ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Reels Case: ಮಚ್ಚು ಹಿಡಿದು ರೀಲ್ಸ್‌ ಮಾಡಿದ ರಜತ್‌ಗೆ ಮತ್ತೆ ಪೊಲೀಸ್‌ ನೋಟೀಸ್

ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಶಸ್ತ್ರಾಸ್ತ್ರ ತಡೆ ಕಾಯ್ದೆಯಡಿ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಹಾಗೂ ರಜತ್ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ವಿಚಾರಣೆ ವೇಳೆ ರೀಲ್ಸ್‌ನಲ್ಲಿ ಹಿಡಿದಿದ್ದು ಒರಿಜಿನಲ್ ಮಚ್ಚಲ್ಲ, ಫೈಬರ್ ಮಚ್ಚು ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ಆದರೆ ಮಚ್ಚು ಇದುವರೆಗೂ ಪತ್ತೆಯಾಗಿಲ್ಲ.

ಮಚ್ಚು ಹಿಡಿದು ರೀಲ್ಸ್‌ ಮಾಡಿದ ರಜತ್‌ಗೆ ಮತ್ತೆ ಪೊಲೀಸ್‌ ನೋಟೀಸ್

ಹರೀಶ್‌ ಕೇರ ಹರೀಶ್‌ ಕೇರ Apr 16, 2025 9:47 AM

ಬೆಂಗಳೂರು : ಮಚ್ಚು ಹಿಡಿದು ರೀಲ್ಸ್ (reels case) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಮತ್ತೆ ನಟ ರಜತ್‌ಗೆ (Rajath) ಬಸವೇಶ್ವರ ನಗರ ಪೊಲೀಸರು ನೋಟಿಸ್ (Police notice) ನೀಡಿದ್ದಾರೆ. ಬಸವೇಶ್ವರ ನಗರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ರಜತ್‌ಗೆ ಸೂಚನೆ ನೀಡಿದ್ದು, ರಜತ್ ಬಳಸಿದ ಒರಿಜಿನಲ್ ಮಚ್ಚು ಪತ್ತೆಯಾಗದ ಹಿನ್ನೆಲೆಯಲ್ಲಿ ವಿಚಾರಣೆಗೆ ಕರೆದಿದ್ದಾರೆ ಎನ್ನಲಾಗಿದೆ.

ಲಾಂಗ್ ಹಿಡಿದು ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಇಬ್ಬರೂ ಹಾಜರಾಗಿದ್ದರು. ನಂತರ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಕೋರ್ಟ್ ವಶಕ್ಕೆ ನೀಡಿದ್ದರು. ನಂತರ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ವಿನಯ್ ಗೌಡ ಹಾಗೂ ರಜತ್ ರಿಲೀಸ್ ಆಗಿ ಹೊರ ಬಂದಿದ್ದಾರೆ.

ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಶಸ್ತ್ರಾಸ್ತ್ರ ತಡೆ ಕಾಯ್ದೆಯಡಿ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಹಾಗೂ ರಜತ್ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ವಿಚಾರಣೆ ವೇಳೆ ರೀಲ್ಸ್‌ನಲ್ಲಿ ಹಿಡಿದಿದ್ದು ಒರಿಜಿನಲ್ ಮಚ್ಚಲ್ಲ, ಫೈಬರ್ ಮಚ್ಚು ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ಆದರೆ ಮಚ್ಚು ಇದುವರೆಗೂ ಪತ್ತೆಯಾಗಿಲ್ಲ.

ಈ ನಡುವೆ, ಸುಮನಹಳ್ಳಿ ರಾಜಕಾಲುವೆಯಲ್ಲಿ ಮಚ್ಚನ್ನು ಎಸೆದಿದ್ದೇನೆ ಎಂದು ಕೂಡ ರಜತ್‌ ಹೇಳಿದ್ದರು. ಈ ಹೇಳಿಕೆಯಿಂದಾಗಿ, ಇದಕ್ಕೂ ದರ್ಶನ್‌ ಪ್ರಕರಣಕ್ಕೂ ತಳುಕು ಹಾಕಲಾಗಿತ್ತು.

ಇದನ್ನೂ ಓದಿ: Rajath and Vinay Gowda: ಮಚ್ಚು ಹಿಡಿದು ರೀಲ್ಸ್‌ ಪ್ರಕರಣ; ರಜತ್‌, ವಿನಯ್‌ ಗೌಡಗೆ ಜಾಮೀನು ಮಂಜೂರು