ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

6 ಗಂಟೆಗಳ ಪೆರೋಲ್ ಮೇಲೆ ಅವಳಿ ಮಕ್ಕಳ ನಾಮಕರಣ ಶಾಸ್ತ್ರಕ್ಕೆ ಆಗಮಿಸಿದ ಕುಖ್ಯಾತ ಗ್ಯಾಂಗ್‌ಸ್ಟರ್‌ಗೆ ಡೊಳ್ಳು ಬಾರಿಸಿ ಭರ್ಜರಿ ಸ್ವಾಗತ: ವಿಡಿಯೊ ವೈರಲ್‌

Notorious Gangster Kala Jathedi: ಹರಿಯಾಣದ ಕುಖ್ಯಾತ ಗ್ಯಾಂಗ್‌ಸ್ಟರ್ ಸಂದೀಪ್ ಅಲಿಯಾಸ್ ಕಾಲಾ ಜಥೇಡಿಗೆ ತನ್ನ ಅವಳಿ ಹೆಣ್ಣುಮಕ್ಕಳ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಲು 6 ಗಂಟೆಗಳ ಪೆರೋಲ್ ನೀಡಲಾಗಿತ್ತು. ಕಾಲಾ ಜಥೇಡಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಸ್ಥಳೀಯರು ಡೊಳ್ಳು ಬಾರಿಸಿ ಸ್ವಾಗತಿಸಿದರು. ಆತನ ಆಗಮನದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

ಕುಖ್ಯಾತ ಗ್ಯಾಂಗ್‌ಸ್ಟರ್‌ಗೆ ಭರ್ಜರಿ ಸ್ವಾಗತ

ಚಂಡೀಗಢ, ಸೆ. 20: ಗ್ಯಾಂಗ್‌ಸ್ಟರ್ ಸಂದೀಪ್ ಅಲಿಯಾಸ್ ಕಾಲಾ ಜಥೇಡಿಗೆ (Kala Jathedi) ತನ್ನ ಅವಳಿ ಹೆಣ್ಣುಮಕ್ಕಳ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಲು 6 ಗಂಟೆಗಳ ಪೆರೋಲ್ ನೀಡಲಾಗಿದೆ. ಅದರಂತೆ ಭಾನುವಾರ (ಸೆಪ್ಟೆಂಬರ್‌ 20) ಹರಿಯಾಣದ (Haryana) ಸೋನಿಪತ್‌ನ ರಾಯ್ ಪ್ರದೇಶದಲ್ಲಿರುವ ಹುಟ್ಟೂರು ಜಥೇಡಿ ಗ್ರಾಮಕ್ಕೆ ಆಗಮಿಸಿದ್ದ. ಕಾಲಾ ಜಥೇಡಿಗೆ ಬೆಳಗ್ಗೆ 11ರಿಂದ ಸಂಜೆ 5ರವರೆಗೆ ಪೆರೋಲ್ ನೀಡಲಾಗಿತ್ತು ಎಂದು ವರದಿಯಾಗಿದೆ.

ಕಾಲಾ ಜಥೇಡಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ, ಗ್ರಾಮಸ್ಥರು ಡೊಳ್ಳು ಬಾರಿಸಿ ಸ್ವಾಗತಿಸಿದರು. ಆತನ ಆಗಮನದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಆತನ ನಿವಾಸದ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಗ್ಯಾಂಗ್‌ಸ್ಟರ್‌ ಕಾಲಾ ಜಥೇಡಿಗೆ ಭರ್ಜರಿ ಸ್ವಾಗತ:



ಅವಳಿ ಹೆಣ್ಣು ಮಕ್ಕಳ ನಾಮಕರಣ ಸಮಾರಂಭವು ಆತನ ಮನೆಯಲ್ಲಿ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಪ್ರಾರಂಭವಾಯಿತು. ಕಾಲಾ ಜಥೇಡಿಯ ಪತ್ನಿ ಅನುರಾಧ ಸುಮಾರು ಮೂರು ತಿಂಗಳ ಹಿಂದೆ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಳು. ಹೀಗಾಗಿ ಕಾಲಾಗೆ ತಾತ್ಕಾಲಿಕ ಪೆರೋಲ್ ಅಡಿಯಲ್ಲಿ ಮಕ್ಕಳ ನಾಮಕರಣ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ನೀಡಲಾಯಿತು.

ಸೂರಜ್ ರೇವಣ್ಣಗೆ ಬಿಗ್‌ ರಿಲೀಫ್‌; ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 2ನೇ ಬಾರಿ ಬಿ ರಿಪೋರ್ಟ್ ಸಲ್ಲಿಕೆ

ಇನ್ನು ನಾಮಕರಣ ಕಾರ್ಯಕ್ರಮಕ್ಕಾಗಿ ಅವರ ಮನೆಯನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಹಳ್ಳಿ ಮತ್ತು ಸುತ್ತಮುತ್ತ ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸಲಾಗಿತ್ತು. ಕಾರ್ಯಕ್ರಮದ ಮಾಧ್ಯಮ ವರದಿಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಪತ್ರಕರ್ತರು ಪ್ರದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿತ್ತು. ಗ್ರಾಮವನ್ನು ಭದ್ರತಾ ವಲಯವನ್ನಾಗಿ ಪರಿವರ್ತಿಸಲಾಗಿದ್ದು, ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಹಲವು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಕಾಲಾ ಜಥೇಡಿಗೆ ಭಾರಿ ಭದ್ರತಾವ ವ್ಯವಸ್ಥೆ ಮಾಡಲಾಗಿದ್ದು, ಅಲ್ಪಾವಧಿಯ ಪೆರೋಲ್ ನೀಡಲಾಗಿದೆ. ಕುಟುಂಬ ಸದಸ್ಯರು ಮತ್ತು ಆಪ್ತ ಸಂಬಂಧಿಕರ ಸಮ್ಮುಖದಲ್ಲಿ ಆತನ ಮನೆಯಲ್ಲಿ ಸಾಂಪ್ರದಾಯಿಕ ಆಚರಣೆಗಳೊಂದಿಗೆ ನಾಮಕರಣ ಸಮಾರಂಭ ನಡೆಯಿತು.

ಯಾರು ಈ ಕಾಲಾ ಜಥೇಡಿ?

ಕಾಲಾ ಜಥೇಡಿಯ ನಿಜವಾದ ಹೆಸರು ಸಂದೀಪ್. ಈತ ಹರಿಯಾಣದ ಸೋನಿಪತ್ ಜಿಲ್ಲೆಯ ಜಥೇಡಿ ಗ್ರಾಮದವನಾಗಿದ್ದು, ಹರಿಯಾಣ, ದೆಹಲಿ, ಪಂಜಾಬ್ ಮತ್ತು ರಾಜಸ್ಥಾನ ಭಾಗಗಳಲ್ಲಿ ಸಕ್ರಿಯವಾಗಿರುವ ಭಾರತದ ಒಬ್ಬ ಕುಖ್ಯಾತ ಗ್ಯಾಂಗ್‌ಸ್ಟರ್ ಮತ್ತು ದರೋಡೆಕೋರ. 12ನೇ ತರಗತಿಯ ನಂತರ ಐಟಿಐ ಡಿಪ್ಲೊಮಾ ಕೋರ್ಸ್ ಅರ್ಧಕ್ಕೆ ನಿಲ್ಲಿಸಿ ಅಪರಾಧ ಜಗತ್ತಿಗೆ ಕಾಲಿಟ್ಟಿದ್ದ.

ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಕೇಸ್‌; ಕೊಲೆಗೂ ಮುನ್ನ ಫೇಕ್‌ ಇನ್‌ಸ್ಟಾಗ್ರಾಮ್ ಐಡಿ ರಚಿಸಿದ್ದ ಸಿಯಾ!

ಆತನನ್ನು ಪೊಲೀಸರು ಉತ್ತರ ಭಾರತದ ಪ್ರಮುಖ ವಾಂಟೆಡ್ ಗ್ಯಾಂಗ್‌ಸ್ಟರ್‌ಗಳಲ್ಲಿ ಒಬ್ಬ ಎಂದು ಗುರುತಿಸಿದ್ದಾರೆ. ಆತನ ವಿರುದ್ಧ ದರೋಡೆ, ಸುಲಿಗೆ, ಕೊಲೆ ಯತ್ನ, ಅಕ್ರಮ ಶಸ್ತ್ರಾಸ್ತ್ರ ಹೊಂದಿರುವುದು ಸೇರಿ ಸೇರಿ ಹಲವು ಗಂಭೀರ ಪ್ರಕರಣಗಳಿವೆ. 2021ರಲ್ಲಿ ಉತ್ತರ ಪ್ರದೇಶದ ಸಹಾರನ್‌ಪುರದಲ್ಲಿ ದೆಹಲಿ ಪೊಲೀಸರ ವಿಶೇಷ ಘಟಕ ಅವನನ್ನು ಬಂಧಿಸಿತ್ತು.

ಕಾಲಾ ಜಥೇಡಿ 2024ರ ಮಾರ್ಚ್‌ನಲ್ಲಿ ಲೇಡಿ ಡಾನ್ ಎಂದೇ ಖ್ಯಾತಳಾದ ಅನುರಾಧಾ ಚೌಧರಿ (ಮೇಡಂ ಮಿಂಜ್) ಎಂಬಾಕೆಯನ್ನು ಜೈಲಿನಿಂದ ಪೆರೋಲ್ ಪಡೆದು ಬಿಗಿ ಪೊಲೀಸ್ ಭದ್ರತೆಯಲ್ಲಿ ವಿವಾಹವಾಗಿದ್ದ. ಇತ್ತೀಚೆಗೆ ಐವಿಎಫ್ ತಂತ್ರಜ್ಞಾನದ ಮೂಲಕ ಈ ದಂಪತಿಗೆ ಅವಳಿ ಹೆಣ್ಣು ಮಕ್ಕಳು ಜನಿಸಿದ್ದು, ಸೆಪ್ಟೆಂಬರ್ 20ರಂದು ತನ್ನ ಅವಳಿ ಹೆಣ್ಣು ಮಕ್ಕಳ ನಾಮಕರಣ ಶಾಸ್ತ್ರದಲ್ಲಿ ಭಾಗವಹಿಸಲು ಈತನಿಗೆ ಕೋರ್ಟ್ ಕೆಲವು ಗಂಟೆಗಳ ಕಾಲ ಕಸ್ಟಡಿ ಪೆರೋಲ್ ಮಂಜೂರು ಮಾಡಿತ್ತು.