ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಇಡೀ ದೇಶವನ್ನೇ ಬೆಚ್ಚಿ ಬೀಳಿಸೋ ಮತ್ತೊಂದು ಘಟನೆ; 8 ತಿಂಗಳ ಗರ್ಭಿಣಿಯನ್ನು ಹತ್ಯೆಗೈದ ಪಾಪಿ ಪತಿ

Andra Murder Case: ಅನುಷಾ ಮತ್ತು ಜ್ಞಾನೇಶ್ವರ್ ನಡುವೆ ಇಂದು ಬೆಳಗ್ಗೆ ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಜ್ಞಾನೇಶ್ವರ್ ತನ್ನ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಇದೇ ವೇಳೆ ಜ್ಞಾನೇಶ್ವರ್‌ ಅನುಷಾಳ ಕತ್ತು ಹಿಸುಕಿದ್ದಾನೆ. ಈ ವೇಳೆ ಅನುಷಾ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ತಕ್ಷಣ ಆತ ಜ್ಞಾನೇಶ್ವರ್‌ ಅನುಷಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅನುಷಾ ಮೃತಪಟ್ಟಿರುವುದು ದೃಢವಾಗಿದೆ. ತಕ್ಷಣ ಜ್ಞಾನೇಶ್ವರ್‌ ನೇರವಾಗಿ ಪೊಲೀಸ್‌ ಠಾಣೆಗೆ ತೆರಳಿ ಸರೆಂಡರ್‌ ಆಗಿದ್ದಾನೆ.

ಅಮರಾವತಿ: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿಇಡೀ ದೇಶವನ್ನೇ ಬೆಚ್ಚಿ ಬೀಳಿಸುವ ಘಟನೆಯೊಂದು(Murder Case) ನಡೆದಿದೆ. ಎಂಟು ತಿಂಗಳ ಗರ್ಭಿಣಿಯನ್ನು ಆಕೆಯ ಪತಿಯೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ವರದಿಯಾಗಿದೆ. ಸದ್ಯ ಪೊಲೀಸರು ಹಂತಕ ಪತಿಯನ್ನು ಅರೆಸ್ಟ್‌ ಮಾಡಿದ್ದಾರೆ. ಇಪ್ಪತ್ತೇಳು ವರ್ಷದ ಅನುಷಾ ಹತ್ಯೆಯಾದ ದುರ್ದೈವಿಯಾಗಿದ್ದು, ಆಕೆಯ ಪತಿ ಜ್ಞಾನೇಶ್ವರ್ ಪಾಪಿ ಪತಿ ಎನ್ನಲಾಗಿದೆ.

ನಡೆದಿದ್ದೇನು?

ಅನುಷಾ ಮತ್ತು ಜ್ಞಾನೇಶ್ವರ್ ನಡುವೆ ಇಂದು ಬೆಳಗ್ಗೆ ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಜ್ಞಾನೇಶ್ವರ್ ತನ್ನ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಇದೇ ವೇಳೆ ಜ್ಞಾನೇಶ್ವರ್‌ ಅನುಷಾಳ ಕತ್ತು ಹಿಸುಕಿದ್ದಾನೆ. ಈ ವೇಳೆ ಅನುಷಾ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ತಕ್ಷಣ ಆತ ಜ್ಞಾನೇಶ್ವರ್‌ ಅನುಷಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅನುಷಾ ಮೃತಪಟ್ಟಿರುವುದು ದೃಢವಾಗಿದೆ. ತಕ್ಷಣ ಜ್ಞಾನೇಶ್ವರ್‌ ನೇರವಾಗಿ ಪೊಲೀಸ್‌ ಠಾಣೆಗೆ ತೆರಳಿ ಸರೆಂಡರ್‌ ಆಗಿದ್ದಾನೆ. ಈ ಘಟನೆ ವಿಶಾಖಪಟ್ಟಣಂನ ಪಿಎಂ ಪಾಲೆಂನ ಉಡಾ ಕಾಲೋನಿಯಲ್ಲಿ ನಡೆದಿದೆ. ಆ ವ್ಯಕ್ತಿ ನಗರದ ಸ್ಕೌಟ್ಸ್ ಮತ್ತು ಸಾಗರ್‌ನಗರ ವೀಕ್ಷಣಾ ಕೇಂದ್ರದ ಬಳಿ ಫಾಸ್ಟ್ ಫುಡ್ ಕೇಂದ್ರವನ್ನು ನಡೆಸುತ್ತಿದ್ದಾರೆ ಮತ್ತು ಮೂರು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದ ದಂಪತಿಗಳು ಹಲವಾರು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿಗಾಗಿ ಜಗಳವಾಡುತ್ತಿದ್ದರು ಎಂದು ವರದಿಯಾಗಿದೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Murder Case: ಬೆಂಗಳೂರಿನಲ್ಲಿ ಬರ್ಬರ ಕೃತ್ಯ; ನಡುಬೀದಿಯಲ್ಲೇ ಕತ್ತು ಕೊಯ್ದು ಪತ್ನಿಯ ಕೊಲೆ ಮಾಡಿದ ಪತಿ

ಬೆಂಗಳೂರಿನಲ್ಲಿ ಕೆಲವು ದಿನಗಳ ಹಿಂದೆ ಇಂತಹದ್ದ ಒಂದು ಘಟನೆ ವರದಿಯಾಗಿತ್ತು. ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಪಾತಕಿ ಗಂಡನೊಬ್ಬ (Husband) ಪತ್ನಿಯನ್ನು (wife) ನಡು ರಸ್ತೆಯಲ್ಲೇ ಕತ್ತು ಕೊಯ್ದು ಅಮಾನುಷವಾಗಿ ಹತ್ಯೆ (Murder case) ಮಾಡಿದ್ದ ಬೆಂಗಳೂರಿನ ದೊಡ್ಡ ತೋಗೂರು ಬಳಿಯ ಪ್ರಗತಿ ನಗರದಲ್ಲಿ ನಡುರಸ್ತೆಯಲ್ಲೇ ಪತ್ನಿಯ ಕತ್ತು ಕೊಯ್ದು ಪತಿ ಹತ್ಯೆ ಮಾಡಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮೂಲದ ಶಾರದಾ (35) ಹತ್ಯೆಯಾದ ಮಹಿಳೆ.

ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತಿ ಪತ್ನಿಗೆ ನಿತ್ಯ ಜಗಳವಾಗುತ್ತಿತ್ತು ಎನ್ನಲಾಗಿದೆ. ಶುಕ್ರವಾರ ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಪತ್ನಿಯನ್ನು ಪತಿ ಹತ್ಯೆ ಮಾಡಿದ್ದಾನೆ. ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.