Akshay Kumar: ನಗ್ನ ಫೋಟೋ ಕಳಿಸುವಂತೆ ನಟ ಅಕ್ಷಯ್ ಕುಮಾರ್ ಪುತ್ರಿಗೆ ಕಿರುಕುಳ
Akshay Kumar: ತಮ್ಮ ಮಗಳಿಗೆ ಆನ್‌ಲೈನ್ ಗೇಮಿಂಗ್ ಸಮಯದಲ್ಲಿ ಉಂಟಾದ ಕಿರುಕುಳದ ವಿಚಾರವೊಂದನ್ನು ನಟ ಅಕ್ಷಯ್ ಬಹಿರಂಗಪಡಿಸಿದ್ದಾರೆ. ಅಕ್ಟೋಬರ್ 3 ರಂದು ನಡೆದ 'ಸೈಬರ್ ಜಾಗೃತಿ ಮಾಸ'ದ ಉದ್ಘಾಟನಾ ಸಮಾರಂಭದಲ್ಲಿ ಅಕ್ಷಯ್ ಕುಮಾರ್ ತಮ್ಮ ಮಗಳಿಗೆ ಆದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

-

ಮುಂಬೈ: ಇತ್ತೀಚೆಗೆ ಮಕ್ಕಳು ಮೊಬೈಲ್, ಆನ್‌ಲೈನ್ ಗೇಮ್ ಅಂತ ಇದರಲ್ಲೇ ಸಮಯ ಕಳೆ ಯುವುದು ಹೆಚ್ಚಾಗಿದೆ. ಮಕ್ಕಳ ಬಗ್ಗೆ ಪೋಷಕರು ಎಷ್ಟು ಜಾಗೃತರಾಗಿ ಇರಬೇಕು ಎಂಬುದಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಹಂಚಿಕೊಂಡಿರುವ ಘಟನೆಯೇ ಸಾಕ್ಷಿಯಾಗಿದೆ. ತಮ್ಮ ಹದಿಹರೆಯದ ಮಗಳಿಗೆ ಆನ್‌ಲೈನ್ ಗೇಮಿಂಗ್ ಸಮಯದಲ್ಲಿ ಉಂಟಾದ ಕಿರುಕುಳದ ವಿಚಾರವೊಂದನ್ನು ನಟ ಅಕ್ಷಯ್ (Akshay Kumar) ಬಹಿರಂಗಪಡಿಸಿದ್ದಾರೆ. ಅಕ್ಟೋಬರ್ 3 ರಂದು ನಡೆದ 'ಸೈಬರ್ ಜಾಗೃತಿ ಮಾಸ'ದ ಉದ್ಘಾಟನಾ ಸಮಾರಂಭದಲ್ಲಿ ಅಕ್ಷಯ್ ಕುಮಾರ್ ತಮ್ಮ ಮಗಳಿಗೆ ಆದ ಕೆಟ್ಟ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಮುಂಬೈನಲ್ಲಿ ಸೈಬರ್ ಸುರಕ್ಷತಾ ಜಾಗೃತಿ ಕಾರ್ಯಕ್ರಮದಲ್ಲಿ ನಟ ಅಕ್ಷಯ್ ಕುಮಾರ್ ಭಾಗ ವಹಿಸಿದ್ದು ಮಹಾರಾಷ್ಟ್ರ ಮುಖ್ಯ ಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದ್ದ ಜನರ ಮುಂದೆಯೇ ನಟ ಈ ಆತಂಕಕಾರಿ ಘಟನೆಯನ್ನು ಹಂಚಿ ಕೊಂಡಿ ದ್ದಾರೆ. ಅಕ್ಷಯ್ ಕುಮಾರ್ ಅವರ 13 ವರ್ಷದ ಮಗಳು ಮಲ್ಟಿಪ್ಲೇಯರ್ ಆನ್‌ಲೈನ್ ಗೇಮ್‌ನಲ್ಲಿ ಆಡುತ್ತಿದ್ದಾಗ ಒಬ್ಬ ಅಪರಿಚಿತ ವ್ಯಕ್ತಿ ಸಂಪರ್ಕಕ್ಕೆ ಬಂದಿದ್ದ. ಆರಂಭದಲ್ಲಿ ಸ್ನೇಹಪರ ಸಂದೇಶ ಗಳನ್ನು ಕಳುಹಿಸಿದ್ದ. ನೀವು ಚೆನ್ನಾಗಿ ಆಡಿದ್ದೀರಿ ಎಂದು ಬಹಳ ಸೌಹಾರ್ದಯುತವಾಗಿ ಮಾತನಾಡಿದ್ದರಿಂದ ಆತ ಒಳ್ಳೆಯ ವ್ಯಕ್ತಿ ಎಂದೇ ನನ್ನ ಮಗಳು ಭಾವಿಸಿದ್ದಳು,
ಆದರೆ ಸ್ವಲ್ಪ ದಿನದ ಬಳಿಕ ಆತ ನನ್ನ ಮಗಳನ್ನು 'ನೀನು ಗಂಡಾ ಅಥವಾ ಹೆಣ್ಣಾ?' ಎಂದು ಪ್ರಶ್ನೆ ಮಾಡಿದ್ದಾನೆ. ಅವಳು 'ಹೆಣ್ಣು' ಎಂದು ಉತ್ತರಿಸಿದ ತಕ್ಷಣವೇ ಆತನ ಮಾತಿನ ಶೈಲಿ ಬದಲಾಗಿದೆ.. ಆ ಕ್ಷಣವೇ ಆತ ಮಗಳ ಬಳಿ ನಗ್ನ ಚಿತ್ರಗಳನ್ನು ಕಳುಹಿಸುವಂತೆ ನೇರವಾಗಿ ಕೇಳಿದ್ದಾನೆ ಎಂದು ಅಕ್ಷಯ್ ಕುಮಾರ್ ಬಹಿರಂಗಪಡಿಸಿದ್ದಾರೆ. ಈ ವಿಚಾರವನ್ನು ಮಗಳು ತನ್ನ ಪತ್ನಿ ಜೊತೆ ಹಂಚಿಕೊಂಡಿದ್ದು ಆದಾದ ಬಳಿಕ ನಾವು ಎಚ್ಚೆತ್ತುಕೊಂಡಿದ್ದೇವೆ ಎಂದು ಅಕ್ಷಯ್ ಹೇಳಿಕೊಂಡಿದ್ದಾರೆ.
ಈ ರೀತಿ ಹಲವು ಪ್ರಕರಣಗಳು ನಡೆದಿವೆ. ಕೆಲ ಪ್ರಕರಣಗಳಲ್ಲಿ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಕ್ಷಯ್ ಕುಮಾರ್ ತಿಳಿಸಿದ್ದಾರೆ. ಇಂತಹ ಸೈಬರ್ ಅಪರಾಧಿಗಳು ಮೊದಲು ನಂಬಿಕೆ ಗಳಿಸಿ, ನಂತರ ಮಕ್ಕಳನ್ನು ಶೋಷಣೆ ಮಾಡಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಇದು ಆತ್ಮಹತ್ಯೆಗಳಿಗೂ ದಾರಿ ಮಾಡಿಕೊಡುತ್ತದೆ ಎಂದು ಅವರು ಪೋಷಕರಿಗೆ ಎಚ್ಚರಿಸಿದರು
ಮಹಾರಾಷ್ಟ್ರ ರಾಜ್ಯದಲ್ಲಿ ಪ್ರತಿ ವಾರ ಏಳನೇ, ಎಂಟನೇ, ಒಂಬತ್ತನೇ ಮತ್ತು ಹತ್ತನೇ ತರಗತಿ ಗಳಲ್ಲಿ, ಸೈಬರ್ ಅವಧಿ ಎಂಬ ಅವಧಿಯನ್ನು ಮಾಡಿ ಈ ಬಗ್ಗೆ ಶಿಕ್ಷಣ ನೀಡಬೇಕು ಎಂದು ನಾನು ಮುಖ್ಯಮಂತ್ರಿಯನ್ನು ವಿನಂತಿಸುತ್ತೇನೆ, ಅಲ್ಲಿ ಮಕ್ಕಳಿಗೆ ಇದರ ಬಗ್ಗೆ ವಿವರಿಸಬೇಕು.. ಈ ಅಪ ರಾಧವನ್ನು ಆರಂಭದಿಂದಲೇ ನಿಲ್ಲಿಸುವುದು ಬಹಳ ಮುಖ್ಯ ಎಂದು ಅಕ್ಷಯ್ ಹೇಳಿದ್ದಾರೆ.