ಒಡಿಶಾ: ಸರ್ಕಾರಿ ಆಸ್ಪತ್ರೆಯ (odisha govt hospital) ಆವರಣದಲ್ಲಿ ಖಾಸಗಿ ಆಂಬ್ಯುಲೆನ್ಸ್‌ನಲ್ಲಿ ಆಮ್ಲಜನಕ ಸಿಲಿಂಡರ್ ಸ್ಫೋಟಗೊಂಡು (oxygen cylinder explode) ಓರ್ವ ರೋಗಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡ ಘಟನೆ ಒಡಿಶಾದ (Odisha hospital) ಮಯೂರ್‌ಭಂಜ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಮೃತರನ್ನು ಕುಂಡಬಾಯಿ ಗ್ರಾಮದ ಸುಜೋಗ್ ಬಾರಿಕ್ (46) ಎಂದು ಗುರುತಿಸಲಾಗಿದೆ. ಉಸಿರಾಟದ ತೊಂದರೆ ಮತ್ತು ಜ್ವರದಿಂದ ತೀವ್ರವಾಗಿ ಬಳಲುತ್ತಿದ್ದ ಸುಜೋಗ್ ಬಾರಿಕ್ ಅವರನ್ನು ಭುವನೇಶ್ವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ಅಲ್ಲಿಗೆ ಬಂದಿತ್ತು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಉದಾಲಾ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.
ಮಯೂರ್‌ಭಂಜ್ ಜಿಲ್ಲೆಯ ಉದಾಲಾ ಆಸ್ಪತ್ರೆಯಿಂದ ಭುವನೇಶ್ವರದ ಖಾಸಗಿ ಆಸ್ಪತ್ರೆಗೆ ಸುಜೋಗ್ ಬಾರಿಕ್ ಅವರನ್ನು ಸ್ಥಳಾಂತರಿಸು ವೇಳೆ ಆಂಬ್ಯುಲೆನ್ಸ್‌ನಲ್ಲಿ ಆಮ್ಲಜನಕ ಸಿಲಿಂಡರ್ ಸ್ಫೋಟಗೊಂಡಿತ್ತು. ಇದರಿಂದ ಸುಜೋಗ್ ಬಾರಿಕ್ ತೀವ್ರ ಸುಟ್ಟಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಇಬ್ಬರು ಸಹಾಯಕರು ಗಂಭೀರವಾಗಿ ಗಾಯಗೊಂಡರು. ಈ ಘಟನೆ ಗುರುವಾರ ರಾತ್ರಿ ನಡೆದಿದೆ.
Sanmati Hegde Column: ಬೇಡ್ತಿ ತಿರುವು: ಜೆನ್ʼಝಿ ವಿದ್ಯಾರ್ಥಿಯ ಆತಂಕ
ಸುಜೋಗ್ ಅವರನ್ನು ಗುರುವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಭುವನೇಶ್ವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಕುಟುಂಬಕ್ಕೆ ಸೂಚಿಸಿದ್ದರು.ಅದರಂತೆ ಕುಟುಂಬದವರು ರಾತ್ರಿ ವೇಳೆ ಅವರನ್ನು ಖಾಸಗಿ ಆಂಬ್ಯುಲೆನ್ಸ್ ಅನ್ನು ನಿಗದಿ ಪಡಿಸಿದರು.
ಸುಜೋಗ್ ಅವರನ್ನು ಆಂಬ್ಯುಲೆನ್ಸ್‌ಗೆ ಸ್ಥಳಾಂತರಿಸುವ ವೇಳೆ ವಾಹನದೊಳಗೆ ಇದ್ದ ಆಮ್ಲಜನಕ ಸಿಲಿಂಡರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡು ವಾಹನಕ್ಕೆ ಬೆಂಕಿ ತಗಲಿದೆ. ಸ್ಫೋಟದ ತೀವ್ರತೆಗೆ ಆಂಬ್ಯುಲೆನ್ಸ್‌ನ ಮೇಲ್ಛಾವಣಿ ಹಾರಿಹೋಗಿ ಸಮೀಪದಲ್ಲಿದ್ದ ಜನರ ಮೇಲೆ ಬಿದ್ದಿದೆ. ತಕ್ಷಣವೇ ಅಲ್ಲಿದ್ದವರು ಬೆಂಕಿಯಿಂದ ಆವೃತವಾಗಿದ್ದ ಆಂಬ್ಯುಲೆನ್ಸ್‌ನಿಂದ ಸುಜೋಗ್ ಅವರನ್ನು ಹೊರತೆಗೆದರು. ಆದರೆ ತೀವ್ರ ಸುಟ್ಟಗಾಯಗಳಿಂದಾಗಿ ಅವರು ಮೃತಪಟ್ಟಿದ್ದಾರೆ.
ಈ ಸಂದರ್ಭದಲ್ಲಿ ಇಬ್ಬರು ಸಹಾಯಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಉಪ-ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿದ ತಕ್ಷಣ ಉದಾಲಾದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು.
Bike Rally : ‘ಸೇವಾ ಜ್ಯೋತಿ’ ಅಭಿಯಾನ: ಬಿಜೆಪಿ ಕಾರ್ಯಕರ್ತರ ಬೈಕ್ ರ‍್ಯಾಲಿ
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು ಆಮ್ಲಜನಕ ಸಿಲಿಂಡರ್ ಸ್ಫೋಟದಿಂದ ಈ ಅವಘಡ ಸಂಭವಿಸಿದೆ. ರೋಗಿಗೆ ಆಮ್ಲಜನಕವನ್ನು ನೀಡಲು ಚಾಲಕರು ಆಮ್ಲಜನಕ ಸಿಲಿಂಡರ್‌ನ ವಾಲ್ವ್ (ಕವಾಟ) ತೆರೆದಾಗ ಸ್ಫೋಟ ಸಂಭವಿಸಿದೆ. ಆಂಬ್ಯುಲೆನ್ಸ್ ಅನ್ನು ಖಾಸಗಿ ಆಪರೇಟರ್‌ನಿಂದ ಬಾಡಿಗೆಗೆ ಪಡೆಯಲಾಗಿತ್ತು.ಆಮ್ಲಜನಕ ಸಿಲಿಂಡರ್‌ನಿಂದ ಹಠಾತ್ ಸೋರಿಕೆ ಉಂಟಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.