ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಗನಿಗೆ ಬಲವಂತವಾಗಿ ಆಸಿಡ್ ಕುಡಿಸಿ, ಕತ್ತು ಹಿಸುಕಿ ಕೊಂದು ಆತ್ಮಹತ್ಯೆ ಎಂದು ನಾಟಕವಾಡಿದ ಪೋಷಕರು!

Crime News: ಮದ್ಯದ ಚಟವಿದ್ದ 23 ವರ್ಷದ ಯುವಕನೊಬ್ಬನನ್ನು ಪೋಷಕರೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಗುಜರಾತ್‌ನ ರಾಜ್‌ಕೋಟ್‌ನ ಗುಂಡಾಲಾ ಗ್ರಾಮದಲ್ಲಿ ನಡೆದಿದೆ. ಪುತ್ರನ ಕತ್ತು ಹಿಸುಕಿ ಕೊಂದ ಪೋಷಕರು, ನಂತರ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಜೂನ್ 30 ರಂದು ಈ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ

ಗಾಂಧಿನಗರ, ಜು.4: 23 ವರ್ಷದ ಯುವಕನೊಬ್ಬನನ್ನು ಪೋಷಕರೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಗುಜರಾತ್‌ನ (Gujarat) ರಾಜ್‌ಕೋಟ್‌ನ ಗುಂಡಾಲಾ ಗ್ರಾಮದಲ್ಲಿ ನಡೆದಿದೆ. ಮಗನಿಗೆ ಆಸಿಡ್ ಕುಡಿಯಲು ಬಲವಂತವಡಿಸಿದ್ದಲ್ಲದೆ, ನಂತರ ಕತ್ತು ಹಿಸುಕಿ ಕೊಂದ ಪೋಷಕರು ನಂತರ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಜೂನ್ 30 ರಂದು ಈ ಘಟನೆ ನಡೆದಿದೆ. ಸಂಪೂರ್ಣ ತನಿಖೆ ಮತ್ತು ಮರಣೋತ್ತರ ಪರೀಕ್ಷೆಯಲ್ಲಿ ರಾಮ್ ಬಾಬುಭಾಯಿ ಬಂಭವ ಎಂದು ಗುರುತಿಸಲ್ಪಟ್ಟ ವ್ಯಕ್ತಿಯನ್ನು ಅವನ ಹೆತ್ತವರೇ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ (Crime News).

ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ, ತನ್ನ ಪತಿಯ ಸಾವಿನಲ್ಲಿ ಅತ್ತೆ-ಮಾವನ ಪಾತ್ರ ಬಹಿರಂಗವಾದ ಹಿನ್ನೆಲೆಯಲ್ಲಿ, ಅವರ ವಿರುದ್ಧ ಪತ್ನಿ ಅಧಿಕೃತ ದೂರು ದಾಖಲಿಸಿದ್ದಾರೆ. ಮೃತ ರಾಮ್‌ಗೆ ವಿಪರೀತ ಮದ್ಯದ ಚಟವಿತ್ತು. ಇದು ಅವನ ತಂದೆ ಬಾಬುಭಾಯ್ ಅಲಿಯಾಸ್ ಅತುಲ್ಭಾಯ್ ಗುಘಾಭಾಯ್ ಬಂಭವ ಮತ್ತು ತಾಯಿ ಮನೀಷಾಬೆನ್ ಅಲಿಯಾಸ್ ಮೋತಿಬೆನ್ ಅವರ ಕೋಪಕ್ಕೆ ಕಾರಣವಾಗಿತ್ತು. ಕುಡಿತದ ಚಟ ಆಗಾಗ ಪೋಷಕರೊಂದಿಗೆ ಆತನ ಜಗಳಕ್ಕೆ ಕಾರಣವಾಗಿತ್ತು.

ಘಟನೆ ನಡೆದ ದಿನ ಅಂದರೆ ಜೂನ್ 30 ರಂದು, ಪೋಷಕರು ತಮ್ಮ ಮಗನ ಕುಡಿತದ ಅಭ್ಯಾಸದ ಬಗ್ಗೆ ವಾಗ್ವಾದ ನಡೆಸಿದರು. ಈ ವೇಳೆ ತೀವ್ರ ಜಗಳವುಂಟಾಗಿದ್ದು, ತಾಯಿ ತನ್ನ ಮಗನಿಗೆ ಬಲವಂತವಾಗಿ ಆಸಿಡ್ ಕುಡಿಸಿದ್ದಾಳೆ. ನಂತರ ತಂದೆ ಅವನ ಮೇಲೆ ಹಲ್ಲೆ ನಡೆಸಿ, ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಅಪರಾಧವನ್ನು ಮರೆಮಾಚಲು, ಇದನ್ನು ಆತ್ಮಹತ್ಯೆ ಎಂದು ಬಿಂಬಿಸಿದರು. ಗೊಂಡಲ್ ಸಿವಿಲ್ ಆಸ್ಪತ್ರೆಯಲ್ಲಿ ತಮ್ಮ ಮಗನ ಮರಣೋತ್ತರ ಪರೀಕ್ಷೆಯನ್ನು ತ್ವರಿತಗೊಳಿಸಲು ಅವರು ಸ್ಥಳೀಯ ನಾಯಕರನ್ನು ಸಂಪರ್ಕಿಸಿದರು ಎಂದು ಹೇಳಲಾಗಿದೆ.

ಥೈಲೆಂಡ್‌ನಲ್ಲಿ ಭೀಕರ ಅಪಘಾತ: 11 ವರ್ಷದ ಬಾಲಕ ಚಾಲನೆ ಮಾಡಿದ ಟ್ರಕ್‌ ಹರಿದು 9 ಭಿಕ್ಷುಕರ ದುರ್ಮರಣ

ಪೊಲೀಸರು ಘಟನೆಯ ತನಿಖೆ ಆರಂಭಿಸುತ್ತಿದ್ದಂತೆ, ಮೃತನ ಪೋಷಕರ ಪಾತ್ರ ಬೆಳಕಿಗೆ ಬಂದಿದೆ. ಶವಪರೀಕ್ಷೆಯ ಫಲಿತಾಂಶದಲ್ಲಿ ರಾಮ್ ಸಾವು, ವಿಷಪ್ರಾಶನ ಮತ್ತು ಕತ್ತು ಹಿಸುಕುವಿಕೆಯಿಂದ ಸಂಭವಿಸಿದೆ ಎಂದು ಬಹಿರಂಗವಾಗಿದೆ. ಈ ಸಂಬಂಧ ಬಾಬುಭಾಯ್ ಮತ್ತು ಮೋತಿಬೆನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಗಂಡನನ್ನೇ ಕೊಲೆಗೈದ ಪತ್ನಿ

ಕಲ್ಲಿನಿಂದ‌ ಜಜ್ಜಿ ಗಂಡನನ್ನೇ ಪತ್ನಿ ಕೊಲೆಗೈದಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮದಲ್ಲಿ ನಡೆದಿದೆ. ಹತ್ಯೆ ಬಳಿಕ ತಂದೆಯ ಶವ ಸಾಗಿಸಲು ತಾಯಿಗೆ ಪುತ್ರ ಸಹಾಯ ಮಾಡಿರುವುದು ತನಿಖೆ ವೇಳೆ ಬಯಲಾಗಿದ್ದು, ಸದ್ಯ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಸಾವಿತ್ರಮ್ಮ(40) ಹಾಗೂ ಹನುಮೇಗೌಡ (20) ಬಂಧಿತ ತಾಯಿ ಮತ್ತು ಪುತ್ರ. ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮದಲ್ಲಿ ಜೂ. 23 ರಂದು ಕಲ್ಲಿನಿಂದ ಜಜ್ಜಿ ಶಿವಪ್ಪ(42) ಎಂಬುವರ ಕೊಲೆ ಮಾಡಲಾಗಿತ್ತು. ದೂರು ದಾಖಲಿಸಿಕೊಂಡ ಹರಿಹರ ಗ್ರಾಮಾಂತರ ಠಾಣಾ ಪೊಲೀಸರು, ಪ್ರಾಥಮಿಕ ತನಿಖೆ ವೇಳೆ ಪತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ ಪತ್ನಿ ಸಾವಿತ್ರಮ್ಮ ಹಾಗೂ ಶವ ಸಾಗಿಸಲು ಸಹಾಯ ಮಾಡಿದ್ದ ಪುತ್ರ ಹನುಮೇಗೌಡನ ಪಾತ್ರ ಇರುವುದನ್ನು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ್ದಾರೆ.