ಮುಂಬೈ, ಏ. 20: ಮಹಾರಾಷ್ಟ್ರದ (Maharashtra) ಪರತ್ವಾಡಾದಲ್ಲಿ (Paratwada) ನಡೆದ ಕಿರಿಯ ವಯಸ್ಸಿನ ಬಾಲಕಿಯರ ಲೈಂಗಿಕ ಶೋಷಣೆ ಪ್ರಕರಣವು ಈಗ ಹೊಸ ತಿರುವು ಪಡೆದಿದೆ. ಈ ಜಾಲದ ಮುಖ್ಯ ಸಂಚುಕೋರ 19 ವರ್ಷದ ಅಯಾನ್ ಅಹ್ಮದ್‌ನ (Ayan Ahmad) ಐಷಾರಾಮಿ ಜೀವನಶೈಲಿ (luxury lifestyle) ಮತ್ತು ಆತನ ಅಕ್ರಮ ಸಂಪತ್ತಿನ ಮೂಲಗಳ ಬಗ್ಗೆ ತನಿಖಾಧಿಕಾರಿಗಳು ಈಗ ಆಳವಾದ ಸಂಶೋಧನೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೊಗಳಲ್ಲಿ ಅಯಾನ್ ಐಷಾರಾಮಿ ಕಾರುಗಳು, ಕಂತೆ ಕಂತೆ ನಗದು ಮತ್ತು ದುಬಾರಿ ಗ್ಯಾಜೆಟ್‌ಗಳನ್ನು ಪ್ರದರ್ಶಿಸುತ್ತಿರುವುದು ಕಂಡುಬಂದಿದ್ದು, ಇದು ತನಿಖೆಯ ದಿಕ್ಕನ್ನು ಬದಲಿಸಿದೆ.
ಸಾಮಾಜಿಕ ಮಾಧ್ಯಮದ ರೀಲ್ಸ್‌ಗಳಲ್ಲಿ ಆರೋಪಿಯು ಮಹೀಂದ್ರಾ ಥಾರ್ (MH-27-DL-3100) ಚಲಾಯಿಸುತ್ತಿರುವುದು, ಕೈಯಲ್ಲಿ ಬಂದೂಕು ಹಿಡಿದಿರುವುದು ಮತ್ತು ಐಫೋನ್‌ಗಳಂತಹ ದುಬಾರಿ ಸ್ಮಾರ್ಟ್‌ಫೋನ್‌ಗಳನ್ನು ಪ್ರದರ್ಶಿಸಿರುವುದು ಪತ್ತೆಯಾಗಿದೆ. ಇಷ್ಟು ಕಡಿಮೆ ವಯಸ್ಸಿನಲ್ಲಿ ಈತ ಇಷ್ಟೊಂದು ಸಂಪತ್ತನ್ನು ಹೇಗೆ ಗಳಿಸಿದ? ಈ ಹಣವು ಲೈಂಗಿಕ ಶೋಷಣೆಯ ಜಾಲದಿಂದ ಬಂದಿದ್ದೇ ಅಥವಾ ಬೇರೆ ಯಾವುದಾದರೂ ಅಪರಾಧ ಲೋಕದ ಸಂಪರ್ಕವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಡಿಯೊದಲ್ಲಿ ಕಂಡುಬಂದಿರುವ ಬಂದೂಕು ಪರವಾನಗಿ ಹೊಂದಿದೆಯೇ ಅಥವಾ ಕಾನೂನುಬಾಹಿರವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ಅಯಾನ್ ಅಹ್ಮದ್‌ನ ಬರ್ತ್‌ಡೇ ಆಚರಣೆಯ ವಿಡಿಯೊ:
ಅಕ್ರಮ ಚಟುವಟಿಕೆಗಳ ತಾಣ
ಅಮರಾವತಿಯ ಕಟೋರಾ ನಾಕಾ ಪ್ರದೇಶದ ವಸತಿ ಸಂಕೀರ್ಣವೊಂದರ ಮೂರನೇ ಮಹಡಿಯಲ್ಲಿದ್ದ ಫ್ಲಾಟ್ ಈ ದಂಧೆಯ ಕೇಂದ್ರಬಿಂದುವಾಗಿತ್ತು ಎಂದು ಹೇಳಲಾಗಿದೆ. ಈ ಫ್ಲಾಟ್‌ನಲ್ಲಿ ಅಶ್ಲೀಲ ವಿಡಿಯೊಗಳನ್ನು ಚಿತ್ರೀಕರಿಸಲಾಗುತ್ತಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ತಡರಾತ್ರಿಯಲ್ಲಿ ಯುವಕ-ಯುವತಿಯರು ಮುಖ ಮುಚ್ಚಿಕೊಂಡು ಇಲ್ಲಿಗೆ ಬರುತ್ತಿದ್ದರು ಎಂದು ಸ್ಥಳೀಯರು ದೂರಿದ್ದಾರೆ.
ಮೇಲ್ಜಾತಿಯ ಪೊಲೀಸ್ ಅಧಿಕಾರಿಗಳಿಂದ ಕಿರುಕುಳ; ದಲಿತ ಇನ್ಸ್‌ಪೆಕ್ಟರ್ ಆರೋಪ, ವಿಡಿಯೊ ವೈರಲ್
ತನಿಖೆಯ ಪ್ರಗತಿ
ಸುಮಾರು 200ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರನ್ನು ಶೋಷಿಸಿರುವ ಆರೋಪ ಅಯಾನ್ ಮೇಲಿದೆ. ಈ ಸಂಬಂಧ ಈಗಾಗಲೇ ಎಂಟು ಮಂದಿಯನ್ನು ಬಂಧಿಸಲಾಗಿದ್ದು, ವಿಶೇಷ ತನಿಖಾ ತಂಡವು (SIT) ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಲ್ಯಾಪ್‌ಟಾಪ್, ಹಾರ್ಡ್ ಡಿಸ್ಕ್ ಮತ್ತು ಮೊಬೈಲ್ ಹಲವು ಡಿಜಿಟಲ್ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪೊಲೀಸರು ಈಗ ಅಯಾನ್‌ನ ಹಣಕಾಸಿನ ವಹಿವಾಟು ಮತ್ತು ಈ ದಂಧೆಯ ಹಿಂದೆ ಇರುವ ದೊಡ್ಡ ಜಾಲವನ್ನು ಬೇಧಿಸಲು ಮುಂದಾಗಿದ್ದಾರೆ.