ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗೆಳೆಯನನ್ನು ಹೊಂದಿದ್ದ ಮಗಳ ಕನ್ಯತ್ವ ಪರೀಕ್ಷೆಗೆ ಒತ್ತಾಯ; ಪೋಷಕರಿಗೆ ಜೈಲು ಶಿಕ್ಷೆ

ಮಗಳಿಗೆ ಗೆಳೆಯನಿದ್ದಾನೆ ಎಂದು ತಿಳಿದ ಪೋಷಕರು ಆಕೆಯ ಕನ್ಯತ್ವ ಪರೀಕ್ಷೆಗೆ ಒತ್ತಾಯಿಸಿದ ಘಟನೆ ಫ್ರಾನ್ಸ್ ನಲ್ಲಿ ನಡೆದಿದೆ. ಗೆಳೆಯನಿದ್ದಾನೆ ಎಂದು ತಿಳಿದ ಬಳಿಕ ಪೋಷಕರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಅಲ್ಲದೇ ಕನ್ಯತ್ವ ಪರೀಕ್ಷೆಗೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿ ಬಾಲಕಿ ದೂರು ನೀಡಿದ್ದರಿಂದ ಪೋಷಕರು ಇದೀಗ ಜೈಲು ಪಾಲಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಫ್ರಾನ್ಸ್: ಅಪ್ರಾಪ್ತ ಮಗಳಿಗೆ ಗೆಳೆಯನಿದ್ದಾನೆ ಎಂದು ತಿಳಿದ ಬಳಿಕ ಪೋಷಕರು ಆಕೆಯ ಕನ್ಯತ್ವ ಪರೀಕ್ಷೆಗೆ (virginity test) ಒತ್ತಾಯಿಸಿದ್ದು, ಈ ಹಿನ್ನೆಲೆಯಲ್ಲಿ ಪೋಷಕರ ಮೇಲೆ ಪ್ರಕರಣ ದಾಖಲಿಸಿರುವ ಘಟನೆ ಫ್ರಾನ್ಸ್ (france) ನಲ್ಲಿ ನಡೆದಿದೆ. 15 ವರ್ಷದ ಮಗಳಿಗೆ ಗೆಳೆಯನಿದ್ದಾನೆ ಎಂದು ತಿಳಿದ ಪೋಷಕರು ಅವರಿಬ್ಬರ ಮಧ್ಯೆ ದೈಹಿಕ ಸಂಬಂಧ ನಡೆದಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಸ್ತ್ರೀರೋಗ ತಜ್ಞರ (virginity test with gynaecologist) ಬಳಿ ಹೋಗಿ ಕನ್ಯತ್ವ ಪರೀಕ್ಷೆಗೆ ಒಳಪಡುವಂತೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಕಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದ್ದು ಪೋಷಕರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

2025ರ ಮಾರ್ಚ್ ತಿಂಗಳಲ್ಲಿ ತನಗೆ ಗೆಳೆಯನಿದ್ದಾನೆ ಎಂದು ತಿಳಿದ ಬಳಿಕ ವೈದ್ಯಕೀಯ ಪರೀಕ್ಷೆಗೆ ಒತ್ತಾಯಿಸಿದ ತಂದೆ ಹಲವಾರು ಬಾರಿ ತನಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಬಾಲಕಿ ನ್ಯಾಯಾಲಯದಲ್ಲಿ ಹೇಳಿದ್ದಾಳೆ.

ಮಹಿಳೆಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯದ ವಿಡಿಯೋ ವೈರಲ್‌ ಮಾಡಿದ ಪಾಪಿಗಳು

ಈ ಕುರಿತು ವಿಚಾರಣೆ ನಡೆಸಿದ ಫ್ರಾನ್ಸ್‌ನ ಲಾ ರೋಚೆ-ಸುರ್-ಯೋನ್‌ನ ಪಬ್ಲಿಕ್ ಪ್ರಾಸಿಕ್ಯೂಟರ್ ಸಾರಾ ಹುಯೆಟ್, ಅಪ್ರಾಪ್ತ ಬಾಲಕಿಯ ಕನ್ಯತ್ವ ಪರೀಕ್ಷೆಗೆ ಒತ್ತಾಯಿಸಿದ ಆರೋಪದಲ್ಲಿ ಬಾಲಕಿಯ ತಾಯಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.

ವೃತ್ತಿಪರ ಬಾಕ್ಸರ್ ಆಗಿರುವ ಬಾಲಕಿಯ ತಂದೆ ಮೇಲೆ ಮಗುವಿನ ಮೇಲೆ ದೈಹಿಕ ಹಲ್ಲೆ ನಡೆಸಿರುವ ಆರೋಪವಿರುವುದರಿಂದ ಅವರ ವೃತ್ತಿಗೆ ಸಂಬಂಧಿಸಿ ಆರು ತಿಂಗಳ ಕಾಲ ಅಮಾನತು ಶಿಕ್ಷೆಯನ್ನು ವಿಧಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಾರಾ ಹುಯೆಟ್, ಕನ್ಯತ್ವ ಪರೀಕ್ಷೆಗೆ ಅವರು ಸ್ತ್ರೀರೋಗತಜ್ಞರನ್ನು ಭೇಟಿ ಮಾಡುವ ಅಗತ್ಯವಿರಲಿಲ್ಲ. ಹಿಂಸೆ ಮಾಡುವುದು ಶಿಸ್ತು ಕಲಿಸುವ ವಿಧಾನವಲ್ಲ. ಆಕೆಯ ಪರೀಕ್ಷೆ ನಡೆಯುವಾಗ ಬಾಲಕಿ ಪ್ಯಾನಿಕ್ ಅಟ್ಯಾಕ್‌ಗೆ ಒಳಗಾಗಿ ಮೂರ್ಛೆ ಹೋಗಿದ್ದಾಳೆ ಎಂದು ತಿಳಿಸಿದರು.

Body Found: ಬಿಜೆಪಿ‌ ಮಾಜಿ ಕಾರ್ಪೊರೇಟರ್ ಶವ ಕಾರಿನೊಳಗೆ ಸುಟ್ಟು ಕರಕಲಾಗಿ ಪತ್ತೆ, ಶಂಕೆಗಳ ಸುಳಿ

ಫ್ರಾನ್ಸ್‌ನಲ್ಲಿ ಕನ್ಯತ್ವವನ್ನು ದೃಢೀಕರಿಸಲು ವೈದ್ಯಕೀಯ ಪರೀಕ್ಷೆಯು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ಈ ನಿಟ್ಟಿನಲ್ಲಿ ಬಾಲಕಿಯ ಪೋಷಕರು ಸ್ತ್ರೀರೋಗತಜ್ಞರು ಸಂಪರ್ಕಿಸಿದಾಗ ಅವರು ಇದನ್ನು ಮಾಡಲು ನಿರಾಕರಿಸಿದ್ದರು ಎಂದು ಅವರು ಹೇಳಿದರು.

2020ರ ಫೆಬ್ರವರಿಯಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಕನ್ಯತ್ವ ಪರೀಕ್ಷೆಯನ್ನು ಖಂಡಿಸಿ ಕಾನೂನು ರೂಪಿಸಿದ್ದರು. ವಿಶ್ವ ಆರೋಗ್ಯ ಸಂಸ್ಥೆಯು ಕೂಡ ಕನ್ಯತ್ವ ಪರೀಕ್ಷೆಯನ್ನು ಅವೈಜ್ಞಾನಿಕ, ಮಾನವ ಹಕ್ಕುಗಳನ್ನು ಉಲ್ಲಂಘನೆ ಎಂದು ಹೇಳಿತ್ತು.

ವಿದ್ಯಾ ಇರ್ವತ್ತೂರು

View all posts by this author