ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಪಘಾತಕ್ಕೀಡಾದ ಜಾರ್ಖಂಡ್ ಏರ್ ಆಂಬ್ಯುಲೆನ್ಸ್‌ನಲ್ಲಿ ಬ್ಲ್ಯಾಕ್‌ ಬಾಕ್ಸ್‌ ಇರಲಿಲ್ಲ; ತನಿಖೆಗೆ ಎದುರಾಯ್ತು ಮತ್ತಷ್ಟು ಸವಾಲು

ರಾಂಚಿಯಿಂದ ದೆಹಲಿಗೆ ಹೊರಟ್ಟಿದ್ದ ಜಾರ್ಖಂಡ್ ಏರ್ ಆಂಬ್ಯುಲೆನ್ಸ್‌ ಹವಾಮಾನ ವೈಪರೀತ್ಯದಿಂದಾಗಿ ಟೇಕ್ ಆಫ್ ಆದ ಸುಮಾರು 23 ನಿಮಿಷಗಳ ಅನಂತರ ಸಂವಹನ ಕಳೆದುಕೊಂಡು ಛತ್ರ ಜಿಲ್ಲೆಯ ಸಿಮಾರಿಯಾ ಬಳಿಯ ಅರಣ್ಯ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಏನಾಯಿತು ಎಂಬುದನ್ನು ಪತ್ತೆ ಹಚ್ಚಲು ಅಧಿಕಾರಿಗಳ ತನಿಖೆಗೆ ಇಳಿದಿದ್ದು, ಏರ್ ಆಂಬ್ಯುಲೆನ್ಸ್‌ನ ಕಪ್ಪು ಪೆಟ್ಟಿಗೆ ಇಲ್ಲದೇ ಇರುವುದು ತನಿಖೆಯನ್ನು ಜಟಿಲಗೊಳಿಸಿದೆ.

ಸಂಗ್ರಹ ಚಿತ್ರ

ನವದೆಹಲಿ: ಏಳು ಮಂದಿ ಸಾವಿಗೆ ಕಾರಣವಾದ ಜಾರ್ಖಂಡ್ ಏರ್ ಆಂಬ್ಯುಲೆನ್ಸ್‌ ಅಪಘಾತದಲ್ಲಿ (Jharkhand air ambulance crash) ಕಪ್ಪು ಪೆಟ್ಟಿಗೆ (Black box) ಇಲ್ಲದೇ ಇರುವುದು ತನಿಖೆಯನ್ನು ಸಂಕೀರ್ಣಗೊಳಿಸಿದೆ. ರಾಂಚಿಯಿಂದ (Ranchi) ದೆಹಲಿಗೆ (Delhi) ಮಂಗಳವಾರ ಸಂಜೆ 7.11ರ ಸುಮಾರಿಗೆ ಹೊರಟಿದ್ದ ಏರ್ ಆಂಬ್ಯುಲೆನ್ಸ್‌ (air ambulance) ಹವಾಮಾನ ವೈಪರೀತ್ಯದಿಂದ ತೊಂದರೆ ಉಂಟಾಗಿರುವುದನ್ನು ತಿಳಿಸಿತ್ತು. ಬಳಿಕ ಟೇಕ್ ಆಫ್ (take off) ಆದ ಸುಮಾರು 23 ನಿಮಿಷಗಳ ಅನಂತರ ಸಂವಹನ ಮತ್ತು ರಾಡಾರ್ ಸಂಪರ್ಕವನ್ನು ಕಳೆದುಕೊಂಡಿತು. ಅದರ ಅವಶೇಷಗಳು ಜಾರ್ಖಂಡ್‌ನ (Jharkhand) ಛತ್ರ ಜಿಲ್ಲೆಯ (Chatra district) ಸಿಮಾರಿಯಾ ಬಳಿಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿವೆ.

ಜಾರ್ಖಂಡ್ ಏರ್ ಆಂಬ್ಯುಲೆನ್ಸ್ ಕಪ್ಪು ಪೆಟ್ಟಿಗೆ ಇಲ್ಲದಿರುವುದು ಅಪಘಾತದ ನಿಗೂಢತೆಯನ್ನು ಹೆಚ್ಚಿಸಿದೆ. ಇದು ತನಿಖೆಗೆ ಅಡ್ಡಿಯಾಗಿದೆ. ವಿಮಾನವು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಅಥವಾ ಫ್ಲೈಟ್ ಡೇಟಾ ರೆಕಾರ್ಡರ್ ಅನ್ನು ಒಳಗೊಂಡಿರುವ ಕಪ್ಪು ಪೆಟ್ಟಿಗೆಯನ್ನು ಹೊಂದಿರಲಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

drugs factory: ಮೈಸೂರಿನಲ್ಲಿ ಮತ್ತೊಂದು ಡ್ರಗ್ಸ್‌ ಫ್ಯಾಕ್ಟರಿ ಪತ್ತೆ, ಐವರು ಗುಜರಾತಿಗಳ ಸೆರೆ

ಕಪ್ಪು ಪೆಟ್ಟಿಗೆ ಯಾಕೆ ಇರಲಿಲ್ಲ?

1987ರಲ್ಲಿ ತಯಾರಿಸಲಾದ ರೆಡ್‌ಬರ್ಡ್‌ನ ಬೀಚ್‌ಕ್ರಾಫ್ಟ್ ಸಿ90 (VT-AJV) ಅವಳಿ-ಟರ್ಬೊಪ್ರೊಪ್ ವಿಮಾನಕ್ಕೆ ಹಲವು ವಿನಾಯಿತಿಗಳನ್ನು ನೀಡಲಾಗಿತ್ತು. ಇದರ ಗರಿಷ್ಠ ಟೇಕ್ ಆಫ್ ತೂಕ 4,583 ಕೆ.ಜಿ. ಯಾಗಿತ್ತು. ಇದಕ್ಕೆ ವಾಯು ಯೋಗ್ಯತಾ ಪ್ರಮಾಣ ಪತ್ರವನ್ನು ಮೊದಲ ವರ್ಷವೇ ನೀಡಲಾಗಿತ್ತು. ಅದರ ಪ್ರಮಾಣೀಕರಣದ ಸಮಯದಲ್ಲಿ ಸಿವಿಆರ್ ಅಥವಾ ಎಫ್ ಡಿಆರ್ ಅನ್ನು ಹೊಂದುವುದು ಕಡ್ಡಾಯವಾಗಿರಲಿಲ್ಲ.

ನಿಯಮಗಳ ಅಡಿಯಲ್ಲಿ 1987 ಮತ್ತು ಅದರ ಬಳಿಕ ವಾಯು ಯೋಗ್ಯತಾ ಪ್ರಮಾಣ ಪತ್ರಗಳನ್ನು ಪಡೆದ ಪ್ರಮಾಣೀಕೃತ ಟೇಕ್-ಆಫ್ ತೂಕ 5,700 ಕೆ.ಜಿ.ಗಿಂತ ಹೆಚ್ಚಿರುವ ವಿಮಾನಗಳಿಗೆ ಸಿವಿಆರ್ ಕಡ್ಡಾಯಗೊಳಿಸಲಾಗಿದೆ. 1990ರ ಬಳಿಕ ವಾಯು ಯೋಗ್ಯತಾ ಪ್ರಮಾಣ ಪತ್ರಗಳನ್ನು ಪಡೆದ 5,700 ಕೆ.ಜಿ. ಅಥವಾ ಅದಕ್ಕಿಂತ ಕಡಿಮೆ ಇರುವ ಬಹು-ಎಂಜಿನ್ ಟರ್ಬೈನ್-ಚಾಲಿತ ವಿಮಾನಗಳು ಕೂಡ ಎಫ್ ಡಿಆರ್ ಹೊಂದಿರಬೇಕು ಎನ್ನುವ ನಿಯಮವಿದೆ. ಆದರೆ ಇದೀಗ ಅಪಘಾತಕ್ಕೀಡಾದ ವಿಮಾನವು ಈ ನಿಯಮಗಳಿಗೆ ಒಳಪಟ್ಟಿರಲಿಲ್ಲ.

Puttur Love dokha: ಪುತ್ತೂರು ಬಿಜೆಪಿ ಮುಖಂಡನ ಪುತ್ರನ ಪ್ರೇಮ ವಂಚನೆ ಪ್ರಕರಣ: ಸಾಯಲು ಯತ್ನಿಸಿದ ಮಗುವಿನ ತಾಯಿ

ತನಿಖೆ ಹೇಗೆ ನಡೆಯಬೇಕಿದೆ?

ಅಪಘಾತಕ್ಕೀಡಾದ ಜಾರ್ಖಂಡ್ ಏರ್ ಆಂಬ್ಯುಲೆನ್ಸ್‌ ನಲ್ಲಿ ಕಪ್ಪು ಪೆಟ್ಟಿಗೆ ಇಲ್ಲದೇ ಇರುವುದರಿಂದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಅಪಘಾತದ ಕಾರಣವನ್ನು ಪತ್ತೆ ಹಚ್ಚಲು ಕೊನೆಯ ಸಂವಹನ ಮತ್ತು ಅಪಘಾತದ ಸ್ಥಳದಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ಆಧರಿಸಬೇಕಾಗಿದೆ.

ವಿದ್ಯಾ ಇರ್ವತ್ತೂರು

View all posts by this author