ಬೆಳಗಾವಿ: ರಾಯಬಾಗ (Raybag) ತಾಲೂಕಿನ ಮೇಖಳಿ ಗ್ರಾಮದ ರಾಮಮಂದಿರ ಮಠದ ಹಠಯೋಗಿ ಲೋಕೇಶ್ವರ ಸ್ವಾಮೀಜಿ ಮೇಲಿನ ಅತ್ಯಾಚಾರ ಪ್ರಕರಣ (Physical Assault) ಸಾಬೀತಾಗಿದ್ದು, ಆರೋಪಿಗೆ 35 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ಬೆಳಗಾವಿ ಪೋಕ್ಸೊ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಮೇ 13 ರಂದು ಮಠಕ್ಕೆ ಬಂದಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದ. ನಂತರ ರಾಯಚೂರು, ಬಾಗಲಕೋಟೆ ಸೇರಿದಂತೆ ಅನೇಕ ಸ್ಥಳಗಳಲ್ಲಿ ಸುತ್ತಾಡಿಸಿ ಅತ್ಯಾಚಾರ ಎಸಗಿ ಕೊನೆಗೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಬಿಟ್ಟು ತಲೆ ಮರೆಸಿಕೊಂಡಿದ್ದ.
ಅತ್ಯಾಚಾರದ ಕುರಿತು ಬಾಲಕಿ ಕುಟುಂಬದವರು ಬಾಗಲಕೋಟೆ ಮಹಿಳಾ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ತದನಂತರ ಬೆಳಗಾವಿ ಜಿಲ್ಲೆಯ ಮೂಡಲಗಿ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಿ ಮೇ 24 ರಂದು ಅತ್ಯಾಚಾರ ಆರೋಪಿ ಸ್ವಾಮಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದರು. ಕೃತ್ಯವೆಸಗಿದ ಬಳಿಕ ಯಾರಿಗೂ ಹೇಳದಂತೆ ಸ್ವಾಮೀಜಿ ಬೆದರಿಕೆ ಕೂಡ ಹಾಕಿದ್ದ. ದೂರು ದಾಖಲಾಗುತ್ತಿದ್ದಂತೆ ಲೋಕೇಶ್ವರ ಸ್ವಾಮೀಜಿಯ ರಾಮಮಂದಿರ ಮಠಕ್ಕೆ ತೆರಳಿದ ಪೊಲೀಸರು ಮಠದಲ್ಲಿ ಶೋಧಕಾರ್ಯ ನಡೆಸಿದ್ದರು. ಸ್ವಾಮೀಜಿಯ ಈ ಮಠದಲ್ಲಿ ಮಾರಕಾಸ್ತ್ರಗಳು ಕೂಡ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ತಂಗಿಯನ್ನು ಕೊಲ್ಲಲು ಸ್ನೇಹಿತನಿಗೇ ಸುಪಾರಿ ಕೊಟ್ಟ ಅಣ್ಣ; ಅತ್ಯಾಚಾರ ಮಾಡಿ ಬರ್ಬರ ಹತ್ಯೆ!
ಮೇಖಳಿ ಗ್ರಾಮದ ಸರ್ವೇ ನಂ. 225 ರಲ್ಲಿ ಸರ್ಕಾರಿ 8 ಎಕರೆ ಗೈರಾಣ (ಗೋಮಾಳ) ಜಾಗವನ್ನ ಅತಿಕ್ರಮಣ ಮಾಡಿಕೊಂಡು 8 ವರ್ಷಗಳ ಹಿಂದೆ ಲೋಕೇಶ್ವರ ಸ್ವಾಮೀಜಿ ಅಕ್ರಮವಾಗಿ ಮಠ ನಿರ್ಮಿಸಿಕೊಂಡಿದ್ದ. ರಾಯಬಾಗ ತಹಶಿಲ್ದಾರರ ಸುರೇಶ ಮುಂಜೆ ಸಮ್ಮುಖದಲ್ಲಿ ಮೂರು ಜೆಸಿಬಿ ಬಳಸಿ ಮಠವನ್ನ ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಮಠಾಧೀಶರ ಇತ್ತೀಚಿನ ಬಂಧನ ಮತ್ತು ನ್ಯಾಯಾಂಗ ಬಂಧನದ ನಂತರ, ರಾಯ್‌ಬಾಗ್ ತಾಲ್ಲೂಕು ಆಡಳಿತದ ಅಧಿಕಾರಿಗಳು ಮಠವನ್ನು ಧ್ವಂಸಗೊಳಿಸಿದ್ದರು.