ಕೋಲ್ಕತ್ತಾ: ಭಾರತೀಯ ಸೇನೆ (indian Army), ಗಡಿ ಭದ್ರತಾ ಪಡೆ (india Border Security Force) ಮತ್ತು ರೈಲ್ವೆ (indian Railways) ಕುರಿತು ಬೇಹುಗಾರಿಕೆ (Spy) ನಡೆಸುತ್ತಿದ್ದ ಪಾಕಿಸ್ತಾನದ ಪ್ರಜೆಯೊಬ್ಬನನ್ನು (Pakistan nationals) ಪಶ್ಚಿಮ ಬಂಗಾಳದಲ್ಲಿ (west bengal) ಬಂಧಿಸಲಾಗಿದೆ. ಆರೋಪಿಯನ್ನು ಪಾಕಿಸ್ತಾನದ ಫೈಸಲಾಬಾದ್ ನಿವಾಸಿ ರಾಣಾ ರೌಫ್ ಎಂದು ಗುರುತಿಸಲಾಗಿದೆ. ಈತ ನಕಲಿ ದಾಖಲೆಗಳನ್ನು ತಯಾರಿಸಿ ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದನು. ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಜೊತೆ ನೇರ ಸಂಪರ್ಕ ಹೊಂದಿದ್ದ ಈತನನ್ನು ಪಶ್ಚಿಮ ಬಂಗಾಳದ ವಿಶೇಷ ಕಾರ್ಯಪಡೆ (STF) ಬಂಧಿಸಿದೆ.
ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ ಜೊತೆ ನೇರ ಸಂಪರ್ಕ ಹೊಂದಿರುವ ಶಂಕೆಯ ಮೇರೆಗೆ ಪಾಕಿಸ್ತಾನಿ ಗೂಢಚಾರನನ್ನು ಪಶ್ಚಿಮ ಬಂಗಾಳದ ವಿಶೇಷ ಕಾರ್ಯಪಡೆ ಬಂಧಿಸಿದೆ. ಇಟ ಭಾರತೀಯ ಸೇನೆ, ಗಡಿ ಭದ್ರತಾ ಪಡೆ ಮತ್ತು ರೈಲ್ವೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸುತ್ತಿದ್ದ ಎಂದು ಆರೋಪಿಸಲಾಗಿದೆ.
2012ರಿಂದ ಭಾರತದಲ್ಲಿ ನೆಲೆಯಾಗಿರುವ ಪಾಕಿಸ್ತಾನದ ಫೈಸಲಾಬಾದ್ ನಿವಾಸಿ ರಾಣಾ ರೌಫ್ ನನ್ನು ಐಎಸ್‌ಐ ನೇರವಾಗಿ ನೇಮಕ ಮಾಡಿದೆ. ಈತನ ಬಳಿ ನಕಲಿ ಭಾರತೀಯ ದಾಖಲೆಗಳು ಕಂಡು ಬಂದಿದ್ದು, ಈ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ರಾಣಾ ರೌಫ್ 2012ರಿಂದ ನೇಪಾಳದಲ್ಲಿ ನೆಲೆಸಿದ್ದು, ಅಕ್ರಮವಾಗಿ ಗಡಿ ದಾಟಿ ಭಾರತಕ್ಕೆ ಬಂದಿದ್ದನು. ಆತ ಪಶ್ಚಿಮ ಬಂಗಾಳಕ್ಕೆ ಬಂದು ಬಳಿಕ ಕೋಲ್ಕತ್ತಾದಲ್ಲಿ ಶಾಶ್ವತ ಗುರುತು ಪಡೆಯಲು ಪ್ರಯತ್ನಿಸಿದ್ದನು. ರೌಫ್ ವಹ್ಫ್ ಎಂಬ ಹೆಸರಿನಲ್ಲಿ ಕೋಲ್ಕತ್ತಾದ ಟೋಪ್ಸಿಯಾದಲ್ಲಿ ನಕಲಿ ವಿಳಾಸ ಪಡೆದು ಭಾರತೀಯ ಗುರುತಿನ ದಾಖಲೆಗಳನ್ನು ಮದುಕೊಂಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ರೌಫ್ ಕೋಲ್ಕತ್ತಾದಲ್ಲಿ ಸೇನೆಯ ಪೂರ್ವ ಕಮಾಂಡ್, ಬಿಎಸ್‌ಎಫ್ ಚಲನೆ ಮತ್ತು ರೈಲ್ವೆ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸುತ್ತಿದ್ದನು. ನೇಪಾಳದಲ್ಲಿ ವಾಸಿಸುವ ಭಾರತೀಯ ಪ್ರಜೆಗಳನ್ನು ತನ್ನ ಬೇಹುಗಾರಿಕೆ ಜಾಲಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ರೌಫ್ ಬಾಂಗ್ಲಾದೇಶದ ಮೂಲಕ ಪಾಕಿಸ್ತಾನಕ್ಕೆ ಪ್ರಯಾಣಿಸಲು ತಯಾರಿ ನಡೆಸುತ್ತಿದ್ದನು. ಆತನ ಜೊತೆ ಸಂಬಂಧ ಹೊಂದಿದ್ದ ಇನ್ನೊಬ್ಬ ವ್ಯಕ್ತಿಯನ್ನು ಕೂಡ ಬಂಧಿಸಲಾಗಿದೆ. ಅವರ ಯೋಜನೆಗಳ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.