ಚಿಂತಾಮಣಿ: ತಾಲ್ಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದೆಪಲ್ಲಿ ಗ್ರಾಮದ ಕೆರೆ ಅಂಗಳದಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಅಡ್ಡೆ ಯೊಂದರ ಮೇಲೆ ಪೊಲೀಸರು ಯಶಸ್ವಿ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ನಗದು ಹಣ ಹಾಗೂ ಬೈಕ್‌ಗಳನ್ನು ವಶಪಡಿಸಿ ಕೊಳ್ಳಲಾಗಿದೆ.
ದಾಳಿಯ ವೇಳೆ, ಸ್ಥಳದಲ್ಲಿ ಜೂಜಾಡುತ್ತಿದ್ದ ತಿಮ್ಮಸಂದ್ರ ಗ್ರಾಮದ ಶ್ರೀನಿವಾಸ ಬಿ ಬಿನ್ ರಾಮಪ್ಪ(45 ವರ್ಷ)ಬುರುಗಮಾಕಲಹಳ್ಳಿ ಗ್ರಾಮದ ಹರಿ ಬಿನ್ ಬಾಲಸಂದ್ರ (35 ವರ್ಷ) ಮಾಳಪ್ಪಲ್ಲಿ ಚಿಂತಾಮಣಿ ನಗರದ ಗೋವಿಂದಪ್ಪ ಬಿನ್ ಬಾಲಪ್ಪ (51ವರ್ಷ) ಚಿಂತಾ ಮಣಿ ನಗರದ ನೆಕ್ಕುಂದಿಪೇಟೆಯ ಅನ್ವರ್ ಬಿನ್ ಹುಸೈನ್ ಸಾಬಿ(54 ವರ್ಷ) ಕೃಷ್ಣರಾಜ ಪುರ ಗ್ರಾಮದ ಅರ್ಜುನ್ ಬಿನ್ ರಮಣಪ್ಪ(38 ವರ್ಷ)ಎಂಬುವವರನ್ನು ವಶಕ್ಕೆ ಪಡೆದು ಪೊಲೀಸರು ಜೂಜಾಟದ ಸ್ಥಳದಿಂದ ಒಟ್ಟು 6,950/-ರೂ.ನಗದು ಹಣ 52 ಇಸ್ಪೀಟ್ ಎಲೆಗಳು ಹಾಗೂ ಆರೋಪಿಗಳು ಬಳಸುತ್ತಿದ್ದ 4 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.