ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಪರೇಷನ್ ಡೆಲ್ಟಾ ಹಂಟ್: ಗುಜರಾತ್‌ನಲ್ಲಿ 362 ಅಕ್ರಮ ಬಾಂಗ್ಲಾದೇಶಿಗರ ಬಂಧನ

ಗುಜರಾತ್ ರಾಜ್ಯಾದ್ಯಂತ ನಡೆದ ಆಪರೇಷನ್ ಡೆಲ್ಟಾ ಹಂಟ್ ಅಡಿಯಲ್ಲಿ ಅಕ್ರಮವಾಗಿ ವಾಸವಾಗಿದ್ದ 362 ಬಾಂಗ್ಲಾದೇಶಿಗರನ್ನು ಪೊಲೀಸರು ಬಂಧಿಸಿದರು. 782ಕ್ಕೂ ಹೆಚ್ಚು ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ಸಂಖ್ಯೆಯ ಬಾಂಗ್ಲಾದೇಶಿ ಪ್ರಜೆಗಳು ಅನುಮತಿಯಿಲ್ಲದೆ ಗುಜರಾತ್‌ಗೆ ಪ್ರವೇಶಿಸಿದ್ದಾರೆ ಎನ್ನುವ ಮಾಹಿತಿ ಮೇರೆಗೆ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ.

ಸಂಗ್ರಹ ಚಿತ್ರ

ಗುಜರಾತ್: ಅಹಮದಾಬಾದ್ (Ahmedabad) ನಗರದಲ್ಲಿ 155, ಸೂರತ್ (Surat) ನಗರದಲ್ಲಿ 84, ಅಹಮದಾಬಾದ್ (Ahmedabad) ಗ್ರಾಮೀಣ ಪ್ರದೇಶದಲ್ಲಿ 34, ಪೂರ್ವ ಕಚ್-ಗಾಂಧಿಧಾಮದಲ್ಲಿ 13 ಮತ್ತು ಭರೂಚ್‌ನಲ್ಲಿ 12 ಸೇರಿದಂತೆ ಒಟ್ಟು 362 ಅಕ್ರಮ ಬಾಂಗ್ಲಾದೇಶಿಗರನ್ನು ( illegal Bangladeshi nationals) ಗುಜರಾತ್ (Gujarat)ನಲ್ಲಿ ಬಂಧಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಬಾಂಗ್ಲಾದೇಶಿ ಪ್ರಜೆಗಳು ಅನುಮತಿಯಿಲ್ಲದೆ ಗುಜರಾತ್‌ಪ್ರವೇಶಿಸಿದ್ದಾರೆ ಎನ್ನುವ ಮಾಹಿತಿ ಮೇರೆಗೆ ನಡೆಸಿದ ರಾಜ್ಯಾದ್ಯಂತ ನಡೆಸಿದ ಆಪರೇಷನ್ ಡೆಲ್ಟಾ ಹಂಟ್ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ವಾಸವಾಗಿದ್ದ 362 ಬಾಂಗ್ಲಾದೇಶಿಗರನ್ನು ಬಂಧಿಸಲಾಗಿದ್ದು, 782ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

ಈ ಕುರಿತು ರಾಜ್ಯ ಸರ್ಕಾರ ಅಧಿಕೃತ ಮಾಹಿತಿಯನ್ನು ನೀಡಿದ್ದು, ಗುಜರಾತ್ ಪೊಲೀಸರು ಆಪರೇಷನ್ ಡೆಲ್ಟಾ ಹಂಟ್ ಕಾರ್ಯಾಚರಣೆ ಮೂಲಕ 362 ಅಕ್ರಮ ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ. 782ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಇದು ರಾಜ್ಯದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ನಡೆಸಲಾದ ಅತೀ ದೊಡ್ಡ ಕಾರ್ಯಾಚರಣೆಯಾಗಿದೆ.

ಉತ್ತರ ಪ್ರದೇಶದಲ್ಲಿ ಮತ್ತೆ ಬುಲ್ಡೋಜರ್ ಸದ್ದು: ಸರ್ಕಾರಿ ಭೂಮಿಯಲ್ಲಿದ್ದ ಅಕ್ರಮ ಮದರಸಾ ಧ್ವಂಸ

ಬಂಧಿತರಲ್ಲಿ 103 ಪುರುಷರು, 188 ಮಹಿಳೆಯರು ಮತ್ತು 71 ಮಕ್ಕಳು ಸೇರಿದ್ದಾರೆ. ಅಹಮದಾಬಾದ್ ನಗರದಲ್ಲಿ ಅತೀ ಹೆಚ್ಚು ಅಂದರೆ 155 ಮಂದಿಯನ್ನು ಬಂಧಿಸಲಾಗಿದೆ. ಉಳಿದಂತೆ ಸೂರತ್ ನಗರದಲ್ಲಿ 84, ಅಹಮದಾಬಾದ್ ಗ್ರಾಮೀಣ ಪ್ರದೇಶದಲ್ಲಿ 34, ಪೂರ್ವ ಕಚ್-ಗಾಂಧಿಧಾಮದಲ್ಲಿ 13 ಮತ್ತು ಭರೂಚ್‌ನಲ್ಲಿ 12 ಮಂದಿಯನ್ನು ಬಂಧಿಸಲಾಗಿದೆ. ಇತರ ಹಲವಾರು ಜಿಲ್ಲೆಗಳಲ್ಲಿಯೂ ಬಂಧನಗಳು ನಡೆದಿವೆ.

ಈ ಕುರಿತು ಮಾಹಿತಿ ನೀಡಿದ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಶರದ್ ಸಿಂಘಾಲ್, ಹೆಚ್ಚಿನ ಸಂಖ್ಯೆಯ ಬಾಂಗ್ಲಾದೇಶಿ ಪ್ರಜೆಗಳು ಅಧಿಕೃತ ಅನುಮತಿಯಿಲ್ಲದೆ ಗುಜರಾತ್‌ಗೆ ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಬಳಿಕ ಉಪಮುಖ್ಯಮಂತ್ರಿ ಹರ್ಷ ಸಂಘವಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ತಿಳಿಸಿದರು.

ಅಹಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್. ಮಲಿಕ್ ಅವರು ಮಾತನಾಡಿ, ಕಾರ್ಯಾಚರಣೆಯಲ್ಲಿ ಅಪರಾಧ ಶಾಖೆ, ವಿಶೇಷ ಕಾರ್ಯಾಚರಣೆ ಗುಂಪು ಮತ್ತು ಸ್ಥಳೀಯ ಪೊಲೀಸ್ ಘಟಕಗಳ ಸಿಬ್ಬಂದಿಯನ್ನು ಒಳಗೊಂಡ 30ಕ್ಕೂ ಹೆಚ್ಚು ತಂಡಗಳು ಭಾಗವಹಿಸಿವೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ಹರ್ಷ ಸಂಘವಿ ಅವರು ಮಾತನಾಡಿ, ಅಕ್ರಮ ವಲಸಿಗರ ವಿರುದ್ಧ ಕಾಯಾಚರಣೆ ನಡೆಸಲು ಪ್ರಾರಂಭಿಸಿದಾಗ ಅವರು ತಪ್ಪಿಸಿಕೊಳ್ಳುವುದನ್ನು ತಡೆಯಲು ಬಸ್ ನಿಲ್ದಾಣ, ಹೆದ್ದಾರಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಏಕಕಾಲದಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಇವುಗಳ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸಿದ ಸುಮಾರು 18 ಮಂದಿಯನ್ನು ಬಂಧಿಸಲಾಯಿತು ಎಂದರು.

.ಅಕ್ರಮವಾಗಿ ದೇಶ ಪ್ರವೇಶಿಸುವವರಿಗೆ ಆಶ್ರಯ, ಉದ್ಯೋಗ, ನಕಲಿ ದಾಖಲೆ ಒದಗಿಸಿದವರ ವಿರುದ್ದವೂ ಕಠಿಣ ಕ್ರಮ ಕೈಗೊಳ್ಳಾಲವುದು. ಬಂಧಿತರನ್ನು ಕಾನೂನು ಕಾರ್ಯವಿಧಾನಗಳ ಮೂಲಕ ಗಡಿಪಾರು ಮಾಡುವುದಾಗಿ ಅವರು ಹೇಳಿದರು.

ಬಂಧಿತ ಬಾಂಗ್ಲಾದೇಶದ ಪ್ರಜೆಗಳಲ್ಲಿ ಹಲವಾರು ಮಂದಿ ಎರಡು ವರ್ಷಗಳಿಗೂ ಮೊದಲೇ ಇಲ್ಲಿಗೆ ಬಂದು ನೆಲೆಯಾಗಿದ್ದಾರೆ. ಪಶ್ಚಿಮ ಬಂಗಾಳದ ಹಳ್ಳಿಗಳ ಮೂಲಕ ಅವರು ಭಾರತವನ್ನು ಪ್ರವೇಶಿಸಿದ್ದರು. ಸ್ಥಳೀಯ ಮಧ್ಯವರ್ತಿಗಳು ಅವರಿಗೆ ನಕಲಿ ದಾಖಲೆಗಳನ್ನು ಪಡೆಯಲು ನೆರವಾಗಿದ್ದಾರೆ. ಆ ದಾಖಲೆಗಳನ್ನು ಬಳಸಿ ಅವರು ಆಧಾರ್ ಕಾರ್ಡ್ ಪಡೆದಿದ್ದಾರೆ ಎಂದು ಹೇಳಿದರು.

ದೆಹಲಿ ಹೊಟೆಲ್‌ ದುರಂತ; ಬೆಂಕಿ ಹೊತ್ತಿ ಉರಿಯುತ್ತಿರುವಾಗಲೇ ಸ್ಥಳದಿಂದ ಎಸ್ಕೇಪ್‌ ಆದ ಮಾಲೀಕ!

ಬಂಧಿತರಿಂದ ನಕಲಿ ಆಧಾರ್ ಕಾರ್ಡ್‌, ಮತದಾರರ ಗುರುತಿನ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾನವ ಕಳ್ಳಸಾಗಣೆ ಮತ್ತು ದಾಖಲೆ ನಕಲಿ ಜಾಲಗಳ ಕುರಿತು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಬಾಂಗ್ಲಾದೇಶಿ ಮೊಬೈಲ್ ಸಂಖ್ಯೆಗಳೊಂದಿಗೆ ಸಕ್ರಿಯ ಸಂವಹನ ಹೊಂದಿದ್ದ ಭಾರತೀಯ ಮೊಬೈಲ್ ಸಂಖ್ಯೆಗಳ ಡೇಟಾಬೇಸ್ ಅನ್ನು ಸಂಗ್ರಹಿಸಿ 6,200 ಕ್ಕೂ ಹೆಚ್ಚು ಶಂಕಿತ ಬಾಂಗ್ಲಾದೇಶಿ ಪ್ರಜೆಗಳ ಪಟ್ಟಿಯನ್ನು ರಚಿಸಲಾಗಿದೆ. ಇವರ ಶೋಧ ಕಾರ್ಯಾಚರಣೆಗಳನ್ನು ಮುಂದುವರಿಸಲಾಗಿದೆ ಎಂದು ಗುಜರಾತ್ ಪೊಲೀಸ್ ಮಹಾನಿರ್ದೇಶಕ ಕೆ.ಎಲ್.ಎನ್. ರಾವ್ ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author