ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಟ್ರಕ್ ಚಾಲಕನನ್ನು ಬೇಹುಗಾರಿಕೆಗೆ ಭಾರತದೊಳಗೆ ಬಿಟ್ಟ ಬಿಟ್ಟ ಪಾಕಿಸ್ತಾನದ ಐಎಸ್‌ಐ; ಸಂಚು ಬಯಲಾಗಿದ್ದು ಹೇಗೆ?

ಪಾಕಿಸ್ತಾನದ ಐಎಸ್ಐ ಟ್ರಕ್ ಚಾಲಕನೊಬ್ಬನನ್ನು ಗಡಿ ಬೇಹುಗಾರಿಕೆಗೆ ನಿಯೋಜಿಸಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಥುವಾದಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಇದು ಬೆಳಕಿಗೆ ಬಂದಿದೆ. ಪಾಕಿಸ್ತಾನದ ಹ್ಯಾಂಡ್ಲರ್‌ಗಳಿಗಾಗಿ ಆತ ನೇರ ಕಣ್ಗಾವಲು ವ್ಯವಸ್ಥೆಯನ್ನು ಒದಗಿಸಲು ಕೆಮರಾವನ್ನು ಸ್ಥಾಪಿಸಿ ಆತ ಸಿಕ್ಕಿಬಿದ್ದಿದ್ದಾನೆ.

ಸಂಗ್ರಹ ಚಿತ್ರ

ಜಮ್ಮು: ಪಾಕಿಸ್ತಾನದ (Pakistan) ಐಎಸ್‌ಐಗೆ (ISI) ಗಡಿ ಚಟುವಟಿಕೆ ಕುರಿತು ನೇರ ಮಾಹಿತಿ ಲಭ್ಯವಾಗುವಂತೆ ಮಾಡಿದ ಆರೋಪದಲ್ಲಿ ಟ್ರಕ್ ಚಾಲಕನೊಬ್ಬನನ್ನು (Truck Driver) ಕಥುವಾದಲ್ಲಿ ಬಂಧಿಸಲಾಗಿದೆ. 24 ವರ್ಷದ ಟ್ರಕ್ ಚಾಲಕ ಅಮನ್ ಪಾಕಿಸ್ತಾನದ ಹ್ಯಾಂಡ್ಲರ್‌ಗಳಿಗಾಗಿ ನೇರ ಕಣ್ಗಾವಲು ವ್ಯವಸ್ಥೆಯನ್ನು ಒದಗಿಸಲು ಕೆಮರಾವನ್ನು ಸ್ಥಾಪಿಸಿ ಸಿಕ್ಕಿಬಿದ್ದಿದ್ದಾನೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು (Jammu and Kashmir Police) ಮತ್ತು ಗುಪ್ತಚರ ಸಂಸ್ಥೆಗಳ ಜಂಟಿ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಅಮನ್ ವಿರುದ್ಧ 'ಅಧಿಕೃತ ರಹಸ್ಯಗಳ ಕಾಯ್ದೆ'ಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಾಮಾಜಿಕ ಮಾಧ್ಯಮದ ಮೂಲಕ ಪಾಕಿಸ್ತಾನದ ಐಎಸ್‌ಐಗೆ ಸಂಬಂಧಿಸಿದ ಏಜೆಂಟ್‌ಗಳು ಅಮನ್‌ನನ್ನು ಸೆಳೆದರು. ಅವರ ಪ್ರಭಾವಕ್ಕೆ ಒಳಗಾದ ಆತ ಬಳಿಕ ಸೂಕ್ಷ್ಮವಾದ ಕಥುವಾ ಗಡಿ ಪ್ರದೇಶದಲ್ಲಿನ ಸೇನಾ ನೆಲೆಗಳು ಮತ್ತು ಸರಕು ಸಾಗಣೆ ಮಾರ್ಗಗಳ ಬಗ್ಗೆ ಅವರಿಗಾಗಿ ಮಾಹಿತಿ ಕಲೆಹಾಕುವ ಕೆಲಸ ಮಾಡಲಾರಂಭಿಸಿದನು. ಇದಕ್ಕೆ ಸಂಬಂಧಿಸಿ ಆತನ ಸುಳಿವು ಸಿಕ್ಕಿದ್ದು ಹಾರ್ಡ್‌ವೇರ್ ಉಪಕರಣದ ಮೂಲಕ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಧಾನಿ ತಾಯಿಗೆ ಅಪಮಾನ; ರಾಹುಲ್ ಗಾಂಧಿ ನೈತಿಕ ದಿವಾಳಿತನಕ್ಕೆ ಇಳಿದಿದ್ದಾರೆ ಎಂದು ಸಚಿವ ಜೋಶಿ ಕಿಡಿ

ಅಮನ್ ತನ್ನ ಮನೆಯ ಹೊರಗೆ ಸಿಮ್ ಸಕ್ರಿಯಗೊಳಿಸಿದ ಸಿಸಿಟಿವಿ ಕೆಮರಾ ಅಳವಡಿಸಿದ್ದನು. ಇದು ಗಡಿಯ ಸಮೀಪ ಭದ್ರತಾ ಪಡೆಗಳು ಆಗಾಗ್ಗೆ ಬಳಸುವ ರಸ್ತೆಯತ್ತ ತಿರುಗುತ್ತಿತ್ತು. ಇದರಿಂದ ದೃಶ್ಯಾವಳಿಗಳನ್ನು ನೇರ ಪ್ರಸಾರದ ಮೂಲಕ ಪಾಕಿಸ್ತಾನದ ಹ್ಯಾಂಡ್ಲರ್‌ಗಳಿಗೆ ಕಳುಹಿಸಲಾಗುತ್ತಿತ್ತು. ಇದನ್ನು ಅಳವಡಿಸಿದ್ದಕ್ಕಾಗಿ ಆತನಿಗೆ 20,000 ರೂಪಾಯಿಗಳನ್ನು ಪಾವತಿಸಲಾಗಿತ್ತು. ಈ ಹಣವನ್ನು ದುಬೈ ಮೂಲಕ ಆತನ ಕೈ ಸೇರಿತ್ತು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ.

ಅಮನ್ ಬಂಧನದ ಬಳಿಕ ಆತನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಕಳೆದ ನಾಲ್ಕು ತಿಂಗಳಲ್ಲಿ ಜಮ್ಮು ಪ್ರದೇಶದಲ್ಲಿ ಪತ್ತೆಯಾದ ಐಎಸ್‌ಐ ಜಾಲಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ.ಕಳೆದ ಮೇ ತಿಂಗಳಲ್ಲಿ ಜಮ್ಮುವಿನ ಮಕ್ವಾಲ್ ಗ್ರಾಮದ ಶಾಲಾ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದ 23 ವರ್ಷದ ಕರಣ್ ಕುಮಾರ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ಪಂಜಾಬ್‌ನಲ್ಲಿ ನಿಯೋಜನೆಗೊಂಡಿರುವ ಗಡಿ ಭದ್ರತಾ ಪಡೆಯ ಯೋಧನೆಂದು ನಟಿಸಿದ ಮಹಿಳೆಯೊಬ್ಬಳು ಆತನನ್ನು ಸ್ನ್ಯಾಪ್‌ಚಾಟ್ ಮೂಲಕ ಹನಿ ಟ್ರ್ಯಾಪ್ ಗೆ ಒಳಪಡಿಸಿದ್ದಳು. ಬಂಕರ್‌, ಮೇಲ್ಸೇತುವೆಗಳ ಫೋಟೋಗಳನ್ನು ಕಳುಹಿಸಲು ಅವನನ್ನು ಪ್ರೇರೇಪಿಸಿ ಅದಕ್ಕಾಗಿ ಅವನಿಗೆ 2,000 ರೂಪಾಯಿಗಳನ್ನು ನೀಡಿದ್ದಳು ಎಂದು ಆರೋಪಿಸಲಾಗಿದೆ.

2021ರ ಚುನಾವಣಾ ಘರ್ಷಣೆ : ನಂದಿಗ್ರಾಮದ ಬಳಿಕ ರೆಜಿನಗರದ ಸ್ವತಂತ್ರ ಅಭ್ಯರ್ಥಿಯ ಬಂಧನ!

ಇನ್ನೊಂದು ಪ್ರಕರಣದಲ್ಲಿ ಪಠಾಣ್‌ಕೋಟ್‌ನಲ್ಲಿ ಮಾಡ್ಯೂಲ್ ಅನ್ನು ಪತ್ತೆಹಚ್ಚಲಾಗಿದೆ. ಜಮ್ಮು-ಪಠಾಣ್‌ಕೋಟ್ ರಾಷ್ಟ್ರೀಯ ಹೆದ್ದಾರಿಯ ಮೇಲಿರುವ ಸುಜನ್‌ಪುರದ ಅಂಗಡಿಯ ಹೊರಗೆ ಸಿಸಿಟಿವಿ ಕೆಮರಾ ಅಳವಡಿಸಿದ್ದಕ್ಕಾಗಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಕಾಶ್ಮೀರಕ್ಕೆ ಸೇನಾ ಪಡೆಗಳ ಚಲನೆಯನ್ನು ಇದು ಸೆರೆ ಹಿಡಿದು ಪಾಕಿಸ್ತಾನದ ಹ್ಯಾಂಡ್ಲರ್ ಗಳಿಗೆ ಒದಗಿಸುತ್ತಿತ್ತು ಎಂದು ಆರೋಪಿಸಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author