ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Abuse: ನಟಿಗೆ ಲೈಂಗಿಕ ಕಿರುಕುಳ, ಕನ್ನಡದ ನಟ- ನಿರ್ದೇಶಕ ಹೇಮಂತ್‌ ಬಂಧನ

Sandalwood: ಹೇಮಂತ್ ಅಶ್ಲೀಲ ಬಟ್ಟೆ ತೊಟ್ಟು ನಟಿಸಬೇಕು ಎಂದು ನಟಿಗೆ ಕಿರುಕುಳ ನೀಡಿದ್ದಾನೆ. ಮುಂಬೈಗೆ ಶೂಟಿಂಗ್‌ಗೆ ಹೋಗಿದ್ದಾಗ ಅಸಭ್ಯ ವರ್ತನೆ ತೋರಿದ್ದಾನೆ. ನಿರಾಕರಿಸಿದ್ದಕ್ಕೆ ರೌಡಿಗಳನ್ನು ಬಿಟ್ಟು ಬೆದರಿಕೆ ಹಾಕಿದ್ದಾನೆ. ಚಿತ್ರೀಕರಣದ ಬಳಿಕ ನೀಡಿದ್ದ ಚೆಕ್ ಬೌನ್ಸ್ ಆಗಿದೆ. ಸೆನ್ಸಾರ್ ಆಗದ ದೃಶ್ಯಗಳನ್ನು ವೈರಲ್ ಮಾಡಿದ್ದಾನೆ ಎಂದು ನಟಿ ಆರೋಪಿಸಿದ್ದಾರೆ.

ಬೆಂಗಳೂರು : ಸಿನಿಮಾ ಮಾಡುವುದಾಗಿ ಹೇಳಿ ಕರೆಸಿಕೊಂಡು ನಟಿಗೆ ಲೈಂಗಿಕ ಕಿರುಕುಳ (Physical Abuse) ನೀಡಿದ ಆರೋಪದ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್ (sandalwood) ನಟ, ನಿರ್ದೇಶಕ, ನಿರ್ಮಾಪಕ ಹೇಮಂತ್ (Hemanth) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ರಾಜಾಜಿನಗರದ ಪೊಲೀಸರು ನಟ, ನಿರ್ದೇಶಕ ಮತ್ತು ನಿರ್ಮಾಪಕ ಹೇಮಂತ್‌ನನ್ನು ಬಂಧಿಸಿದ್ದಾರೆ. 2022ರಲ್ಲಿ ನಟಿಗೆ ಪರಿಚಯವಾಗಿದ್ದ ನಟ ಹೇಮಂತ್, ರಿಚ್ಚಿ ಎಂಬ ಚಿತ್ರದಲ್ಲಿ ನಟಿಗೆ ಅವಕಾಶ ನೀಡಿ ಕಿರುಕುಳ (Harassment) ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

2 ಲಕ್ಷ ರೂ. ಸಂಭಾವನೆ ನೀಡುವುದಾಗಿ ಅಗ್ರಿಮೆಂಟ್ ಮಾಡಿದ್ದರು. ಮುಂಗಡವಾಗಿ 60 ಸಾವಿರ ರೂ. ಹಣ ನೀಡಿದ್ದ ಹೇಮಂತ್, ಅಶ್ಲೀಲ ಬಟ್ಟೆ ತೊಟ್ಟು ನಟಿಸಬೇಕು ಎಂದು ಕಿರುಕುಳ ನೀಡಲಾಗಿದೆ. ಮುಂಬೈಗೆ ಶೂಟಿಂಗ್‌ಗೆ ಹೋಗಿದ್ದಾಗ ಅಸಭ್ಯ ವರ್ತನೆ ತೋರಿದ್ದು, ನಿರಾಕರಿಸಿದ್ದಕ್ಕೆ ರೌಡಿಗಳನ್ನು ಬಿಟ್ಟು ಬೆದರಿಕೆ ಹಾಕಲಾಗಿದೆ ಎಂದು ನಟಿ ಆರೋಪಿಸಿದ್ದಾರೆ. ಚಿತ್ರೀಕರಣದ ಬಳಿಕ ನೀಡಿದ್ದ ಚೆಕ್ ಬೌನ್ಸ್ ಆಗಿದೆ. ಸೆನ್ಸಾರ್ ಆಗದ ದೃಶ್ಯಗಳನ್ನು ವೈರಲ್ ಮಾಡಿದ್ದ ಎಂದು ನಟಿ ಆರೋಪಿಸಿದ್ದು, ಸದ್ಯ ಪೊಲೀಸರು ನಟ ಹೇಮಂತ್‌ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: Akshay Kumar: ನಗ್ನ ಫೋಟೋ ಕಳಿಸುವಂತೆ ನಟ ಅಕ್ಷಯ್‌ ಕುಮಾರ್‌ ಪುತ್ರಿಗೆ ಕಿರುಕುಳ

ನಟ ವಿಜಯ್‌ ದೇವರಕೊಂಡ ಕಾರು ಅಪಘಾತ

ಹೈದರಾಬಾದ್:‌ ನಟಿ ರಶ್ಮಿಕಾ ಮಂದಣ್ಣ ಜತೆ ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದ ಟಾಲಿವುಡ್‌ ನಟ ವಿಜಯ್‌ ದೇವರಕೊಂಡ ಅವರ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್‌ ಸ್ಪಲ್ಪದರಲ್ಲೇ ಭಾರಿ ಅನಾಹುತ ತಪ್ಪಿದೆ. ಸೋಮವಾರ, ಸ್ನೇಹಿತರೊಂದಿಗೆ ಪುಟ್ಟಪರ್ತಿ ಸತ್ಯಸಾಯಿ ಬಾಬಾ ಸಮಾಧಿ ದರ್ಶನ ಪಡೆದು ಹೈದರಾಬಾದ್‌ಗೆ ವಾಪಸ್‌ ತೆರಳುತ್ತಿದ್ದಾಗ ತೆಲಂಗಾಣದ ಗದ್ವಾಲ್ ಜಿಲ್ಲೆ ಸಮೀಪ ಕಾರು ಅಪಘಾತ ನಡೆದಿದೆ.

ಹೆದ್ದಾರಿಯಲ್ಲಿ ಕಾರಿಗೆ ಬೊಲೆರೋ ವಾಹನ ಡಿಕ್ಕಿಯಾಗಿದ್ದರಿಂದ ಅಪಘಾತ ನಡೆದಿದ್ದು, ನಟನ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ. ವಿಜಯ್‌ ದೇವರಕೊಂಡ, ಪುಟ್ಟಪರ್ತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಹೀಗಾಗಿ ಸತ್ಯಸಾಯಿ ಬಾಬಾ ಸಮಾಧಿ ಆಶೀರ್ವಾದ ಪಡೆಯಲು ಅಲ್ಲಿಗೆ ತೆರಳಿದ್ದರು. ದರ್ಶನ ಮುಗಿಸಿಕೊಂಡು ಹೈದರಾಬಾದ್‌ಗೆ ಹೋಗುವಾಗ ಅಪಘಾತ ನಡೆದಿದೆ. ಅಪಘಾತದ ಬಳಿಕ ನಟ, ಕಾರನ್ನು ಅಲ್ಲೇ ಬಿಟ್ಟು ಸ್ನೇಹಿತನ ಕಾರಿನಲ್ಲಿ ಹೈದರಾಬಾದ್‌ಗೆ ಪ್ರಯಾಣಿಸಿದ್ದಾರೆ.

ಹರೀಶ್‌ ಕೇರ

View all posts by this author