ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಥರ್ವ್ ತ್ಯಾಗಿಯಾಗಿ ಬದಲಾದ ಎಂಜಿನಿಯರ್‌ ಅಸಾದ್ ಖಾನ್; ಹಿಂದೂ ಧರ್ಮಕ್ಕೆ ಮತಾಂತರವಾಗಲು ಇದೇ ಕಾರಣ

Asad Khan becomes Atharv Tyagi: ಅಸಾದ್ ಖಾನ್ ಎಂಬ ಎಂಜಿನಿಯರ್ ಯುವಕ ತನ್ನ ಧಾರ್ಮಿಕ ದೃಷ್ಟಿಕೋನವನ್ನು ಬದಲಿಸಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಇನ್ಮುಂದೆ ಅವರು ಅಥರ್ವ್ ತ್ಯಾಗಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ. ಅವರ ಧರ್ಮಾಂತರದ ಹಿಂದಿನ ಕಾರಣಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದು, ಸಾರ್ವಜನಿಕರಲ್ಲಿ ಕುತೂಹಲ ಹುಟ್ಟಿಸಿದೆ.

ಅಥರ್ವ್ ತ್ಯಾಗಿಯಾಗಿ ಬದಲಾದ ಅಸಾದ್ ಖಾನ್

ಹಿಂದೂ ಧರ್ಮಕ್ಕೆ ಮತಾಂತರವಾದ ಮುಸ್ಲಿಂ ವ್ಯಕ್ತಿ -

Priyanka P
Priyanka P Dec 31, 2025 6:32 PM

ಭೋಪಾಲ್‌, ಡಿ. 31: 26 ವರ್ಷದ ಮುಸ್ಲಿಂ ಎಂಜಿನಿಯರ್ ಒಬ್ಬರಿಗೆ ದೇವಸ್ಥಾನಕ್ಕೆ ಪ್ರವೇಶವನ್ನು ಪದೇ ಪದೆ ನಿರಾಕರಿಸಿದ್ದರಿಂದ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಂಡ (converted to Hinduism) ಅಚ್ಚರಿಯ ಘಟನೆ ನಡೆದಿದೆ. ಮಧ್ಯ ಪ್ರದೇಶದ (Madhya Pradesh) ಸಾಗರ್‌ ಮೂಲದ ವ್ಯಕ್ತಿ ಮತಾಂತರಗೊಂಡವರು. ಆ ವ್ಯಕ್ತಿ ಸೋಮವಾರ (ಡಿಸೆಂಬರ್‌ 30) ಉತ್ತರ ಪ್ರದೇಶದ ಕಾಶಿಯಲ್ಲಿ ನಡೆದ ಸಾಂಪ್ರದಾಯಿಕ ವೈದಿಕ ಸಮಾರಂಭದ ಮೂಲಕ ಅಧಿಕೃತವಾಗಿ ಹಿಂದೂ ಧರ್ಮ ಸ್ವೀಕರಿಸಿದರು.

ಅಸದ್ ಖಾನ್ ಎಂಬ ಹೆಸರಿದ್ದ ಯುವಕ ಇದೀಗ ಅಥರ್ವ ತ್ಯಾಗಿ ಎಂದು ಹೊಸ ಹೆಸರಿನಿಂದ ಗುರುತಿಸಲ್ಪಡಲಿದ್ದಾರೆ. ಕಾಶಿಯ ಗಂಗಾ ನದಿಯಲ್ಲಿ ದೋಣಿಯಲ್ಲಿ 21 ಬ್ರಾಹ್ಮಣರು ಶುದ್ಧೀಕರಣ ವಿಧಿಗಳನ್ನು ನಡೆಸಿದ ನಂತರ ಸನಾತನ ಧರ್ಮಕ್ಕೆ ಮರಳಿದರು. ಈ ಸಮಾರಂಭದಲ್ಲಿ ಪಂಚಗವ್ಯ ಸ್ನಾನ, ಕೂದಲು ಬೋಳಿಸುವುದು, ತಿಲಕ ಹಚ್ಚುವುದು, ಗಣೇಶ ಪೂಜೆ, ಹನುಮಾನ್ ಚಾಲೀಸಾ ಪಠಣ ಮತ್ತು ಹವನವನ್ನು ನಡೆಸಲಾಯಿತು. ನಂತರ ಅವರು ಔಪಚಾರಿಕವಾಗಿ ತಮ್ಮ ಹೊಸ ಹಿಂದೂ ಹೆಸರನ್ನು ಸ್ವೀಕರಿಸಿದರು.

ಇಲ್ಲಿದೆ ವಿಡಿಯೊ:



ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ, ಆ ವ್ಯಕ್ತಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವಾಗ ತನ್ನ ಸುತ್ತಲೂ ಹಲವು ಪುರೋಹಿತರೊಂದಿಗೆ ಆಚರಣೆಗಳನ್ನು ಮಾಡುತ್ತಿರುವುದನ್ನು ತೋರಿಸಲಾಗಿದೆ. ಹಿಂದೂ ಧರ್ಮ ಸ್ವೀಕರಿಸಲು ಕಾರಣವಾದ ಬಗ್ಗೆ ಮಾತನಾಡಿದ ಅಥರ್ವ್ ತಮ್ಮ ಅಫಿಡವಿಟ್‌ನಲ್ಲಿ, ಉಜ್ಜಯಿನಿಯ ಮಹಾಕಾಲ ದೇವಸ್ಥಾನದಲ್ಲಿ ಅನುಭವಿಸಿದ ನೋವಿನ ಅನುಭವವು ಅವರ ಜೀವನದ ಮಹತ್ವದ ತಿರುವು ಎಂದು ಹೇಳಿದ್ದಾರೆ. ʼʼಬಾಲ್ಯದಿಂದಲೂ ನನಗೆ ಹಿಂದೂ ದೇವಾಲಯಗಳಿಗೆ ಭೇಟಿ ನೀಡುವುದು ಮತ್ತು ಪೂಜೆ ಸಲ್ಲಿಸುವುದು ತುಂಬಾ ಇಷ್ಟವಾಗಿತ್ತುʼʼ ಎಂದು ಅವರು ಹೇಳಿದರು.

ಮುಸ್ಲಿಂ ಯುವತಿಯಿಂದ ಹಿಂದೂ ಗಂಡನ ಮತಾಂತರ, ಲವ್‌ ಜಿಹಾದ್‌ ನಡೆಸಿದ ವಿಚಿತ್ರ ಆರೋಪ

ʼʼಬೆಳೆಯುತ್ತ ನನ್ನ ಹೆಸರು ಹಾಗೂ ಮುಸ್ಲಿಂ ಗುರುತಿನಿಂದ ದೇವಸ್ಥಾನಕ್ಕೆ ಪ್ರವೇಶ ಸಾಧ್ಯವಿರಲಿಲ್ಲ. ದೇವಾಲಯಗಳಿಗೆ ಪ್ರವೇಶಿಸುವಾಗ ಮತ್ತು ಪೂಜೆಯ ಸಮಯದಲ್ಲಿ ನಾನು ಅನೇಕ ಬಾರಿ ತೊಂದರೆಗಳನ್ನು ಎದುರಿಸಿದೆ. ನಾನು ಬಜರಂಗಬಲಿಯ ಭಕ್ತ. ನನ್ನ ನಂಬಿಕೆಯ ಪ್ರಕಾರ ಬದುಕಲು ನಾನು ಈ ನಿರ್ಧಾರವನ್ನು ತೆಗೆದುಕೊಂಡೆʼʼ ಎಂದರು. ಮಹಾಕಾಲ್ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶವಿರಲಿಲ್ಲ. ಹೀಗಾಗಿ ಹಿಂದೂ ಧರ್ಮ ಸ್ವೀಕರಿಸಲು ನಿರ್ಧರಿಸಿದ್ದಾಗಿ ಅಥರ್ವ್ ವಿವರಿಸಿದರು.

ವರದಿಯ ಪ್ರಕಾರ, ಅಥರ್ವ್ ಎಂ.ಟೆಕ್ ಪದವೀಧರರಾಗಿದ್ದು, ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಸಾಗರ್ ಜಿಲ್ಲೆಯ ಕುಟುಂಬಕ್ಕೆ ಸೇರಿದವರಾಗಿದ್ದು, ಅಲ್ಲಿ ಅವರ ಪೋಷಕರು, ಸಹೋದರ ಮತ್ತು ಸಹೋದರಿ ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದಾರೆ. ಇದರ ಹೊರತಾಗಿಯೂ, ಹಿಂದೂ ಧರ್ಮದ ಕಡೆಗೆ ಅವರ ಆಧ್ಯಾತ್ಮಿಕ ಒಲವು ಬಹಳ ಚಿಕ್ಕ ವಯಸ್ಸಿನಿಂದಲೇ ಪ್ರಾರಂಭವಾಯಿತು ಎಂದು ಅವರು ಹೇಳಿದರು.

ಅಥರ್ವ್ 20 ರುಪಾಯಿಗಳ ಸ್ಟಾಂಪ್ ಪೇಪರ್ ಮೇಲೆ ಅಫಿಡವಿಟ್ ಸಲ್ಲಿಸಿದ್ದು, ಅದರಲ್ಲಿ ಅವರು ಸನಾತನ ಧರ್ಮಕ್ಕೆ ಮರಳುವುದು ಸ್ವಇಚ್ಛೆಯಿಂದ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಫಿಡವಿಟ್‌ನಲ್ಲಿ ʼʼನಾನು ನನ್ನ ಸ್ವಂತ ಇಚ್ಛೆಯಿಂದ ಸನಾತನ ಧರ್ಮಕ್ಕೆ ಮರಳುತ್ತಿದ್ದೇನೆʼʼ ಎಂದು ಬರೆದಿದ್ದಾರೆ.

ಅಥರ್ವ್ ತಮ್ಮ ಕುಟುಂಬದ ಮನೆಯನ್ನು ತೊರೆದು ಸ್ವತಂತ್ರವಾಗಿ ಬದುಕಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ. ವಾರಣಾಸಿಯಲ್ಲಿ ಸಂಪೂರ್ಣವಾಗಿ ವೈದಿಕ ಸಂಪ್ರದಾಯಗಳ ಪ್ರಕಾರ ನಡೆದ ಸಮಾರಂಭವು, ಬಾಲ್ಯದಿಂದಲೂ ಅವರು ಅನುಸರಿಸಿದ ನಂಬಿಕೆಯ ಪ್ರಕಾರ ಬಹಿರಂಗವಾಗಿ ಬದುಕುವ ವೈಯಕ್ತಿಕ ನಿರ್ಧಾರ ಎಂದು ವಿವರಿಸಿದ್ದಾರೆ.