ನವದೆಹಲಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಿಂದ ಅಂತಾರಾಷ್ಟ್ರೀಯ ಭಯೋತ್ಪಾದಕ (terror Masood Azhar) ಎಂದು ಘೋಷಿಸಲ್ಪಟ್ಟಿರುವ ಮಸೂದ್ ಅಜರ್ (Masood Azhar) ಗೆ ಪಾಕಿಸ್ತಾನ (Pakistan) ಕವಲಾಗಿ ನಿಂತಿದೆ. ಈತ ಭಾರತದಲ್ಲಿ ನಡೆದಿರುವ ಹಲವಾರು ಭಯೋತ್ಪಾದಕ ಕೃತ್ಯಗಳ ಪ್ರಮುಖ ಅಪರಾಧಿಗಳಲ್ಲಿ ಒಬ್ಬನಾಗಿದ್ದಾನೆ. ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಈತ ಮುಂಬೈ, ಪಠಾಣ್‌ಕೋಟ್, ಪುಲ್ವಾಮಾ ದಾಳಿಯ ಸಂಚು ರೂಪಿಸಿದ್ದಾನೆ. ಇತ್ತೀಚೆಗೆ ದೆಹಲಿಯ ಕೆಂಪು ಕೋಟೆ ಸಮೀಪ ನಡೆದ ಸ್ಪೋಟದಲ್ಲಿ ಈತನ ಕೈವಾಡ ಇದೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.
ದೇಶದ ವಿವಿಧ ಭಾಗಗಳಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯಲ್ಲಿ ಮಸೂದ್ ಅಜರ್ ಪಾತ್ರವಿರುವುದು ಹಲವು ಬಾರಿ ಸಾಬೀತಾಗಿದೆ. 26/11 ಮುಂಬೈ ದಾಳಿಯಿಂದ ಕಳೆದ ಸೋಮವಾರ ನಡೆದ ಸ್ಫೋಟದವರೆಗೆ ಆತ ಪ್ರಮುಖ ಪಾತ್ರ ವಹಿಸಿರಬಹುದು ಎಂದು ಗುಪ್ತಚರ ಮೂಲಗಳು ಶಂಕೆ ವ್ಯಕ್ತಪಡಿಸಿವೆ.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಗಳಿಲ್ಲ; ಈ ತಾಣದಲ್ಲಿ ಆಡಲಿದೆ ಆರ್‌ಸಿಬಿ!
ಮಸೂದ್ ಅಜರ್ ಗೆ ನೆರಳಾಗಿ ಇರುವುದಿಲ್ಲ ಎಂದು ಪಾಕಿಸ್ತಾನ ಬಹಿರಂಗವಾಗಿ ಹೇಳಿಕೊಂಡು ತಿರುಗಾಡುತ್ತಿದ್ದರೂ ಅದು ಈಗ ಅಜರ್‌ಗೆ ಆತಿಥ್ಯ ನೀಡಿರುವುದು ಬಹಿರಂಗವಾಗಿದೆ. ಆತ ಇಸ್ಲಾಮಾಬಾದ್‌ನಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದಾನೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಇತ್ತೀಚೆಗೆ ದೆಹಲಿಯ ಕೆಂಪು ಕೋಟೆ ಸಮೀಪ ನಡೆದ ಸ್ಪೋಟದಲ್ಲಿ ಆತ ಸಂಬಂಧ ಹೊಂದಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ಕಳೆದ ಸೋಮವಾರ ಅಂದರೆ ನವೆಂಬರ್ 10 ರಂದು ಹುಂಡೈ ಐ20 ಕಾರು ಸ್ಫೋಟಗೊಂಡು ಒಂಬತ್ತು ಮಂದಿ ಸಾವನ್ನಪ್ಪಿದ್ದರು. ಇದನ್ನು ಮಾಡುವಲ್ಲಿ ಜೈಶ್-ಎ-ಮೊಹಮ್ಮದ್ ಪಾತ್ರವಿರುವುದಾಗಿ ತಿಳಿಸು ಬಂದಿದೆ.
ಯಾರು ಮಸೂದ್ ಅಜರ್ ?
ಜೈಶ್-ಎ-ಮೊಹಮ್ಮದ್ ಸಂಘಟನೆಯ ಸ್ಥಾಪಕನಾಗಿರುವ ಮಸೂದ್ ಅಜರ್ ಭಾರತದಲ್ಲಿ ಹಲವಾರು ಭಯೋತ್ಪಾದಕ ದಾಳಿಗಳಿಗೆ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಐಸಿ-814 ವಿಮಾನ ಅಪಹರಣದ ವೇಳೆ ಒತ್ತೆಯಾಳುಗಳಾಗಿದ್ದ ವಿಮಾನ ಪ್ರಯಾಣಿಕರಿಗೆ ಬದಲಾಗಿ ಭಾರತದಲ್ಲಿ ಬಂಧನದಲ್ಲಿದ್ದ ಈತನನ್ನು ಬಿಡುಗಡೆ ಮಾಡಲಾಗಿತ್ತು. ಬಳಿಕ ಇಟ ಜೆಇಎಂ ಅನ್ನು ಸ್ಥಾಪಿಸಿದನು. ಪಾಕಿಸ್ತಾನ ಸರ್ಕಾರದ ಬೆಂಬಲದೊಂದಿಗೆ ಈತ ತನ್ನ ಸಂಘಟನೆಯನ್ನು ಇಲ್ಲಿ ರಾಜರೋಷವಾಗಿಯೇ ಬೆಳೆಸುತ್ತಿದ್ದಾನೆ ಎನ್ನಲಾಗುತ್ತಿದೆ.
2001ರ ಸಂಸತ್ ದಾಳಿ, 2008 ರ ಮುಂಬೈ ದಾಳಿ, 2016 ರ ಪಠಾಣ್‌ಕೋಟ್ ವಾಯುನೆಲೆ ದಾಳಿ ಮತ್ತು 2019 ರ ಪುಲ್ವಾಮಾ ದಾಳಿಯಲ್ಲೂ ಈತ ಭಾಗಿಯಾಗಿದ್ದಾನೆ ಎನ್ನಲಾಗಿದೆ.
ದೆಹಲಿಯಲ್ಲಿ ಇತ್ತೀಚಿಗೆ ನಡೆದ ಸ್ಪೋಟದಲ್ಲಿ ಬಂಧಿತರಾಗಿರುವ ಶಂಕಿತರಿಂದ ದಾಳಿಗೆ ಜೈಶ್ ಸಂಪರ್ಕವಿರುವುದಾಗಿ ತಿಳಿದು ಬಂದಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಇಸ್ಲಾಮಿಕ್ ಸೆಮಿನರಿಯಲ್ಲಿ ಸಾರ್ವಜನಿಕ ಭಾಷಣ ಮಾಡುತ್ತಿದ್ದ ಅಜರ್ ಈ ವೇಳೆ ಭಾರತದ ಮೇಲೆ ದಾಳಿಗಳನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದನು ಎಂದು ತಿಳಿದು ಬಂದಿದೆ.
ಅಪರೇಷನ್ ಸಿಂದೂರ್ ದಾಳಿಗೆ ಪ್ರತಿಕಾರ?
ಪಹಲ್ಗಾಮ್ ನಲ್ಲಿ ಕಳೆದ ಏಪ್ರಿಲ್ ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಅಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ನಡೆಸಿತ್ತು. ಈ ವೇಳೆ ಬಹಾವಲ್ಪುರದ ಜಾಮಿಯಾ ಮಸೀದಿ ಸುಭಾನ್ ಅಲ್ಲಾಹ್ ಮೇಲೆ ನಡೆದ ದಾಳಿಯಲ್ಲಿ ಅಜರ್ ಕುಟುಂಬದ ಸುಮಾರು 10 ಮಂದಿ ಸಾವನ್ನಪ್ಪಿದ್ದರು.
ಇದನ್ನೂ ಓದಿ: Delhi Blast: ಆ 3 ಗಂಟೆಯ ರಹಸ್ಯ; ದೆಹಲಿ ಸ್ಫೋಟಕ್ಕೂ ಮುನ್ನ ಕಾರು ನಿಲ್ಲಿಸಿ ಬಾಂಬರ್ ಮಾಡಿದ್ದೇನು?
ಇದರ ಬಳಿಕ ಆತ ಈ ಸಾವಿನ ಬಗ್ಗೆ ತನಗೆ ಯಾವುದೇ ವಿಷಾದ ಅಥವಾ ಹತಾಶೆ ಇಲ್ಲ. ತಾನು ಕೂಡ ತನ್ನ ಕುಟುಂಬ ಸದಸ್ಯರೊಂದಿಗೆ ಸತ್ತಿದ್ದರೆ ಒಳ್ಳೆಯದಾಗಿರುತ್ತಿತ್ತು ಎಂದು ಹೇಳಿದ್ದನು.
ಜೈಶ್ ಇತ್ತೀಚೆಗೆ ಮಹಿಳಾ ಬ್ರಿಗೇಡ್ ಅನ್ನು ಪ್ರಾರಂಭಿಸಿದೆ. ಸಹೋದರ ಮಸೂದ್ ಅಜರ್ ನಿಂದ ತರಬೇತಿ ಪಡೆದ ಸಾದಿಯಾ ಅಜ್ಫರ್ ಇದರ ನೇತೃತ್ವ ವಹಿಸಿದ್ದಾರೆ. ಸಾದಿಯಾಳ ಪತಿ, ಭಯೋತ್ಪಾದಕ ಯೂಸುಫ್ ಅಜರ್ ಅಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಕೊಲಲ್ಪಟ್ಟಿದ್ದಾನೆ.