ಲಖನೌ, ಮಾ. 20: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (Pakistan’s ISI) ಜತೆ ಸಂಪರ್ಕ ಹೊಂದಿರುವ ಬೇಹುಗಾರಿಕೆ ಜಾಲದೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು (Ghaziabad police) ಮಾರ್ಚ್ 14ರಂದು ಆರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಬಂಧಿತರು ಸೇನಾ ಮಾರ್ಗಗಳು, ಸೇನಾ ಪಡೆಗಳು ಮತ್ತು ಶಸ್ತ್ರಾಸ್ತ್ರಗಳ ಬಗ್ಗೆ ತಿಳಿಯಲು ವಿವಿಧ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದರು ಎನ್ನಲಾಗಿದೆ.
ಮೂಲಗಳ ಪ್ರಕಾರ, ಗಾಜಿಯಾಬಾದ್ ಪೊಲೀಸರು ಈ ಜಾಲದ ಮಾಸ್ಟರ್ ಮೈಂಡ್ ಸೊಹೈಲ್ ಮಲಿಕ್‌ನನ್ನು ವಶಕ್ಕೆ ಪಡೆದಿದ್ದಾರೆ. ಸೊಹೈಲ್ ಜತೆಗೆ, ಈ ಜಾಲದೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಮೆಹಕ್ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೆಹಕ್ ಐಎಸ್ಐ ನಿರ್ವಾಹಕರೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿದ್ದಳು ಎಂದು ತಿಳಿದುಬಂದಿದೆ.
ನೆಟ್‌ವರ್ಕ್‌ಗೆ ಸಂಬಂಧಿಸಿದ ಎಲ್ಲ ಸದಸ್ಯರಿಗೆ ಅವರ ಕೆಲಸದ ಆಧಾರದ ಮೇಲೆ ಪಾವತಿಯನ್ನು ಮೆಹಕ್ ಮತ್ತು ಸುಹೇಲ್ ನಿರ್ಧರಿಸುತ್ತಿದ್ದರು. ಸುಹೇಲ್-ಮಹೇಕ್ ಜೋಡಿಗೆ ಸೇರಿದ ಮೊಬೈಲ್ ಫೋನ್‌ಗಳು, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಎಲ್ಲ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದೆಹಲಿ ಕಂಟೋನ್ಮೆಂಟ್ ಠಾಣೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಲ್ಲದೆ, 50 ವಿವಿಧ ಸ್ಥಳಗಳಲ್ಲಿ ಕ್ಯಾಮರಾಗಳನ್ನು ಅಳವಡಿಸುವ ಜವಾಬ್ದಾರಿಯನ್ನು ಜಾಲವು ಹೊಂದಿತ್ತು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಅಮೃತಸರದಲ್ಲಿ ಪಾಕ್ ಐಎಸ್ಐ ಬೆಂಬಲಿತ ಭಯೋತ್ಪಾದಕ ಜಾಲ ಪತ್ತೆ
ಗಾಜಿಯಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕೌಸಂಬಿ ಪೊಲೀಸ್ ಠಾಣೆಗೆ ಹಲವು ಶಂಕಿತ ವ್ಯಕ್ತಿಗಳ ಬಗ್ಗೆ ಸುಳಿವು ಸಿಕ್ಕಿತು. ನಮ್ಮ ಅಧಿಕಾರಿಗಳು ಅವರನ್ನು ವಿಚಾರಣೆ ಮಾಡಲು ಪ್ರಾರಂಭಿಸಿದಾಗ, ಅವರು ಆಪಾದಿತ ಗೂಢಚಾರ ತಂಡದೊಂದಿಗೆ ಹೊಂದಿರುವ ಸಂಪರ್ಕ ತಿಳಿದುಬಂತು. ನಾವು ಅವರ ಫೋನ್‌ಗಳು, ಗ್ಯಾಲರಿಗಳು ಮತ್ತು ಇತರ ಹಲವು ಫೋನ್‌ಗಳನ್ನು ವಿಶ್ಲೇಷಿಸಿದ್ದೇವೆ. ಆಕಸ್ಮಿಕವಾಗಿ ಗ್ಯಾಂಗ್‌ನೊಂದಿಗಿನ ಸಂಪರ್ಕವನ್ನು ಕಂಡುಕೊಂಡಿದ್ದೇವೆ ಎಂದು ಅಧಿಕಾರಿಗಳು ಹೇಳಿದರು.
ಇರಾನ್ ಯುದ್ಧ ಎಫೆಕ್ಟ್: 11 ವಾಯುಪ್ರದೇಶ ತಪ್ಪಿಸಲು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರದ ಸೂಚನೆ
ದೆಹಲಿ ಕ್ಯಾಂಟ್ ನಿಲ್ದಾಣದ ಹೊರತಾಗಿ, ಆರೋಪಿಗಳು ಸೋನಿಪತ್ ರೈಲು ನಿಲ್ದಾಣದಲ್ಲಿಯೂ ಕ್ಯಾಮರಾಗಳನ್ನು ಅಳವಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಲ್ಲಿ ಒಬ್ಬನ ತಂದೆ ಸುಹೇಲ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತನ್ನ ಪುತ್ರನನ್ನು ಸುಹೇಲ್ ಬೇಕಂತಲೇ ಈ ಜಾಲಕ್ಕೆ ಎಳೆದೊಯ್ದಿದ್ದಾನೆ ಎಂದು ಆರೋಪಿಸಿದ್ದಾರೆ. ಮೂರು ಸಿಮ್ ಕಾರ್ಡ್‌ಗಳನ್ನು ಖರೀದಿಸದಿದ್ದರೆ ಮಗಳನ್ನು ಅಪಹರಿಸುವುದಾಗಿ ಸುಹೇಲ್ ಬೆದರಿಕೆ ಹಾಕಿದ್ದ. ಇದರಿಂದ ಭಯಗೊಂಡ ನನ್ನ ಮಗ ಅವನಿಗೆ ಮೂರು ಸಿಮ್ ಕಾರ್ಡ್‌ಗಳನ್ನು ಖರೀದಿಸಿದನು ಎಂದು ಹೇಳಿದರು. ತನ್ನ ಮಗನಿಗೆ ಸಿಸಿಟಿವಿ ಅಳವಡಿಸುವ ಜ್ಞಾನವಿಲ್ಲ ಎಂದೂ ಅವರು ಹೇಳಿದ್ದಾರೆ.