ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Crime News: ಅನ್ಯ ಜಾತಿಯ ಯುವಕನ ಮದುವೆ, ಮಗಳು- ಅಳಿಯನಿಗೆ ಇರಿತ

ಬದನಗೋಡಿನ ಯುವತಿ ಪೋಷಕರಿಗೆ ತಿಳಿಸದೇ ರಂಗಾಪುರದ ಅನ್ಯ ಜಾತಿಯ ಯುವಕನೊಂದಿಗೆ ಕಳೆದ ಮೂರು ತಿಂಗಳ ಹಿಂದೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಳು. ಯುವಕನ ಮನೆಗೆ ಮಗಳನ್ನು ನೋಡುವ ನೆಪದಲ್ಲಿ ಬಂದು, ನಿಮ್ಮ ಮದುವೆಗೆ ಸಾಕ್ಷಿ ಹಾಕಿದವರ ಹೆಸರು ಹೇಳುವಂತೆ ಮಗಳ ಮೇಲೆ ಹಲ್ಲೆ ಮಾಡಿದ್ದಾನೆ.

ಅನ್ಯ ಜಾತಿಯ ಯುವಕನ ಮದುವೆ, ಮಗಳು- ಅಳಿಯನಿಗೆ ಇರಿತ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Feb 28, 2025 7:20 AM

ಉತ್ತರಕನ್ನಡ: ಪ್ರೀತಿಸಿ ಮದುವೆಯಾದ (Love marriage) ಮಗಳ ನಡೆಗೆ ಕೋಪಗೊಂಡಿರುವ ತಂದೆಯೊಬ್ಬ ಮಗಳು ಹಾಗು ಅಳಿಯನಿಗೆ ಚಾಕು (Stabbing) ಇರಿದು ಹತ್ಯೆಗೆ (Assault Case) ಯತ್ನಿಸಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ (Self Harming) ಯತ್ನಿಸಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ ತಾಲೂಕಿನ ರಂಗಾಪುರದಲ್ಲಿ ನಡೆದಿದೆ. ಶಂಕರ ಕಮ್ಮಾರ ಹಲ್ಲೆ ನಡೆಸಿದ (Crime news) ಆರೋಪಿ. ಹಲ್ಲೆಗೊಳಗಾದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬದನಗೋಡಿನ ಯುವತಿ ಪೋಷಕರಿಗೆ ತಿಳಿಸದೇ ರಂಗಾಪುರದ ಯುವಕನೊಂದಿಗೆ ಕಳೆದ ಮೂರು ತಿಂಗಳ ಹಿಂದೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಳು. ಅನ್ಯ ಜಾತಿಯ ಯುವಕ ಎಂಬ ಕಾರಣಕ್ಕೆ ಶಂಕರ ಕಮ್ಮಾರ ವಿರೋಧ ವ್ಯಕ್ತಪಡಿಸಿದ್ದ. ನಂತರ ಯುವಕನ ಮನೆಗೆ ಮಗಳನ್ನು ನೋಡುವ ನೆಪದಲ್ಲಿ ಬಂದು, ನಿಮ್ಮ ಮದುವೆಗೆ ಸಾಕ್ಷಿ ಹಾಕಿದವರ ಹೆಸರು ಹೇಳುವಂತೆ ಮಗಳ ಮೇಲೆ ಹಲ್ಲೆ ಮಾಡಿದ್ದಾನೆ.

ಈ ವೇಳೆ ಮಗಳು ಹೆಸರು ಹೇಳದೇ ಇದ್ದುದಕ್ಕೆ ಹತ್ಯೆಗೆ ಯತ್ನಿಸಿದ್ದಾನೆ. ತಡೆಯಲು ಬಂದ ಅಳಿಯನಿಗೂ ಎದೆ ಹಾಗೂ ಕೈಗೆ ಚಾಕುವಿನಿಂದ ಇರಿದಿದ್ದಾನೆ. ನಂತರ ಅಲ್ಲಿಂದ ತಪ್ಪಿಸಿಕೊಂಡು ತನ್ನೂರಿಗೆ ಬಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಹಲ್ಲೆಗೆ ಒಳಗಾದ ಇಬ್ಬರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಮೂವರೂ ಬದುಕುಳಿದಿದ್ದು, ಇರಿತಕ್ಕೊಳಗಾದ ಇಬ್ಬರೂ ಶಿರಸಿಯ ಪಂಡಿತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ರಿ ನೀಡಿದ ದೂರಿನ ಆಧಾರದಲ್ಲಿ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ, 15 ಪ್ರಯಾಣಿಕರಿಗೆ ಗಂಭೀರ ಗಾಯ

ಹುಬ್ಬಳ್ಳಿ: ಚಲಿಸುತ್ತಿದ್ದ ಸಾರಿಗೆ ಬಸ್‌ನ ಸ್ಪ್ರಿಂಗ್‌ ಪಾಟಾ ಇದ್ದಕ್ಕಿದ್ದಂತೆ ಕಟ್ ಆಗಿ ಬಸ್ ಪಲ್ಟಿ ಹೊಡೆದ ಪರಿಣಾಮ‌ ಬಸ್‌ನಲ್ಲಿದ್ದ 15ಕ್ಕೂ ಹೆಚ್ಚು ಜನ‌ ಪ್ರಯಾಣಿಕರು ಗಾಯಗೊಂಡ ಘಟನೆ ಹುಬ್ಬಳ್ಳಿ‌ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಬಳಿ ನಡೆದಿದೆ. ತಾಲೂಕಿನ ಬ್ಯಾಹಟ್ಟಿ ಬಳಿ ಬಸ್ ಚಲಿಸುತ್ತಿರುವಾಗಲೇ ಬಸ್ಸಿನ ಪಾಟಾ ಕಟ್ ಆಗಿದೆ. ಕೂಡಲೇ ಬಸ್ ಅನ್ನು ಚಾಲಕ ಎಷ್ಟೇ ನಿಯಂತ್ರಣಕ್ಕೆ ತರಬೇಕೆಂದರೂ ಸಾಧ್ಯವಾಗದೆ ಬಸ್ ಪಲ್ಟಿಯಾಗಿದೆ.

ಈ ವೇಳೆ ಬಸ್ ನಲ್ಲಿದ್ದ ಸುಮಾರು 15 ಪ್ರಯಾಣಿಕರಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ‌ ಸಂಭವಿಸಿಲ್ಲ. ಗಾಯಗೊಂಡ‌ ಪ್ರಯಾಣಿಕರನ್ನು ತಕ್ಷಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ‌ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರು‌ ಸ್ಥಳಕ್ಕೆ ಭೇಟಿ ನೀಡಿ‌ ಪರಿಶೀಲನೆ ನಡೆಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಅಪಘಾತದ ಕುರಿತು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Assault Case: ಟಿಕೆಟ್ ಬೆಲೆ ಏರಿಸಿದ್ದಕ್ಕೆ ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಕುಡುಕ!