅಥವಾ ಮಾನ್ಯ ಅಂಗಡಿ ರಶೀದಿಗಳಂತಹ ದೃಢೀಕರಣ ಪುರಾವೆಗಳನ್ನು ನೀಡಲು ವಿಫಲರಾಗಿದ್ದಾರೆ. ಎಲೆಕ್ಟ್ರಾನಿಕ್ ದಾಖಲೆಗಳನ್ನು ಮೌಲ್ಯೀಕರಿಸಲು ಪುರಾವೆ ಕಾನೂನಿನಡಿಯಲ್ಲಿ ಅಗತ್ಯವಿರುವ ಶಾಸನಬದ್ಧ ಪ್ರಮಾಣಪತ್ರಗಳು ಕೂಡ ಇರಲಿಲ್ಲ ಎಂದು ಉಲ್ಲೇಖಿಸಿದ್ದಾರೆ.

KPSC ಹಗರಣ; IAS ಅಧಿಕಾರಿ ಜ್ಞಾನೇಂದ್ರ ಕುಮಾರ್‌ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಸರ್ಕಾರ

ಮೀರತ್‌ನ ಚೌಧರಿ ಚರಣ್ ಸಿಂಗ್ ಜೈಲಿನಲ್ಲಿರುವ ಇಬ್ಬರೂ ಆರೋಪಿಗಳು ಮುಂದಿನ ವಾರ ಅಲಹಾಬಾದ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆಗೆ ಸಂಬಂಧಿಸಿ ವಿಭಾಗೀಯ ಪೀಠದ ಮುಂದೆ ಹಾಜರಾಗಲಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author