ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಮೆರಿಕದ ಹಿಂದೂ ದೇವಾಲಯದಲ್ಲಿ ಭಾರತೀಯರ ಸಾಮೂಹಿಕ ಹತ್ಯೆಗೆ ಸಂಚು: ಹದಿಹರೆಯದ ಆರೋಪಿ ಬಂಧನ

ಹಿಂದೂ ದೇವಾಲಯದ ಮೇಲೆ ಅಮೆರಿಕದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಇಲಿನಾಯ್ಸ್‌ನ ಚಿಕಾಗೋ ಬಳಿಯ ಅರೋರಾ ಪ್ರದೇಶದಲ್ಲಿ ನಡೆದಿದೆ. ಆರೋಪಿಯ ರೈಫಲ್ ಜಾಮ್ ಆಗಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ. ಆರೋಪಿಯ ವಿರುದ್ಧ ಭಯೋತ್ಪಾದನೆ ಅಕ್ರಮ ರೈಫಲ್ ಹೊಂದಿರುವ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಂಗ್ರಹ ಚಿತ್ರ

ವಾಷಿಂಗ್ಟನ್: ಹಿಂದೂ ದೇವಾಲಯದ (hindu temple) ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ 19 ವರ್ಷದ ಯುವಕನೊಬ್ಬನನ್ನು ಬಂಧಿಸಿರುವ ಘಟನೆ ಅಮೆರಿಕದಲ್ಲಿ (america) ನಡೆದಿದೆ. ಇಲಿನಾಯ್ಸ್‌ನ (Illinois) ಚಿಕಾಗೋ (Chicago) ಬಳಿಯ ಅರೋರಾ ಪ್ರದೇಶದಲ್ಲಿರುವ ಪ್ಯಾಲಟೈನ್‌ನ ಅಲೆಕ್ಸಾಂಡ್ರೋಸ್ ಪಾಪೊರಾಕಿಸ್ ಎಂಬಾತ ಹಿಂದೂ ದೇವಾಲಯದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಸಲು ಸಂಚು ರೂಪಿಸಿದ್ದನು. ಆದರೆ ಕೊನೆಯ ಕ್ಷಣದಲ್ಲಿ ಆತನಲ್ಲಿದ್ದ ರೈಫಲ್ ಕೈಕೊಟ್ಟಿದ್ದು, ಭಾರಿ ಅನಾಹುತವೊಂದು ತಪ್ಪಿದಂತಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕೇವಲ ಎರಡು ವಾರಗಳ ಹಿಂದಷ್ಟೇ ಓಹಿಯೋದ ರಿಚ್‌ಮಂಡ್ ಹೈಟ್ಸ್‌ನಲ್ಲಿರುವ 'ಶ್ರೀ ಸ್ವಾಮಿನಾರಾಯಣ ವಡ್ತಾಲ್ ಧಾಮ್ ಹಿಂದೂ ಮಂದಿರ'ದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಹಾನಿ ಮಾಡಿದ ಬಳಿಕ ಈ ಘಟನೆ ನಡೆದಿದೆ. ಬಂಧಿತ ಆರೋಪಿ ಅಲೆಕ್ಸಾಂಡ್ರೋಸ್ ಪಾಪೊರಾಕಿಸ್ ಬಳಿ 'ಶ್ವೇತವರ್ಣೀಯರ ಶ್ರೇಷ್ಠತೆ'ಯ ಸಿದ್ಧಾಂತಗಳನ್ನು ಪ್ರತಿಪಾದಿಸುವ, ಭಾರತೀಯ ಮೂಲದ ಜನರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಅಂಶಗಳನ್ನು ಒಳಗೊಂಡ ದಾಖಲೆಯೊಂದು ಪತ್ತೆಯಾಗಿದೆ.

ಇಸ್ರೇಲ್‌ಗೆ ತೆರಳುವ ವಿಮಾನಗಳಲ್ಲಿ ಪಾಕಿಸ್ತಾನಿ ಪೈಲಟ್‌ಗಳನ್ನು ನಿಷೇಧಿಸಿದ ಏರ್ ಫ್ರಾನ್ಸ್

ರೋಲಿಂಗ್ ಮೆಡೋಸ್‌ನಲ್ಲಿರುವ ಕುಕ್ ಕೌಂಟಿ ಮೂರನೇ ಮುನ್ಸಿಪಲ್ ಡಿಸ್ಟ್ರಿಕ್ಟ್ ನ್ಯಾಯಾಲಯದಲ್ಲಿ ಬುಧವಾರ ಪಾಪೊರಾಕಿಸ್‌ನನ್ನು ಹಾಜರುಪಡಿಸಲಾಗಿದ್ದು, ಅಕ್ಟೋಬರ್ 30ರ ವರೆಗೆ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 30ರಂದು ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ.

ಪ್ಯಾಲಟೈನ್‌ನ ರೆಸ್ಟೋರೆಂಟ್‌ವೊಂದರಲ್ಲಿ ಕ್ಯಾಷಿಯರ್ ಆಗಿದ್ದ ಪಾಪೊರಾಕಿಸ್ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದಾನೆ ಎನ್ನುವ ಮಾಹಿತಿಯನ್ನು ವ್ಯಕ್ತಿಯೊಬ್ಬರು ಪೊಲೀಸರಿಗೆ ನೀಡಿದ್ದರು. ದಾಳಿ ನಡೆಸಲು ಪಾಪೊರಾಕಿಸ್ ಸಿದ್ಧಪಡಿಸಿಕೊಂಡಿರುವ ರೈಫಲ್, ಮ್ಯಾಗಜೀನ್‌ಗಳು, ಬಾಡಿ ಆರ್ಮರ್ ಮತ್ತು ಇತರ ಚಿತ್ರಗಳನ್ನು ದೂರು ನೀಡಿದ ವ್ಯಕ್ತಿಯು ಪೊಲೀಸರೊಂದಿಗೆ ಹಂಚಿಕೊಂಡಿದ್ದನು.

ಮಾಹಿತಿ ಆಧಾರದಲ್ಲಿ ಪಾಪೊರಾಕಿಸ್ ಅಕ್ಟೋಬರ್ 11ರಂದು ಅರೋರಾ ಪ್ರದೇಶದಲ್ಲಿರುವ ಹಿಂದೂ ದೇವಾಲಯವೊಂದರ ಮೇಲೆ ದಾಳಿ ನಡೆಸಲು ಯೋಜಿಸಿರಬಹುದು. ಆದರೆ ಆತ ನಿಖರವಾಗಿ ಯಾವ ಸ್ಥಳವನ್ನು ಗುರಿಯಾಗಿಸಿಕೊಂಡಿದ್ದನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಆರೋಪಿಯು ತನ್ನ ಸಹೋದ್ಯೋಗಿಗೆ ದಾಳಿಯ ಸೂಚನೆಯನ್ನು ಮೊದಲೇ ನೀಡಿದ್ದನು ಎನ್ನಲಾಗಿದೆ. ಆತ ಸಹೋದ್ಯೋಗಿಗಳ ಬಳಿ ಭಾನುವಾರ "ಒಂದು ವಿಶೇಷ ದಿನ"ವಾಗಲಿದೆ ಎಂದು ಹೇಳಿದ್ದನು. ಭಾನುವಾರ ಆತ ಯಾರ ಕಣ್ಣಿಗೂ ಬೀಳದಂತೆ ಕೆಲಸದ ಸ್ಥಳದಿಂದ ತುಂಬಾ ವೇಗವಾಗಿ ಹೊರಟು ಹೋಗಿದ್ದ ಎಂದು ಪ್ಯಾಲಟೈನ್ ಪೊಲೀಸ್ ಮುಖ್ಯಸ್ಥ ವಿಲಿಯಂ ನಾರ್ಡ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ತಿಳಿದ ತಕ್ಷಣವೇ ತನಿಖೆಗೆ ಆರಂಭಿಸಿದ ಪೊಲೀಸರು ಪ್ಯಾಲಟೈನ್ ಮತ್ತು ಮೌಂಟ್ ಪ್ರಾಸ್ಪೆಕ್ಟ್ ಪೊಲೀಸ್ ಇಲಾಖೆಗಳ ಸಹಯೋಗದೊಂದಿಗೆ ಅಕ್ಟೋಬರ್ 11ರಂದು ಪಪೊರಾಕಿಸ್ ನನ್ನು ಆತನ ನಿವಾಸದ ಬಳಿಯೇ ಸೆರೆ ಹಿಡಿಯಲಾಯಿತು. ಬಳಿಕ ಆತನ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು ಈ ಸಂದರ್ಭದಲ್ಲಿ ಒಂದು ರೈಫಲ್, ಬಹು ಲೋಡ್ ಮಾಡಿದ ರೈಫಲ್ ಮ್ಯಾಗಜೀನ್‌ಗಳು, ನೂರಾರು ಸುತ್ತುಗಳ ಹೆಚ್ಚುವರಿ ರೈಫಲ್ ಮದ್ದುಗುಂಡುಗಳು, ಯುದ್ಧತಂತ್ರದ ಉಪಕರಣಗಳು ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಅಧಿಕಾರಿಗಳ ಜೊತೆ ನಿಕಟವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಪ್ಯಾಲಟೈನ್ ಪೊಲೀಸ್ ಇಲಾಖೆ ತಿಳಿಸಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಹಿಂದೂ ಅಮೇರಿಕನ್ ಫೌಂಡೇಶನ್ ತ್ವರಿತ ಕ್ರಮಕ್ಕಾಗಿ ಕಾನೂನು ಜಾರಿ ಸಂಸ್ಥೆಗಳಿಗೆ ಧನ್ಯವಾದಗಳನ್ನು ಸಲ್ಲಿಸಿದೆ. ಅಲ್ಲದೇ ಸಮುದಾಯದ ಜನರು ಜಾಗರೂಕರಾಗಿರಿ ಮತ್ತು ಯಾವುದೇ ಸಂಭಾವ್ಯ ಬೆದರಿಕೆ ಕಂಡು ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಿದೆ.

ಪಾಕಿಸ್ತಾನದಲ್ಲಿ ಲಷ್ಕರ್ ಕಮಾಂಡರ್ ಇಮ್ರಾನ್ ಹತ್ಯೆ? ಹಾಡಹಗಲೇ ಗುಂಡಿಕ್ಕಿ ಕೊಂದ ಅಪರಿಚಿತ ವ್ಯಕ್ತಿ: ವಿಡಿಯೊ ವೈರಲ್

ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಪ್ರತಿಕ್ರಿಯಿಸಿ ನಮ್ಮ ಭಕ್ತರು, ಉದ್ಯೋಗಿಗಳು ಮತ್ತು ಸ್ವಯಂಸೇವಕರ ಸುರಕ್ಷತೆಯೇ ನಮ್ಮ ಅತ್ಯುನ್ನತ ಆದ್ಯತೆಯಾಗಿದೆ. ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ದೇವಾಲಯದಲ್ಲಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ತಕ್ಷಣದಿಂದಲೇ ಜಾರಿಗೆ ತರಲಾಗಿದೆ ಎಂದು ತಿಳಿಸಿದೆ.

ವಿದ್ಯಾ ಇರ್ವತ್ತೂರು

View all posts by this author