ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಉಪನ್ಯಾಸಕನ ಬಂಧನ

2026ರ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಉಪನ್ಯಾಸಕನೊಬ್ಬನನ್ನು ಬಂಧಿಸಲಾಗಿದೆ. ಪ್ರಕರಣದ ಕಿಂಗ್ ಪಿನ್ ಎಂದು ಗುರುತಿಸಲಾದ ಪುಣೆ ಮೂಲದ ರಸಾಯನ ಶಾಸ್ತ್ರ ಉಪನ್ಯಾಸಕ ಪಿವಿ ಕುಲಕರ್ಣಿ ಎಂಬಾತನನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ. ರಹಸ್ಯ ಬೋಧನಾ ಅವಧಿಯಲ್ಲಿ ಹಲವಾರು ಆಕಾಂಕ್ಷಿಗಳಿಗೆ ಆತ ಪ್ರಶ್ನೆ ಪತ್ರಿಕೆ ಹಂಚಿದ್ದಾನೆ ಎಂದು ಆರೋಪಿಸಲಾಗಿದೆ.

ಸಂಗ್ರಹ ಚಿತ್ರ

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ (NEET paper leak case ) ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಉಪನ್ಯಾಸಕನೊಬ್ಬನನ್ನು (Pune Lecturer arrest) ಬಂಧಿಸಲಾಗಿದೆ. 2026ರ ನೀಟ್ ಯುಜಿ (NEET UG) ಪ್ರವೇಶ ಪರೀಕ್ಷೆ ರದ್ದುಗೊಳ್ಳಲು ಕಾರಣವಾದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ, ಕಿಂಗ್‌ಪಿನ್ ಎಂದು ಗುರುತಿಸಲಾದ ಪುಣೆ ಮೂಲದ ರಸಾಯನಶಾಸ್ತ್ರ ಉಪನ್ಯಾಸಕನನ್ನು ಕೇಂದ್ರ ತನಿಖಾ ದಳ (Central Bureau of Investigation) ಬಂಧಿಸಿದೆ. ಪಿವಿ ಕುಲಕರ್ಣಿ ಬಂಧಿತ ಆರೋಪಿ. ಈತ ರಹಸ್ಯ ಬೋಧನಾ ಅವಧಿಯಲ್ಲಿ ಹಲವಾರು ಆಕಾಂಕ್ಷಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಹಂಚಿಕೆ ಮಾಡಿದ್ದಾನೆ ಎನ್ನಲಾಗಿದೆ.

ನೀಟ್ ಯುಜಿ ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಜೊತೆ ಸಂಬಂಧ ಹೊಂದಿದ್ದ ಪಿವಿ ಕುಲಕರ್ಣಿ ಮೇ 3ರಂದು ನಡೆಸಬೇಕಿದ್ದ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಪಡೆಯಲು ಅವಕಾಶವಿತ್ತು. ಯಾಕೆಂದರೆ ಅವರು ಹಲವಾರು ವರ್ಷಗಳಿಂದ ನೀಟ್ ಪ್ರಶ್ನೆ ಪತ್ರಿಕೆ ಮಾಡುವ ಸಮಿತಿಯ ಭಾಗವಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ಮೋದಿ ವಿಮಾನಕ್ಕೆ ಯುಎಇಯಲ್ಲಿ ಎಫ್- 16 ಯುದ್ಧ ವಿಮಾನಗಳಿಂದ ಭದ್ರತೆ; ಕಾರಣವೇನು?

ನಿವೃತ್ತ ಕಾಲೇಜು ಪ್ರಾಧ್ಯಾಪಕರಾಗಿದ್ದ ಕುಲಕರ್ಣಿ ಅವರನ್ನು ಮೇ 14ರಂದು ಗುರುವಾರ ಸಿಬಿಐ ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣದ ಮತ್ತೊಬ್ಬ ಆರೋಪಿಯ ಸಹಾಯದಿಂದ ಅವರು ಏಪ್ರಿಲ್ ಕೊನೆಯ ವಾರದಲ್ಲಿ ಪುಣೆಯಲ್ಲಿರುವ ತಮ್ಮ ನಿವಾಸದಲ್ಲಿ ನಡೆಸಿದ್ದ ರಹಸ್ಯ ತರಬೇತಿ ವೇಳೆ ನೀಟ್ ಆಕಾಂಕ್ಷಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಹಂಚಿದ್ದರು ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಪಿವಿ ಕುಲಕರ್ಣಿ ಅವರ ಸಹಚರ ಮನೀಷಾ ವಾಘ್ಮಾರೆ ಅವರನ್ನು ಗುರುವಾರ ಬಂಧಿಸಲಾಗಿತ್ತು.ಪಿವಿ ಕುಲಕರ್ಣಿ ಅವರು ತರಬೇತಿ ತರಗತಿಯಲ್ಲಿ ಪ್ರಶ್ನೆಯೊಂದಿಗೆ ಉತ್ತರಗಳನ್ನು ಕೂಡ ವಿದ್ಯಾರ್ಥಿಗಳಿಗೆ ಹೇಳಿದರು. ಅವನ್ನು ವಿದ್ಯಾರ್ಥಿಗಳು ತಮ್ಮ ನೋಟ್‌ಬುಕ್‌ಗಳಲ್ಲಿ ಬರೆದುಕೊಂಡಿದ್ದರು. ಇದು ಮೇ 3ರಂದು ನಡೆಯಬೇಕಿದ್ದ ನೀಟ್ ಯುಜಿ 2026 ಪ್ರಶ್ನೆ ಪತ್ರಿಕೆಯನ್ನು ಹೋಲುತ್ತಿದೆ. ಪಿವಿ ಕುಲಕರ್ಣಿ ನಡೆಸಿದ್ದ ವಿಶೇಷ ತರಗತಿಗೆ ಹಾಜರಾಗಲು ಆಕಾಂಕ್ಷಿಗಳು ಹಲವಾರು ಲಕ್ಷ ರೂಪಾಯಿಗಳನ್ನು ಪಾವತಿಸಿದ್ದಾರೆ ಎಂದು ಸಿಬಿಐ ತಿಳಿಸಿದೆ.

ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಸಂದರ್ಭದಲ್ಲಿ ಅಮೆಜಾನ್ ಬಜಾರ್‌ನಲ್ಲಿ ಟ್ರೆಂಡಿ ವಸ್ತುಗಳನ್ನು ಖರೀದಿಸಿ

ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಸಿಬಿಐನಿಂದ ಏಳು ಮಂದಿಯನ್ನು ಬಂಧಿಸಿದೆ. ಇವರಲ್ಲಿ ರಾಜಸ್ಥಾನದ ಜೈಪುರ ಜಿಲ್ಲೆಯ ಸೋದರ ಸಂಬಂಧಿಗಳಾದ ಮಂಗಿ ಲಾಲ್ ಮತ್ತು ದಿನೇಶ್ ಬಿವಾಲ್ ಕೂಡ ಸೇರಿದ್ದಾರೆ. ಇವರನ್ನು ಸಿಬಿಐ ಬಂಧಿಸುವ ಮೊದಲು ರಾಜಸ್ಥಾನದ ಪೊಲೀಸರ ವಶದಲ್ಲಿದ್ದರು. ಬಳಿಕ ಅವರು ಪ್ರಕರಣದ ಪ್ರಮುಖ ಆರೋಪಿಗಳಾಗಿ ಗುರುತಿಸಿಕೊಂಡಿದ್ದಾರೆ. ಹಿಂದೆಯೂ ಕೂಡ ಇವರ ಕುಟುಂಬ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪತ್ರಿಕೆಗಳನ್ನು ಸೋರಿಕೆ ಮಾಡಿ ಮಾರಾಟ ಮಾಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿದ್ಯಾ ಇರ್ವತ್ತೂರು

View all posts by this author