Missing Case: 2023ರಲ್ಲಿಯೇ ಕೊಲೆಯಾಗಿದ್ದಾಳೆಂದು ಭಾವಿಸಲಾಗಿದ್ದ ಮಹಿಳೆ ಮನೆಗೆ ವಾಪಸ್, ಆಕೆಯ ಕೊಲೆ ಆರೋಪದ ಮೇಲೆ ಜೈಲಿನಲ್ಲಿರುವ ನಾಲ್ವರು
Missing Woman: 2023ರಲ್ಲಿ ಕೊಲೆಯಾಗಿದ್ದಾಳೆಂದು ಪರಿಗಣಿಸಲ್ಪಟ್ಟಿದ್ದ ಮಹಿಳೆಯೊಬ್ಬರು ಏಕಾಏಕಿ ಮಾರ್ಚ್ 11ರಂದು ತನ್ನ ಮನೆಗೆ ಹಿಂದಿರುಗಿದ ಘಟನೆ ಮಧ್ಯಪ್ರದೇಶದ ಮಂದ್ಸೌರ್ ಜಿಲ್ಲೆಯಲ್ಲಿ ನಡೆದಿದೆ. ವಿಚಿತ್ರವೆಂದರೆ, ಈ ಮಹಿಳೆಯನ್ನು ಕೊಂದ ಆರೋಪದ ಮೇಲೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಅವರು ಈಗಲೂ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.


ಭೋಪಾಲ್: 2023ರಲ್ಲಿ ಕೊಲೆ(Murder)ಯಾಗಿದ್ದಾಳೆಂದು ಪರಿಗಣಿಸಲ್ಪಟ್ಟಿದ್ದ ಮಹಿಳೆಯೊಬ್ಬರು ಏಕಾಏಕಿ ಮಾರ್ಚ್ 11ರಂದು ತನ್ನ ಮನೆಗೆ ಹಿಂದಿರುಗಿದ ಘಟನೆ ಮಧ್ಯಪ್ರದೇಶ(Missing Case) ದ ಮಂದ್ಸೌರ್(Mandsaur) ಜಿಲ್ಲೆಯಲ್ಲಿ( District ) ನಡೆದಿದೆ. ವಿಚಿತ್ರವೆಂದರೆ, ಈ ಮಹಿಳೆಯನ್ನು ಕೊಂದ ಆರೋಪದ ಮೇಲೆ ಪೊಲೀಸ(Police)ರು ನಾಲ್ವರನ್ನು ಬಂಧಿಸಿದ್ದು, ಅವರು ಈಗಲೂ ಜೈಲಿನಲ್ಲಿ( prison ) ಶಿಕ್ಷೆ ಅನುಭವಿಸುತ್ತಿದ್ದಾರೆ. 35 ವರ್ಷದ ಲಲಿತಾ ಬಾಯಿ(Lalita Bai) ಎಂಬ ಮಹಿಳೆ ಸೆಪ್ಟೆಂಬರ್ 2023 ರಲ್ಲಿ ಮಂದ್ಸೌರ್‌ನ ಗಾಂಧಿ ಸಾಗರ್ ಪ್ರದೇಶದಿಂದ ನಾಪತ್ತೆಯಾಗಿದ್ದರು, ನಂತರ ಮಧ್ಯಪ್ರದೇಶದ ಝಬುವಾದ ಥಾಂಡ್ಲಾ ಪಟ್ಟಣದಲ್ಲಿ ಅವರ "ಕೊಲೆ" ಪ್ರಕರಣ ದಾಖಲಾಗಿತ್ತು. ತಲೆ ಪುಡಿಪುಡಿಯಾದ ದೇಹವೊಂದು ಪತ್ತೆಯಾದ ಬಳಿಕ ಪೊಲೀಸರು ಲಲಿತಾ ಬಾಯಿ ಸಂಬಂಧಿಕರನ್ನು ಕರೆದು ಮೃತದೇಹದ ಗುರುತು ಪತ್ತೆ ಹಚ್ಚಲು ಹೇಳಿದ್ದಾರೆ.
ಈ ವೇಳೆ, ಶವದ ಮೇಲಿದ್ದ ಹಚ್ಚೆಯನ್ನು ನೋಡಿದ ಸಂಬಂಧಿಕರು ಅದು ಲಲಿತಾ ಬಾಯಿ ಶವವೆಂದು ಪೊಲೀಸರಿಗೆ ಹೇಳಿದ್ದಾಗಿ ಎಂದು ಗಾಂಧಿ ಸಾಗರ್ ಪೊಲೀಸ್ ಠಾಣೆಯ ಉಸ್ತುವಾರಿ ತರುಣ ಭಾರದ್ವಾಜ್ ತಿಳಿಸಿದ್ದಾರೆ. "ನಾವು ನಾಪತ್ತೆಯ ಲಲಿತಾ ಬಾಯಿ ಕುರಿತು ದೂರು ಸಲ್ಲಿಸಿದ ನಂತರ, ಥಾಂಡ್ಲಾ ಪೊಲೀಸರು ತಲೆ ಜಜ್ಜಿ ಹೋದ ಮಹಿಳೆಯ ಶವ ಪತ್ತೆಯಾಗಿದೆ ಎಂದು ನಮಗೆ ಮಾಹಿತಿ ನೀಡಿದರು. ನಾವು ಅಲ್ಲಿಗೆ ಹೋಗಿ ಹಚ್ಚೆ ಮತ್ತು ಕಾಲಿಗೆ ಕಟ್ಟಲಾಗಿದ್ದ ಕಪ್ಪು ದಾರದ ಆಧಾರದ ಮೇಲೆ ಅದು ನಮ್ಮ ಮಗಳ ಶವ ಎಂದು ಗುರುತಿಸಿದೆವು. ಆ ಶವದ ಅಂತ್ಯಕ್ರಿಯೆಯನ್ನೂ ನಡೆಸಿದ್ದೇವೆ" ಎಂದು ಲಲಿತಾ ಅವರ ತಂದೆ ನನುರಾಮ್ ಬಂಚಡಾ ಹೇಳಿದರು.
ಲಲಿತಾ ಬಾಯಿ ಕಾಣೆಯಾಗಿದ್ದು ಹೇಗೆ?
ತಾವು ಕಾಣೆಯಾದ ಕುರಿತು ಮನೆಗೆ ಮರಳಿದ ಬಳಿಕ ಲಲಿತಾ ಬಾಯಿ ವಿವರಣೆ ನೀಡಿದ್ದಾರೆ. ಶಾರುಖ್ ಎಂಬ ವ್ಯಕ್ತಿಯೊಂದಿಗೆ ಮನೆ ಬಿಟ್ಟು ಭಾನ್ಪುರಕ್ಕೆ ಪ್ರಯಾಣ ಬೆಳೆಸಿದ್ದು, ಅಲ್ಲಿ ಆತ ತಮ್ಮ ಅರಿವಿಲ್ಲದೆ ₹5 ಲಕ್ಷಕ್ಕೆ ಇನ್ನೊಬ್ಬ ವ್ಯಕ್ತಿಗೆ 'ಮಾರಾಟ' ಮಾಡಿದ್ದರು ಎಂದು ಅವರು ಹೇಳಿದ್ದಾರೆ.
ಎರಡನೇ ವ್ಯಕ್ತಿ ತನ್ನನ್ನು ರಾಜಸ್ಥಾನದ ಕೋಟಾಗೆ ಕರೆದೊಯ್ದಿದ್ದು, ಅಲ್ಲಿ ಆತನೊಂದಿಗೆ ಸುಮಾರು 18 ತಿಂಗಳುಗಳ ಕಾಲಇದ್ದೆ ಎಂದು ಲಲಿತಾ ಬಾಯಿ ಆರೋಪಿಸಿದ್ದಾರೆ. "ನನ್ನ ಬಳಿ ಮೊಬೈಲ್ ಫೋನ್ ಇರಲಿಲ್ಲ, ಆದ್ದರಿಂದ ನನ್ನ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ನನಗೆ ಅವಕಾಶ ಸಿಕ್ಕ ತಕ್ಷಣ, ನಾನು ಅಲ್ಲಿಂದ ತಪ್ಪಿಸಕೊಂಡು ಬಂದೆ" ಎಂದು ಲಲಿತಾ ಬಾಯಿ ಹೇಳಿದರು.
ಈ ಸುದ್ದಿಯನ್ನು ಓದಿ: Viral News:ಈ ಕಾರಣಕ್ಕೆ ಟಾಯ್ಲೆಟ್‌ನಲ್ಲಿ ಶ್ವಾನವನ್ನು ಮುಳುಗಿಸಿ ಕೊಂದ ಮಹಿಳೆ
ಜೈಲಿನಲ್ಲಿರುವ ನಾಲ್ವರ ಗತಿಯೇನು?
ಲಲಿತಾ ಬಾಯಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಾಲ್ವರ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದು ಥಾಂಡ್ಲಾ ಪೊಲೀಸರ ಜವಾಬ್ದಾರಿ ಎಂದು ಮಂಡ್ಸೌರ್ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಆನಂದ್ ಹೇಳಿದ್ದಾರೆ. ಸ್ಥಳೀಯ ನ್ಯಾಯಾಲಯವು ಈ ವಿಷಯದ ಬಗ್ಗೆ ಮಾಹಿತಿ ಕೇಳಿದೆ ಎಂದು ಝಬುವಾ ಎಸ್ಪಿ ಪದ್ಮವಿಲೋಚನ್ ಶುಕ್ಲಾ ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಗಾಂಧಿ ಸಾಗರ್ ಪೊಲೀಸ್ ಠಾಣೆಗೆ ಹಾಜರಾದ ಮಹಿಳೆ ಕೊಲೆಯಾದ ಮಹಿಳೆಯೇ ಎಂದು ಖಚಿತಪಡಿಸಿಕೊಳ್ಳಲು ಸಂಪೂರ್ಣ ಪರೀಕ್ಷೆ ನಡೆಸಲಾಗುವುದು ಎಂದು ಅವರು ಹೇಳಿದರು. "ಮೊದಲು ನಾವು ಮಹಿಳೆಯ ವೈದ್ಯಕೀಯ ಪರೀಕ್ಷೆ ಮತ್ತು ಡಿಎನ್ಎ ಪರೀಕ್ಷೆಯನ್ನು ನಡೆಸುತ್ತೇವೆ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸುತ್ತೇವೆ" ಎಂದು ಅವರು ಹೇಳಿದರು.