ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಮಸ್ಯೆಗಳಿಗೆ ಪರಿಹಾರ ಕೊಡಿಸುವುದಾಗಿ ಹೇಳಿ ವಂಚನೆ: ಜ್ಯೋತಿಷ್ಯದ ಹೆಸರಿನಲ್ಲಿ 60 ಲಕ್ಷ ರುಪಾಯಿ ಲೂಟಿ

ಸಾಮಾಜಿಕ ಜಾಲತಾಣದ ಮೂಲಕ ಪ್ರೀತಿ, ಮದುವೆ, ವಿವಾದ, ಸಂಬಂಧಗಳ ವಿಚಾರದಲ್ಲಿ ಜ್ಯೋತಿಷ್ಯ ಹೇಳುವುದಾಗಿ ನಂಬಿಸಿ ದುರ್ಬಲರನ್ನು ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿದ್ದ ಗ್ಯಾಂಗ್ ವೊಂದನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ. ಇವರು ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳಲ್ಲಿ ಪ್ರೊಫೈಲ್‌ಗಳನ್ನು ರಚಿಸಿ ಜನರಿಗೆ ವಂಚನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಂಗ್ರಹ ಚಿತ್ರ

ಅಹಮದಾಬಾದ್: ಸಾಮಾಜಿಕ ಮಾಧ್ಯಮಗಳ (social media) ಮೂಲಕ ಜ್ಯೋತಿಷ್ಯ (Astrology Scam) ಹೇಳುವುದಾಗಿ ನಂಬಿಸಿ ವಂಚಿಸುತ್ತಿದ್ದ ಗ್ಯಾಂಗ್ ವೊಂದನ್ನು ಅಹಮದಾಬಾದ್ ಪೊಲೀಸರು (Ahmedabad police) ಬಂಧಿಸಿದ್ದಾರೆ. ಪ್ರೀತಿ, ಮದುವೆ, ವಿವಾದ, ಸಂಬಂಧಗಳ ವಿಚಾರದಲ್ಲಿ ಜ್ಯೋತಿಷ್ಯ ಹೇಳುವುದಾಗಿ ನಂಬಿಸಿ ದುರ್ಬಲರನ್ನು ಗುರಿಯಾಗಿಸಿಕೊಂಡು ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಗ್ಯಾಂಗ್ ಅನ್ನು ಸ್ಥಳೀಯ ಸೈಬರ್ ಗೂಢಚಾರರು ಪತ್ತೆ ಮಾಡಿದ್ದಾರೆ. ಶಂಕಿತರು ರಾಜಸ್ಥಾನದಿಂದ (Rajasthan) ಕಾರ್ಯನಿರ್ವಹಿಸುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಆನ್‌ಲೈನ್ ಮೂಲಕ ಜ್ಯೋತಿಷ್ಯ ಹೇಳುವುದಾಗಿ ನಂಬಿಸಿ ವಂಚಕರು 60 ಲಕ್ಷ ರೂ. ಗೂ ಹೆಚ್ಚು ಹಣ ಲೂಟಿ ಮಾಡಿದ್ದಾರೆ. ಇವರು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳಲ್ಲಿ ನಕಲಿ ಖಾತೆಗಳನ್ನು ರಚಿಸಿ ಜನರನ್ನು ವಂಚಿಸುತ್ತಿದ್ದರು.

ಡಿಜಿಟಲ್ ಅರೆಸ್ಟ್ ಪ್ರಕರಣ; ಬೆಂಗಳೂರಿನ ವೃದ್ಧೆಗೆ 24 ಕೋಟಿ ವಂಚಿಸಿದ್ದ 6 ಸೈಬರ್ ಖದೀಮರ ಬಂಧನ

ಕಳೆದ ಎರಡು ವರ್ಷಗಳಿಂದ ಆನ್‌ಲೈನ್ ಮೂಲಕ ದುರ್ಬಲ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಅಂತರರಾಜ್ಯ ಗ್ಯಾಂಗ್ ವೊಂದು ಕಾರ್ಯನಿರ್ವಹಿಸುತ್ತಿತ್ತು. ಸ್ಥಳೀಯ ಸೈಬರ್ ಗೂಢಚಾರರು ಈ ವಂಚನೆಯನ್ನು ಬೆಳಕಿಗೆ ತಂದಿದೆ.

ಜ್ಯೋತಿಷಿ ಪೂಜಾ ಕಿನ್ನರ್ ಮಾ ಮತ್ತು ಆಚಾರ್ಯ ವಿಕಾಸಶಾಸ್ತ್ರಿ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿಗಳು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಂತಹ ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿಕೊಳ್ಳುತ್ತಿತ್ತು. ಪ್ರೀತಿ, ಮದುವೆ ಮತ್ತು ಕುಟುಂಬ ವಿವಾದಗಳಂತಹ ಸೂಕ್ಷ್ಮ ವೈಯಕ್ತಿಕ ವಿಷಯಗಳನ್ನು ಪರಿಹರಿಸುವ ಆಧ್ಯಾತ್ಮಿಕ ತಜ್ಞರಂತೆ ನಟಿಸಿ ಅನೇಕರ ವಿಶ್ವಾಸಗಳಿಸಿದ್ದರು. ಅವರನ್ನು ಸಂಪರ್ಕಿಸಿದವರಿಗೆ ಪವಿತ್ರ ಆಚರಣೆಗಳು, ವಶೀಕರಣ ನೆಪದಲ್ಲಿ ಛಾಯಾಚಿತ್ರಗಳನ್ನು ಹಂಚಿಕೊಳ್ಳಲು ಮನವೊಲಿಸುತ್ತಿದ್ದರು. ಬಳಿಕ ನೇರ ವಿಡಿಯೋ ಕರೆಗಳನ್ನು ಮಾಡಿ ಬೆದರಿಕೆ ಒಡ್ಡುತ್ತಿದ್ದರು.

ಈ ದಂಧೆಯನ್ನು ಹಣಕಾಸು ಮತ್ತು ಡಿಜಿಟಲ್ ಫೋರೆನ್ಸಿಕ್ ತನಿಖೆ ನಡೆಸುತ್ತಿದ್ದು, ಕಳೆದೆರಡು ವರ್ಷಗಳಿಂದ ವಂಚಕರು ವಿವಿಧ ಬ್ಯಾಂಕ್ ಖಾತೆಗಳಿಂದ ಸುಮಾರು 60 ಲಕ್ಷ ರೂಪಾಯಿ ನಗದನ್ನು ಪಡೆದಿದ್ದರು ಎಂದು ತಿಳಿಸಿದೆ. ಆರೋಪಿಗಳು ಸುಮಾರು ಮುನ್ನೂರು ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿದ್ದು, 65 ಕ್ಕೂ ಹೆಚ್ಚು ಜನರನ್ನು ವಂಚಿಸಿದ್ದಾರೆ ಎನ್ನಲಾಗಿದೆ.

ತ್ವಿಶಾ ಶರ್ಮಾ ಸಾವಿನ ತನಿಖೆ ಸಿಬಿಐಗೆ ಒಪ್ಪಿಸಲು ಸುಪ್ರೀಂ ಕೋರ್ಟ್‌ ಆದೇಶ

ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ರಜನೀಶ್ ಗೋವಿಂದ್ ಲಾಲ್ ಭಾರ್ಗವ್ ಎಂಬಾತನನ್ನು ಬಿಕಾನೇರ್‌ನಲ್ಲಿ ಬಂಧಿಸಲಾಗಿದೆ. ವಿಕಾಸ್ ಪೋಖ್ರಾಜ್ ಭಾರ್ಗವ್ ಎಂಬಾತನನ್ನು ಜೈಪುರದಲ್ಲಿ ಬಂಧಿಸಲಾಯಿತು. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಪೊಲೀಸರು ನಾಲ್ಕು ದಿನಗಳ ಕಸ್ಟಡಿಗೆ ಪಡೆದಿದ್ದಾರೆ. ಮೂರನೇ ಆರೋಪಿ ರವಿ ಸತ್ಯನಾರಾಯಣ ಭಾರ್ಗವ್ ಎಂಬಾತ ತಲೆ ಮರೆಸಿಕೊಂಡಿದ್ದು ಆತನ ಹುಡುಕಾಟಕ್ಕೆ ಪೊಲೀಸರು ತಂಡವನ್ನು ರಚಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author