ಪಾಟ್ನಾ: ತರಬೇತಿ ಕೇಂದ್ರಗಳ ನಡುವಿನ ಪೈಪೋಟಿಯ ಕಾರಣದಿಂದ ಪಾಟ್ನಾದ (patna) ಜನಪ್ರಿಯ ಶಿಕ್ಷಕ ರೌಶನ್ ಆನಂದ್ (Roushan Sir) ಅವರು ಜೈಲಿನಲ್ಲಿರುವಾಗಲೇ ಅವರ ಸಹೋದರ ನೇಪಾಳದಲ್ಲಿ (Nepal) ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಪಾಟ್ನಾದಲ್ಲಿ ಖಾನ್ ಸರ್ (Khan Sir) ಅವರ ಕೋಚಿಂಗ್ ಸೆಂಟರ್ (Patna Coaching Center Conflict) ಮೇಲೆ ನಡೆದ ದಾಳಿಗೆ ಸಂಬಂಧಿಸಿದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿರುವ ರೌಶನ್ ಆನಂದ್ ಅವರ ಸಹೋದರ ಪ್ರಿನ್ಸ್ ಶನಿವಾರ ತಡರಾತ್ರಿ ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ನೇಪಾಳದಲ್ಲಿ ಸಾವನ್ನಪ್ಪಿದ್ದಾರೆ.
ಬಿಹಾರ ಪೊಲೀಸ್ ನೇಮಕಾತಿ ಪರೀಕ್ಷೆಯ ಫಲಿತಾಂಶದ ಕ್ರೆಡಿಟ್ ವಿಚಾರದಲ್ಲಿ ಕಳೆದ ಒಂದು ವಾರದಿಂದ ಪಟ್ನಾದಲ್ಲಿ ಎರಡು ಪ್ರಮುಖ ತರಬೇತಿ ಕೇಂದ್ರಗಳ ನಡುವೆ ಆರಂಭವಾಗಿರುವ ವಿವಾದದ ಕಾರಣದಿಂದ ಗ್ಯಾನ್ ಬಿಂದೂ ಕೋಚಿಂಗ್ ಸೆಂಟರ್ ನ ರೌಶನ್ ಆನಂದ್ ಅವರನ್ನು ಬಂಧಿಸಲಾಗಿತ್ತು. ಖಾನ್ ಸರ್ ಗೂ ಬಂಧನದ ಭೀತಿ ಎದುರಾಗಿದೆ. ಈ ನಡುವೆಯೇ ಇದೀಗ ರೋಶನ್ ಸರ್ ಅವರ ಸಹೋದರ ಪ್ರಿನ್ಸ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಖಾನ್ ಸರ್ ಎಂದೇ ಖ್ಯಾತಿ ಪಡೆದಿರುವ ಫೈಸಲ್ ಖಾನ್ ಅವರ ಗ್ಲೋಬಲ್ ಸ್ಟಡೀಸ್ ಕೋಚಿಂಗ್ ಸೆಂಟರ್ ಮೇಲೆ ಇತ್ತೀಚೆಗೆ ಗುಂಡು ಹಾರಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ರೌಶನ್ ಸರ್ ಅವರನ್ನು ತಕ್ಷಣ ಬಂಧಿಸಲಾಗಿದ್ದು, ಖಾನ್ ಸರ್ ನ್ಯಾಯಾಲಯದ ಮೊರೆ ಹೋಗಿ ಬಂಧನದಿಂದ ತಪ್ಪಿಸಿಕೊಂಡರು. ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಪ್ರಿನ್ಸ್ ತನ್ನ ಆರು ಮಂದಿ ಸ್ನೇಹಿತರೊಂದಿಗೆ ನೇಪಾಳದಲ್ಲಿ ವಾಸಿಸುತ್ತಿದ್ದನು ಎಂನ್ನಲಾಗಿದೆ. ಆತನ ಸಾವಿನ ಸುದ್ದಿ ಕೇಳಿ ಕುಟುಂಬ ಸದಸ್ಯರು ನೇಪಾಳಕ್ಕೆ ತೆರಳಿದ್ದಾರೆ.
2021ರಲ್ಲಿ ಖಾನ್ ಸರ್ ಅವರ ಕೋಚಿಂಗ್ ಸೆಂಟರ್ ಮೇಲೆ ನಡೆದ ದಾಳಿಯಲ್ಲೂ ಪ್ರಿನ್ಸ್ ವಿರುದ್ಧ ಆರೋಪ ಕೇಳಿ ಬಂದಿತ್ತು. ಆತ ತರಗತಿಗೆ ನುಗ್ಗಿ ಹಿಂಸಾಚಾರ ನಡೆಸಿದ್ದನ್ನು ಎಂದು ದೂರಲಾಗಿದೆ. ಕಳೆದ ಕೆಲವು ವರ್ಷಗಳಿಂದ ರೌಶನ್ ಸರ್ ತಮ್ಮ ಅಕಾಡೆಮಿ ಮೇಲೆ ಬಾಂಬ್ ದಾಳಿಗಳನ್ನು ನಡೆಸಲು ಪಿತೂರಿ ನಡೆಸುತ್ತಿದ್ದಾರೆ. ಸಿಬ್ಬಂದಿ ಮೇಲೆ ಹಲ್ಲೆಗಳನ್ನು ನಡೆಸಲೆತ್ನಿಸಿದ್ದಾರೆ ಎಂದು ಖಾನ್ ಸರ್ ಆರೋಪಿಸಿದ್ದರು.
ಪ್ರಧಾನಿ ಮೋದಿ ನನ್ನನ್ನು 'ಸರ್' ಎಂದರು; ಡೊನಾಲ್ಡ್ ಟ್ರಂಪ್
ರೌಶನ್ ಸರ್ ಕೂಡ ಖಾನ್ ಸರ್ ಅವರ ವಿರುದ್ಧ ಪಿತೂರಿ ಆರೋಪ ನಡೆಸಿದ್ದು, 2023 ರಲ್ಲಿ ಅವರ ಕೋಚಿಂಗ್ ಸೆಂಟರ್‌ನಲ್ಲಿ ನಡೆದ ವಿಧ್ವಂಸಕ ಕೃತ್ಯದಲ್ಲಿ ಖಾನ್ ಸರ್ ಕೈವಾಡವಿದೆ ಎಂದು ಆರೋಪಿಸಿದ್ದರು.