ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Abuse: ಕಾಮುಕನ ಅಟ್ಟಹಾಸ; ಗುಪ್ತಾಂಗದ ವಿಡಿಯೊ ಕಳಿಸಿ ಸೀರಿಯಲ್ ನಟಿಗೆ ಲೈಂಗಿಕ ಕಿರುಕುಳ

Physical harassment: ತೆಲುಗು ಹಾಗೂ ಕನ್ನಡ ಧಾರವಾಹಿಗಳಲ್ಲಿ ಸಂತ್ರಸ್ತೆ ನಟಿಸಿದ್ದು, ಆರೋಪಿ ಕಳೆದ 3 ತಿಂಗಳಿನಿಂದ ನಟಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಆರೋಪಿ ಮೊದಲು ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ ಆದರೆ ರಿಕ್ವೆಸ್ಟ್ ಸ್ವೀಕರಿಸದ ಹಿನ್ನೆಲೆ ಮೆಸೆಂಜರ್ ನಲ್ಲಿ ಮೆಸೇಜ್ ಮಾಡಿದ್ದಾನೆ.

ಸೀರಿಯಲ್‌ ನಟಿಗೆ ಕಾಮುಕನಿಂದ ಕಿರುಕುಳ(ಸಂಗ್ರಹ ಚಿತ್ರ)

ಬೆಂಗಳೂರು: ಖ್ಯಾತ ಸೀರಿಯಲ್‌ ನಟಿಗೆ ಅಶ್ಲೀಲ ವಿಡಿಯೊ ಕಳಿಸಿ ಕಾಮುಕನೊಬ್ಬ ಲೈಂಗಿಕ ಕಿರುಕುಳ(Physical Abuse) ನೀಡಿರುವ ಘಟನೆಯೊಂದು ವರದಿಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಫೇಸ್ ಬುಕ್ ನಲ್ಲಿ ಗುಪ್ತಾಂಗದ ವಿಡಿಯೊ ಕಳಿಸಿ ನಟಿಗೆ ಟಾರ್ಚರ್ ನೀಡಿದ್ದಾನೆ ಎನ್ನಲಾಗಿದೆ. ತೆಲುಗು ಹಾಗೂ ಕನ್ನಡ ಧಾರವಾಹಿಗಳಲ್ಲಿ ಸಂತ್ರಸ್ತೆ ನಟಿಸಿದ್ದು, ಆರೋಪಿ ಕಳೆದ 3 ತಿಂಗಳಿನಿಂದ ನಟಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಆರೋಪಿ ಮೊದಲು ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ ಆದರೆ ರಿಕ್ವೆಸ್ಟ್ ಸ್ವೀಕರಿಸದ ಹಿನ್ನೆಲೆ ಮೆಸೆಂಜರ್ ನಲ್ಲಿ ಮೆಸೇಜ್ ಮಾಡಿದ್ದಾನೆ ಎಂದು ಸಂತ್ರಸ್ತೆ ತನ್ನದೂರಿನಲ್ಲಿ ತಿಳಿಸಿದ್ದಾಳೆ.

ಬ್ಲಾಕ್‌ ಮಾಡಿದ್ರೂ ತಪ್ಪಿಲ್ಲ ಕಿಡಿಗೇಡಿಯ ಕಾಟ

ಮೆಸೇಜ್ ಮಾಡದಂತೆ ಆರೋಪಿಗೆ ನಟಿ ಎಚ್ಚರಿಕೆ ಸಹ ನೀಡಿದ್ದರು. ಕಾಟಾ ಹೆಚ್ಚಾದ ಹಿನ್ನೆಲೆಯಲ್ಲಿ ನಟಿ ಆರೋಪಿಯನ್ನು ಬ್ಲಾಕ್ ಮಾಡಿದ್ದರು. ಬಳಿಕ ಬೇರೆ ಐಡಿಯಿಂದ ಅಶ್ಲೀಲ, ಗುಪ್ತಾಂಗದ ವಿಡಿಯೋ ಕಳಿಸಿದ್ದ. ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆ ಆರೋಪಿಗೆ ನಟಿ ಬುದ್ದಿ ಹೇಳಿದ್ದರು. ನವೆಂಬರ್ 1ರಂದು ನಾಗರಬಾವಿ ಬಳಿ ನಟಿಯನ್ನು ಆರೋಪಿ ಭೇಟಿಯಾಗಿದ್ದ. ಈ ವೇಳೆ ನಟಿ ಆರೋಪಿಗೆ ಈ ರೀತಿ ಮೆಸೇಜ್ ಮಾಡೋದು ಬೇಡ ಎಂದು ಹೇಳಿದ್ದರು. ಆದರೆ ಮತ್ತೆ ಅದೇ ರೀತಿ ಕಿರುಕುಳ ನೀಡಲು ಆರಂಭಿಸಿದ್ದರಿಂದ ನಟಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ: Indian Railway: ತೃತೀಯ ಲಿಂಗಿಗಳಂತೆ ನಟಿಸಿ ಪ್ರಯಾಣಿಕರಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಮ; 'ರೈಲ್ ಮದದ್' ಪೋರ್ಟಲ್‌ನಲ್ಲಿ ದೂರು ಸಲ್ಲಿಸಿ

ಬ್ರೆಜಿಲ್‌ ಮಾಡೆಲ್‌ಗೆ ಡೆಲಿವರಿ ಏಜೆಂಟ್‌ನಿಂದ ಲೈಂಗಿಕ ಕಿರುಕುಳ

ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯ ರಾಜಧಾನಿಯಲ್ಲಿ ಬ್ರೆಜಿಲ್‌ ಮಾಡೆಲ್‌ ಮೇಲೂ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ. ದಿನಸಿ ವಸ್ತುಗಳ ಡೆಲಿವರಿ ಮಾಡುವ ವೇಳೆ ಬ್ರೆಜಿಲ್ ಮೂಲದ ರೂಪದರ್ಶಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಪೊಲೀಸರು ಡೆಲಿವರಿ ಬಾಯ್‌ನನ್ನು ಬಂಧಿಸಿದ್ದರು. ಬೆಂಗಳೂರಿನ ಆರ್ ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ದಿನಸಿ ಡೆಲಿವರಿ ವೇಳೆ ಬ್ರೆಜಿಲಿಯನ್ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 21 ವರ್ಷದ ಡೆಲಿವರಿ ಏಜೆಂಟ್‌ನನ್ನು ಬಂಧಿಸಲಾಗಿದೆ (Arrest) ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ಖಾಸಗಿ ಕಾಲೇಜಿನಲ್ಲಿ ಡಿಪ್ಲೊಮಾ ಮಾಡುತ್ತಿರುವ ವಿದ್ಯಾರ್ಥಿ ಕುಮಾರ್ ಎಂದು ಗುರುತಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Woman thrown off Terrace: ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಟೆರೇಸ್‍ನಿಂದ ಪತ್ನಿಯನ್ನು ತಳ್ಳಿದ ಪತಿ

ಪೊಲೀಸ್ ಮೂಲಗಳ ಪ್ರಕಾರ ಇದೇ ಅಕ್ಟೋಬರ್ 17ರಂದು ಖಾಸಗಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿರುವ ಬ್ರೆಜಿಲ್ ಮೂಲದ ಮಾಡೆಲ್ ಡೆಲಿವರಿ ಆ್ಯಪ್ ಮೂಲಕ ದಿನಸಿ ಆರ್ಡರ್ ಮಾಡಿದ್ದರು. ಈ ವೇಳೆ ದಿನಸಿ ತಂದ ಡೆಲಿವರಿ ಏಜೆಂಟ್, ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಮಾಡೆಲ್ ಜೊತೆ ಅನುಚಿತ ವರ್ತನೆ ತೋರಿದ್ದಾನೆ. ಆಕೆಯನ್ನು ಮಾತಿಗೆಳೆದು ಆಕೆಯ ಮೈ ಮುಟ್ಟಲು ಯತ್ನಿಸಿದ್ದಾನೆ. ಇದರಿಂದ ಆತಂಕಕ್ಕೀಡಾದ ಬ್ರೆಜಿಲ್ ಮಾಡೆಲ್ ಕಿರುಚಿಕೊಂಡು ಬಾಗಿಲು ಲಾಕ್ ಮಾಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಡೆಲಿವರಿ ಏಜೆಂಟ್ ಅಲ್ಲಿಂದ ಪರಾರಿಯಾಗಿದ್ದಾನೆ.