ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಪ್ರೀತಿ ಮಾಡಬೇಡ ಹೇಳಿದ್ದೇ ತಪ್ಪಾಯ್ತಾ? ಹೆತ್ತ ತಾಯಿಯನ್ನು ಕೊಂದ ಅಪ್ರಾಪ್ತ ಮಗಳು

ಪ್ರೀತಿ ಮಾಡಬೇಡ ಎಂದು ಬುದ್ಧಿ ಹೇಳಿದ ತಾಯಿಯನ್ನೇ ಮಗಳು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದಿದೆ. ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಉತ್ತರಹಳ್ಳಿಯಲ್ಲಿ ಅಪ್ರಾಪ್ತ ಮಗಳೇ ತನ್ನ ತಾಯಿ ನೇತ್ರಾವತಿಯನ್ನು ಹತ್ಯೆಗೈದಿದ್ದಾಳೆ. ಪೊಲೀಸರಿಗೆ ಅನುಮಾನ ಬಂದು, ವಿಚಾರಣೆ ನಡೆಸಿದಾಗ, ತಾಯಿ ನೇತ್ರಾವತಿಯನ್ನು ಅಪ್ರಾಪ್ತ ಮಗಳೇ ತನ್ನ ಪ್ರಿಯಕರ ಹಾಗೂ ಗೆಳೆಯರ ಜೊತೆ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಮಗಳೇ ತಾಯಿಯನ್ನು ಹತ್ಯೆ ಮಾಡಿದ್ದಾಳೆ ಎಂಬುದು ತನಿಖೆಯಿಂದ ಗೊತ್ತಾಗಿದೆ.

ಬೆಂಗಳೂರು: ಪ್ರೀತಿ ಮಾಡಬೇಡ ಎಂದು ಬುದ್ಧಿ ಹೇಳಿದ ತಾಯಿಯನ್ನೇ ಮಗಳು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ (Bengalore) ಉತ್ತರಹಳ್ಳಿಯಲ್ಲಿ ನಡೆದಿದೆ. ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಉತ್ತರಹಳ್ಳಿಯಲ್ಲಿ (Murder Case) ಅಪ್ರಾಪ್ತ ಮಗಳೇ ತನ್ನ ತಾಯಿ ನೇತ್ರಾವತಿಯನ್ನು ಹತ್ಯೆಗೈದಿದ್ದಾಳೆ. ಮಗಳು ಚಿಕ್ಕ ವಯಸ್ಸಿನಲ್ಲಿ ಪ್ರೀತಿ, ಗೀತಿ ಅಂತ ಹುಡುಗನ ಜೊತೆ ಓಡಾಡುವುದನ್ನು ನೋಡಿದ ತಾಯಿ ಮಗಳಿಗೆ ಬುದ್ದಿವಾದ ಹೇಳಿದ್ದಾಳೆ. ಇಷ್ಟಕ್ಕೇ ಸಿಟ್ಟಿಗೆದ್ದ ಮಗಳು ತನ್ನ ಪ್ರಿಯಕರನೊಟ್ಟಿಗೆ ಸೇರಿ ತಾಯಿಯನ್ನು ಹತ್ಯೆ ಮಾಡಿದ್ದಾಳೆ. ಇದೀಗ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಗಳು ಹಾಗೂ ನಾಲ್ವರು ಯುವಕರು ಸೇರಿ ನೇತ್ರಾವತಿಯನ್ನು ಕೊಲೆ ಮಾಡಿದ್ದರು. ಬಳಿಕ ಆತ್ಮಹತ್ಯೆ ಎಂದು ಬಿಂಬಿಸಲು ಶವಕ್ಕೆ ನೇಣು ಹಾಕಿದ್ದರು. ಸುಬ್ರಮಣ್ಯಪುರದ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ನೇತ್ರಾವತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ನೇತ್ರಾವತಿ ಸಾವು ಅನ್ನು ಆತ್ಮಹತ್ಯೆ ಎಂದು ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.

ಆದರೇ, ನೇತ್ರಾವತಿಯ ಶವ ಸಂಸ್ಕಾರ ಆದ ಬಳಿಕ ಮಗಳು ಮನೆಯಲ್ಲಿ ಇರಲಿಲ್ಲ. ತನ್ನ ತಂಗಿ ಸಾವಿನ ಬಳಿಕ ಮಗಳು ಎಲ್ಲೂ ಕಾಣಿಸುತ್ತಿಲ್ಲ ಎಂದು ನೇತ್ರಾವತಿಯ ಅಕ್ಕ ಅನಿತಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನೇತ್ರಾವತಿ ಸಾವನ್ನಪ್ಪಿದ 2 ದಿನದ ಬಳಿಕ ಮಗಳು ಮನೆಗೆ ವಾಪಸ್ ಬಂದಿದ್ದಳು.

ಪೊಲೀಸರಿಗೆ ಅನುಮಾನ ಬಂದು, ವಿಚಾರಣೆ ನಡೆಸಿದಾಗ, ತಾಯಿ ನೇತ್ರಾವತಿಯನ್ನು ಅಪ್ರಾಪ್ತ ಮಗಳೇ ತನ್ನ ಪ್ರಿಯಕರ ಹಾಗೂ ಗೆಳೆಯರ ಜೊತೆ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಮಗಳೇ ತಾಯಿಯನ್ನು ಹತ್ಯೆ ಮಾಡಿದ್ದಾಳೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಮಗಳು ಓರ್ವ ಯುವಕನನ್ನ ಪ್ರೀತಿ ಮಾಡುತ್ತಿರುವ ವಿಷಯ ಗೊತ್ತಾದ ಬಳಿಕ ನೇತ್ರಾವತಿ ಮಗಳಿಗೆ ಬುದ್ಧಿ ಹೇಳಿದ್ದಳು. ಆದರೆ ಆಕೆ ಮತ್ತೆ ಅದನ್ನೇ ಮುಂದುವರಿಸಿದ್ದಳು ಶನಿವಾರ ರಾತ್ರಿ ಕೂಡ ಮನೆಗೆ ಪ್ರಿಯಕರನ ಜೊತೆ ಬಂದಿದ್ದಳು. ಪ್ರಿಯಕರನ ಮೂವರು ಸ್ನೇಹಿತರು ಕೂಡ ಮನೆಗೆ ಬಂದಿದ್ರು. ಶನಿವಾರ ರಾತ್ರಿ 11 ಗಂಟೆಗೆ ಮಲಗಿದ್ದ ನೇತ್ರಾವತಿಗೆ ಎಚ್ಚರವಾಗಿದೆ. ಈ ವೇಳೆ‌ ಮಗಳ ಸಹವಾಸ ಕಂಡು ಬೈದು ಜಗಳ ಆಡಿದ್ದಳು.

ಈ ಸುದ್ದಿಯನ್ನೂ ಓದಿ: Missing Case: 2023ರಲ್ಲಿಯೇ ಕೊಲೆಯಾಗಿದ್ದಾಳೆಂದು ಭಾವಿಸಲಾಗಿದ್ದ ಮಹಿಳೆ ಮನೆಗೆ ವಾಪಸ್‌, ಆಕೆಯ ಕೊಲೆ ಆರೋಪದ ಮೇಲೆ ಜೈಲಿನಲ್ಲಿರುವ ನಾಲ್ವರು

ಇದರಿಂದ ಕೋಪಗೊಂಡ ಮಗಳು ಮತ್ತು ಸ್ನೇಹಿತರು ಜಗಳ ಮಾಡಿದ್ದಾರೆ. ಜಗಳದ ವೇಳೆ ಬಲವಂತವಾಗಿ ನೇತ್ರಾವತಿ ಬಾಯಿ ಮುಚ್ಚಿದ್ದಾರೆ. ಬಳಿಕ ಟವಲ್ ನಿಂದ ನೇತ್ರಾವತಿ ಕುತ್ತಿಗೆ ಬಿಗಿದಾಗ ಉಸಿರು ನಿಂತಿದೆ. ನೇತ್ರಾವತಿ ಕೊಲೆಯಾಗಿದ್ದನ್ನ ನೋಡಿ ಗಾಬರಿಯಾದ ಅಪ್ರಾಪ್ತರ ಟೀಂ, ತಕ್ಷಣವೇ ನೇತ್ರಾವತಿ ಕತ್ತಿಗೆ ಸೀರೆ ಬಿಗಿದು ಫ್ಯಾನಿಗೆ ನೇತುಹಾಕಿದ್ದಾರೆ. ನಂತರ ಮನೆ ಲಾಕ್ ಮಾಡಿ ಮಗಳು ಮತ್ತು ಸ್ನೇಹಿತರು ಎಸ್ಕೇಪ್ ಆಗಿದ್ದರು.