Physical abuse: ದೇಶವನ್ನೇ ಬೆಚ್ಚಿ ಬೀಳಿಸೋ ಘಟನೆ... ಬಾಲಕಿಗೆ ಡ್ರಗ್ಸ್ ನೀಡಿ ಕಾರಿನಲ್ಲೇ ಗ್ಯಾಂಗ್‌ರೇಪ್
Girl kidnapped and Physical abused: ಕಳೆದ ಭಾನುವಾರ ಫರಿದಾಬಾದ್‌ನಲ್ಲಿ 8ನೇ ತರಗತಿಯ ಬಾಲಕಿಯನ್ನು ಅಪಹರಿಸಿ ನಾಲ್ಕು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಒಂದು ದಿನವಿಡೀ ಬಾಲಕಿಯನ್ನು ಒತ್ತೆಯಾಳಾಗಿ ಇರಿಸಿ ಅತ್ಯಾಚಾರ ಮಾಡಲಾಗಿತ್ತು. ಬಳಿಕ ಆರೋಪಿಗಳು ಆಕೆಯನ್ನು ಮನೆಯ ಬಳಿ ಬಿಟ್ಟು ಪರಾರಿಯಾಗಿದ್ದಾರೆ. ಅಕ್ಟೋಬರ್ 26ರಂದು ಸಂಜೆ 7 ಗಂಟೆ ಸುಮಾರಿಗೆ ಸೆಕ್ಟರ್ 18 ಮಾರುಕಟ್ಟೆಗೆ ಹೋಗಿದ್ದಳು. ಆಕೆ ಹಿಂತಿರುಗದಿದ್ದಾಗ ಮನೆಯವರೆಲ್ಲ ಹುಡುಕಾಡಿದ್ದಾರೆ. ಆದರೂ ಆಕೆ ಸಿಗಲಿಲ್ಲ. ಮರುದಿನ ಬೆಳಗ್ಗೆ 4.30 ರ ಸುಮಾರಿಗೆ ಮನೆಗೆ ಬಂದಿದ್ದು, ಹಿಂದಿನ ಸಂಜೆ ಕಾರಿನಲ್ಲಿ ನಾಲ್ವರು ಯುವಕರು ಅವಳನ್ನು ಅಪಹರಿಸಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
-
ವಿದ್ಯಾ ಇರ್ವತ್ತೂರು
Oct 30, 2025 11:31 AM
ಫರಿದಾಬಾದ್: ಬಾಲಕಿಯೊಬ್ಬಳ ಮೇಲೆ ನಾಲ್ಕು ಮಂದಿ ಸಾಮೂಹಿಕವಾಗಿ ಅತ್ಯಾಚಾರ (Physical abuse) ನಡೆಸಿರುವ ಘಟನೆ ಕಳೆದ ಭಾನುವಾರ ಫರಿದಾಬಾದ್‌ನಲ್ಲಿ (Faridabad) ನಡೆದಿದೆ. ವಾಹನದಲ್ಲಿ ಬಂದ 4 ಮಂದಿ ಅಕ್ಟೋಬರ್ 26ರಂದು ಸಂಜೆ 8ನೇ ತರಗತಿಯ ವಿದ್ಯಾರ್ಥಿನಿಯನ್ನು ಅಪಹರಿಸಿದ್ದಾರೆ. ಬಳಿಕ ಒಂದು ದಿನ ಒತ್ತೆಯಾಳಾಗಿ (kidnap case) ಇರಿಸಿಕೊಂಡ ಅವರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ (crime news) ನಡೆಸಿ ಮರುದಿನ ಬೆಳಗ್ಗೆ ಆಕೆಯನ್ನು ಮನೆಯ ಬಳಿ ಬಿಟ್ಟು ತಮ್ಮ ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ಫರಿದಾಬಾದ್ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
8 ನೇ ತರಗತಿಯ 15 ವರ್ಷದ ಬಾಲಕಿಯನ್ನು ನಾಲ್ವರು ತಮ್ಮ ಕಾರಿನಲ್ಲಿ ಬಂದು ಅಪಹರಿಸಿಕೊಂಡು ಹೋಗಿದ್ದಾರೆ. ಅಕ್ಟೋಬರ್ 26ರಂದು ಸಂಜೆ 7 ಗಂಟೆ ಸುಮಾರಿಗೆ ಬಂದ ಆರೋಪಿಗಳು ಅಕ್ಟೋಬರ್ 27ರಂದು ಬೆಳಗ್ಗೆ 4 ಗಂಟೆಯವರೆಗೆ ಒತ್ತೆಯಾಳಾಗಿರಿಸಿಕೊಂಡು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಆರೋಪಿಗಳು ಆಕೆಯನ್ನು ಆಕೆಯ ಮನೆಯ ಬಳಿ ಬಿಟ್ಟು ತಮ್ಮ ವಾಹನದಲ್ಲಿ ಪರಾರಿಯಾಗಿದ್ದಾರೆ.
#WATCH | Faridabad, Haryana: DCP Central, Usha Devi says, "...A 15-year-old girl, a school student, was raped when she had gone out on Chhath day, called a boy who was her friend. However, instead of one boy, 3-4 boys came... We have registered a case against 3-4 unknown boys,… pic.twitter.com/5Lg5GfMlzi
— ANI (@ANI) October 29, 2025
ಇದನ್ನೂ ಓದಿ: Dharmastala Case: ಧರ್ಮಸ್ಥಳ ಪ್ರಕರಣಕ್ಕೆ ಭಾರಿ ಟ್ವಿಸ್ಟ್, ಕೇಸ್ ರದ್ದತಿ ಕೋರಿ ʼಬುರುಡೆ ಗ್ಯಾಂಗ್ʼ ಹೈಕೋರ್ಟ್‌ಗೆ
ಈ ಕುರಿತು ಬಾಲಕಿಯ ಸಹೋದರಿ ಪೊಲೀಸರಿಗೆ ದೂರು ನೀಡಿದ್ದಾಳೆ. ತನ್ನ ತಂಗಿ ಅಕ್ಟೋಬರ್ 26ರಂದು ಸಂಜೆ 7 ಗಂಟೆ ಸುಮಾರಿಗೆ ಸೆಕ್ಟರ್ 18 ಮಾರುಕಟ್ಟೆಗೆ ಹೋಗಿದ್ದಳು. ಆಕೆ ಹಿಂತಿರುಗದಿದ್ದಾಗ ಮನೆಯವರೆಲ್ಲ ಹುಡುಕಾಡಿದ್ದಾರೆ. ಆದರೂ ಆಕೆ ಸಿಗಲಿಲ್ಲ. ಮರುದಿನ ಬೆಳಗ್ಗೆ 4.30 ರ ಸುಮಾರಿಗೆ ಮನೆಗೆ ಬಂದಿದ್ದು, ಹಿಂದಿನ ಸಂಜೆ ಕಾರಿನಲ್ಲಿ ನಾಲ್ವರು ಯುವಕರು ಅವಳನ್ನು ಅಪಹರಿಸಿದ್ದಾರೆ ಎಂದು ಹೇಳಿದ್ದಾಳೆ. ಬಳಿಕ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಮಾದಕ ದ್ರವ್ಯ ನೀಡಿ ಅತ್ಯಾಚಾರ ನಡೆಸಿರುವುದಾಗಿ ತಿಳಿಸಿದ್ದಾಳೆ ಎಂದು ಬಾಲಕಿಯ ಸಹೋದರಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಈ ಕುರಿತು ಮಂಗಳವಾರ ಫರಿದಾಬಾದ್ ಹಳೆಯ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ನಾಲ್ವರು ಅಪರಿಚಿತ ಯುವಕರ ವಿರುದ್ಧ ಕೇಸು ದಾಖಲಿಸಲಾಗಿದೆ.
ಇದನ್ನೂ ಓದಿ: ISA 8th Session: ಭಾರತದ ಸೌರ ಸಾಧನೆಗೆ ತಲೆದೂಗಿವೆ 125 ರಾಷ್ಟ್ರಗಳು
ಈ ಕುರಿತು ಪ್ರತಿಕ್ರಿಯಿಸಿರುವ ಫರಿದಾಬಾದ್ ಹಳೆಯ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ವಿಷ್ಣು ಮಿತ್ತರ್, ಬಾಲಕಿ ಇನ್ನು ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಸೆಕ್ಟರ್ 18 ಮಾರುಕಟ್ಟೆಯ ಸುತ್ತಲೂ ಅಳವಡಿಸಲಾದ ಸಿಸಿಟಿವಿ ಕೆಮರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಗಳನ್ನು ಪತ್ತೆಹಚ್ಚಿ ಶೀಘ್ರದಲ್ಲೇ ಬಂಧಿಸಲಾಗುವುದು. ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಲಾಗಿದೆ ಎಂದು ಅವರು ಹೇಳಿದ್ದಾರೆ.