ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indian Railway: ತೃತೀಯ ಲಿಂಗಿಗಳಂತೆ ನಟಿಸಿ ಪ್ರಯಾಣಿಕರಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಮ; 'ರೈಲ್ ಮದದ್' ಪೋರ್ಟಲ್‌ನಲ್ಲಿ ದೂರು ಸಲ್ಲಿಸಿ

Harassed By People Posing As Transgenders: ರೈಲಿನಲ್ಲಿ ಪ್ರಯಾಣಿಸುವಾಗ ತೃತಿಯ ಲಿಂಗಿಗಳು ಪ್ರಯಾಣಿಕರ ಬಳಿಗೆ ತೆರಳಿ ಹಣಕ್ಕಾಗಿ ಬೇಡಿಕೆಯಿಡುತ್ತಾರೆ. ಕೆಲವರು ತೃತೀಯ ಲಿಂಗಿಗಳಂತೆ ನಟಿಸಿ ಪ್ರಯಾಣಿಕರಿಂದ ಸುಲಿಗೆ ಮಾಡುತ್ತಾರೆ. ಇದರಿಂದ ಪ್ರಯಾಣಿಕರು ಸಾಕಷ್ಟು ಕಷ್ಟಪಡುವಂತಾಗಿದೆ. ಇದೀಗ ಭಾರತೀಯ ರೈಲ್ವೆ ಇಲಾಖೆ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ತೃತೀಯ ಲಿಂಗಿಗಳಂತೆ ನಟಿಸಿ ಹಣಕ್ಕಾಗಿ ಬೇಡಿಕೆ ಇಡುವ ವ್ಯಕ್ತಿಗಳಿಂದ ಕಿರುಕುಳವನ್ನು ತಪ್ಪಿಸಲು, 'ರೈಲ್ ಮದದ್' ಪೋರ್ಟಲ್ ಅನ್ನು ತಂದಿದೆ ಅಥವಾ 139 ಸಂಖ್ಯೆಗೆ ಕರೆ ಮಾಡುವ ಮೂಲಕ ದೂರು ಸಲ್ಲಿಸಬಹುದು.

ತೃತೀಯ ಲಿಂಗಿಗಳಂತೆ ನಟಿಸಿ ಕಿರುಕುಳ ನೀಡಿದರೆ ಕ್ರಮ

ಸಾಂದರ್ಭಿಕ ಚಿತ್ರ -

Priyanka P Priyanka P Nov 1, 2025 8:30 PM

ದೆಹಲಿ: ರೈಲಿನಲ್ಲಿ ಪ್ರಯಾಣಿಸುವಾಗ ತೃತಿಯ ಲಿಂಗಿಗಳನ್ನು (Transgenders) ಎದುರಿಸುವುದು ಸಾಮಾನ್ಯ. ಪ್ರಯಾಣಿಕರ ಬಳಿಗೆ ಬರುವ ಇವರು ಹಣಕ್ಕಾಗಿ ಬೇಡಿಕೆಯಿಡುತ್ತಾರೆ. ಕೆಲವರು ತೃತೀಯ ಲಿಂಗಿಗಳಂತೆ ವೇಷ ಧರಿಸಿ ಮೋಸ ಮಾಡುತ್ತಾರೆ. ಇದರಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸುತ್ತಾರೆ. ಇದೀಗ ಭಾರತೀಯ ರೈಲ್ವೆ ಇಲಾಖೆ (Indian Railway) ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ತೃತೀಯ ಲಿಂಗಿಗಳಂತೆ ನಟಿಸಿ ಹಣಕ್ಕಾಗಿ ಬೇಡಿಕೆ ಇಡುವ ವ್ಯಕ್ತಿಗಳಿಂದ ಕಿರುಕುಳವನ್ನು ತಪ್ಪಿಸಲು ಭಾರತೀಯ ರೈಲ್ವೆ ಹೊಸ ಕ್ರಮವನ್ನು ಪರಿಚಯಿಸಿದೆ. ಪ್ರಯಾಣಿಕರು ಈಗ 'ರೈಲ್ ಮದದ್' (Rail Madad) ಪೋರ್ಟಲ್ ಮೂಲಕ ಅಥವಾ 139 ಸಂಖ್ಯೆಗೆ ಕರೆ ಮಾಡುವ ಮೂಲಕ ದೂರು ಸಲ್ಲಿಸಬಹುದು.

ಉತ್ತರ ಮಧ್ಯ ರೈಲ್ವೆಯ ಆಗ್ರಾ ವಿಭಾಗದ ರೈಲ್ವೆ ರಕ್ಷಣಾ ಪಡೆ (RPF) ಇತ್ತೀಚೆಗೆ ನಡೆಸಿದ ಅಭಿಯಾನದಲ್ಲಿ, ಪ್ರಯಾಣಿಕರಿಂದ ಹಣ ಸುಲಿಗೆ ಮಾಡುವ ಸಲುವಾಗಿ ತೃತೀಯ ಲಿಂಗಿಗಳ ಗುರುತನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ 54 ಮಂದಿಯನ್ನು ಬಂಧಿಸಲಾಗಿದೆ. ಅಕ್ಟೋಬರ್ 1ರಿಂದ ಅಕ್ಟೋಬರ್ 15ರವರೆಗೆ ನಡೆದ ಈ ಅಭಿಯಾನವು ರೈಲುಗಳು ಮತ್ತು ರೈಲು ನಿಲ್ದಾಣಗಳಲ್ಲಿ ದುರುಪಯೋಗ, ಅನಧಿಕೃತ ಪ್ರಯಾಣ ಮತ್ತು ಬಲವಂತದ ಹಣ ಸುಲಿಗೆಯನ್ನು ಗುರಿಯಾಗಿಸಿಕೊಂಡಿತ್ತು.

ಇದನ್ನೂ ಓದಿ: Viral News: ದಾಂಪತ್ಯ ಬದುಕು ಇಷ್ಟೊಂದು ಕರಾಳವಾಗಿರುತ್ತಾ?ಈಕೆಯ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ!

2025ರ ಜನವರಿಯಿಂದ ಅಕ್ಟೋಬರ್‌ವರೆಗೆ, ಆರ್‌ಪಿಎಫ್ ಆಗ್ರಾ ವಿಭಾಗವು ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 303 ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಂಡಿದೆ. ಈ ಅವಧಿಯಲ್ಲಿ, ಪ್ರಯಾಣಿಕರು 'ರೈಲ್ ಮದದ್' ಪೋರ್ಟಲ್‌ನಲ್ಲಿ 257 ದೂರುಗಳನ್ನು ದಾಖಲಿಸಿದ್ದು, ಅವುಗಳನ್ನು ತಕ್ಷಣವೇ ಪರಿಹರಿಸಲಾಗಿದೆ.

ಎಲ್ಲ ವಿಭಾಗೀಯ ಪೋಸ್ಟ್ ಮತ್ತು ಔಟ್‌ಪೋಸ್ಟ್ ಇನ್‌ಚಾರ್ಜ್‌ಗಳಿಗೆ ಜಾಗರೂಕರಾಗಿರಲು, ರೈಲುಗಳು ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ನಿಯಮಿತವಾಗಿ ತಪಾಸಣೆ ನಡೆಸಲು ಮತ್ತು ಅಗತ್ಯವಿರುವಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಯಿತು. ಪ್ರಯಾಣಿಕರು ಅಂತಹ ಯಾವುದೇ ಘಟನೆಗಳನ್ನು ಆರ್‌ಪಿಎಫ್, ಸಹಾಯವಾಣಿ 139 ಅಥವಾ ಹತ್ತಿರದ ಕರ್ತವ್ಯ ಸಿಬ್ಬಂದಿಗೆ ತಕ್ಷಣ ವರದಿ ಮಾಡುವಂತೆ ಪ್ರೋತ್ಸಾಹಿಸಲಾಯಿತು.

ಎಲ್ಲ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಉತ್ತಮ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು, ಶಿಸ್ತು ಕಾಪಾಡಿಕೊಳ್ಳಲು ಮತ್ತು ರೈಲ್ವೆ ಸೇವೆಗಳನ್ನು ಸುಧಾರಿಸಲು ಆರ್‌ಪಿಎಫ್ ಆಗ್ರಾ ವಿಭಾಗವು ಬದ್ಧವಾಗಿದೆ ಎಂದು ರೈಲ್ವೇ ಇಲಾಖೆ ಹೇಳಿದೆ.

ಇದನ್ನೂ ಓದಿ: Viral News: ಅಪ್ಪನ 62 ವರ್ಷದ ಹಳೆಯ ಬ್ಯಾಂಕ್ ಪಾಸ್‌ಬುಕ್‍ ಸಿಕ್ತು... ರಾತ್ರೋರಾತ್ರಿ ಮಗ ಕೋಟ್ಯಧಿಪತಿ!

ಔರಂಗಾಬಾದ್ ರೈಲು ನಿಲ್ದಾಣಕ್ಕೆ ಮರುನಾಮಕರಣ

ಮಹಾರಾಷ್ಟ್ರದ ಔರಂಗಾಬಾದ್ ರೈಲು ನಿಲ್ದಾಣದ ಹೆಸರನ್ನು ಅಧಿಕೃತವಾಗಿ ಬದಲಾಯಿಸಲಾಗಿದೆ. ರೈಲು ನಿಲ್ದಾಣಕ್ಕೆ ಛತ್ರಪತಿ ಸಂಭಾಜಿ ಎಂದು ಮರುನಾಮಕರಣ ಮಾಡಲಾಗಿದೆ. ಏಕನಾಥ್ ಶಿಂಧೆ ನೇತೃತ್ವದ ಹಿಂದಿನ ಸರ್ಕಾರವು ಔರಂಗಾಬಾದ್ ನಗರವನ್ನು ಛತ್ರಪತಿ ಸಂಭಾಜಿನಗರ ಎಂದು ಔಪಚಾರಿಕವಾಗಿ ಮರುನಾಮಕರಣ ಮಾಡಿದ ಸುಮಾರು ಮೂರು ವರ್ಷಗಳ ಅನಂತರ ರೈಲು ನಿಲ್ದಾಣದ ಹೆಸರು ಬದಲಾವಣೆ ಮಾಡಲಾಗಿದೆ.

ಔರಂಗಾಬಾದ್ ರೈಲು ನಿಲ್ದಾಣವನ್ನು 1900ರಲ್ಲಿ ಹೈದರಾಬಾದ್‌ನ 7ನೇ ನಿಜಾಮ್ ಮೀರ್ ಉಸ್ಮಾನ್ ಅಲಿ ಖಾನ್ ಆಳ್ವಿಕೆಯಲ್ಲಿ ತೆರೆಯಲಾಗಿತ್ತು. ಪ್ರವಾಸಿ ಕೇಂದ್ರವು ಆಗಿರುವ ಛತ್ರಪತಿ ಸಂಭಾಜಿನಗರಕ್ಕೆ ಸಮೀಪವಾಗಿ ಅಜಂತಾ, ಎಲ್ಲೋರಾ ಗುಹೆಗಳು ಸೇರಿದಂತೆ ಅನೇಕ ಐತಿಹಾಸಿಕ ಸ್ಮಾರಕಗಳಿವೆ. ಇವೆರಡೂ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.