ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hindu girl Self Harming: ಮುಸ್ಲಿಂ ಯುವಕನ ಕಿರುಕುಳ: ಅಪ್ರಾಪ್ತ ಹಿಂದೂ ಬಾಲಕಿ ಆತ್ಮಹತ್ಯೆ

ಮನೆ ಕಟ್ಟಡ ಕಟ್ಟುವಲ್ಲಿ ಕೆಲಸ ಮಾಡುತ್ತಿದ್ದ ಪಿರಾಜ್ ಕಾಳೆ ಎಂಬಾತ ಮೃತ ಯುವತಿಗೆ ಪರಿಚಯ ವಾಗಿದ್ದ. ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಇದನ್ನು ಗಮನಿಸಿದ ಮನೆಯವರು ಯುವತಿಯ ಮೊಬೈಲ್ ಕಸಿದಿದ್ದರು. ಆದರೆ ಯುವಕ ಯುವತಿಯ ಮನೆ ಹತ್ತಿರ ಬಂದು ಕಿರುಕುಳ ನೀಡುತ್ತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ‌.

ಬೆಳಗಾವಿ: ಮುಸ್ಲಿಂ ಯುವಕನ ನಿರಂತರ ಕಿರುಕುಳಕ್ಕೆ ಬೇಸತ್ತು ಅಪ್ರಾಪ್ತ ಹಿಂದೂ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಪಿರಾಜ್ ಕಾಳೆ ಎಂದು ಗುರುತಿಸಲಾಗಿದೆ. ಹಿಂದೂ ಯುವತಿಯ ಮನೆಗೆ ಪದೇ, ಪದೇ ಬರುತ್ತಿದ್ದ ಯುವಕ ನಿರಂತರ ಕಿರುಕುಳ ನೀಡುತ್ತಿದ್ದ. ಈ ಕಾರಣಕ್ಕೆ ಬೇಸತ್ತು ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: CPI Self Harming: ಎಸ್‌ಡಿಆರ್‌ಎಫ್ʼಯ ಸಿಪಿಐ ಶ್ರೀಶೈಲ ಚೌಗಲಾ ನೇಣು ಬಿಗಿದು ಆತ್ಮಹತ್ಯೆ

ಮನೆ ಕಟ್ಟಡ ಕಟ್ಟುವಲ್ಲಿ ಕೆಲಸ ಮಾಡುತ್ತಿದ್ದ ಪಿರಾಜ್ ಕಾಳೆ ಎಂಬಾತ ಮೃತ ಯುವತಿಗೆ ಪರಿಚಯವಾಗಿದ್ದ. ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಇದನ್ನು ಗಮನಿಸಿದ ಮನೆಯವರು ಯುವತಿಯ ಮೊಬೈಲ್ ಕಸಿದಿದ್ದರು. ಆದರೆ ಯುವಕ ಯುವತಿಯ ಮನೆ ಹತ್ತಿರ ಬಂದು ಕಿರುಕುಳ ನೀಡುತ್ತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ‌.

WhatsApp Image 2026-06-06 at 09.49.11 (1)

ಸಧ್ಯ ಅಪ್ರಾಪ್ತ ಬಾಲಕಿಯ ಪೋಷಕರು ನೀಡಿರುವ ದೂರಿನ ಅನ್ವಯ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲವ್ ಜಿಹಾದ್ ಶಂಕೆ: ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲವ್ ಜಿಹಾದ್ ಶಂಕೆ ವ್ಯಕ್ತವಾಗಿದೆ. ಆದರೆ ಪೊಲೀಸರ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಪಿಯುಸಿ ಓದುತ್ತಿದ್ದ ಬಾಲಕಿಯನ್ನು ಕಳೆದುಕೊಂಡು ಕುಟುಂಬದವರು‌ ಕಣ್ಣೀರು ಹಾಕುತ್ತಿದ್ದಾರೆ.