ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kerala News: ಕಾರಾಗೃಹದಲ್ಲೇ ಜೈಲರ್‌ ಮೇಲೆ ಕೈದಿಗಳಿಂದ ಡೆಡ್ಲಿ ಅಟ್ಯಾಕ್‌!

Prisoners Attack Jail Official: ಕೇರಳದ ಕಾರಾಗೃಹವೊಂದರಲ್ಲಿ ಕೈದಿಗಳಿಬ್ಬರು ಜೈಲು ಅಧಿಕಾರಿಯ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದಾರೆ. ಕೇರಳದ ವಿಯ್ಯೂರಿನ ಹೈ ಸೆಕ್ಯುರಿಟಿ ಜೈಲಿನಲ್ಲಿ ಘಟನೆ ನಡೆದಿದೆ. ಕೈದಿಗಳಾದ ಅಜರುದ್ದೀನ್ ಮತ್ತು ಮನೋಜ್ ವಿರುದ್ಧ ವಿಯ್ಯೂರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಜೈಲರ್‌ ಮೇಲೆಯೇ ಕೈದಿಗಳಿಂದ ಡೆಡ್ಲಿ ಅಟ್ಯಾಕ್‌

ಜೈಲಾಧಿಕಾರಿ ಮೇಲೆ ಕೈದಿಗಳಿಂದ ಮಾರಣಾಂತಿಕ ಹಲ್ಲೆ (ಸಾಂದರ್ಭಿಕ ಚಿತ್ರ) -

Priyanka P
Priyanka P Nov 14, 2025 1:36 PM

ತಿರುವನಂತಪುರ: ಇಬ್ಬರು ಕೈದಿಗಳು ಹರಿತವಾದ ಟೈಲ್ಸ್‌ಗಳಿಂದ ಇರಿದ ಪರಿಣಾಮ ಜೈಲು ಅಧಿಕಾರಿಯೊಬ್ಬರು ಗಂಭೀರವಾಗಿ ಗಾಯಗೊಂಡ ಆಘಾತಕಾರಿ ಘಟನೆ ಕೇರಳದ (Kerala) ವಿಯ್ಯೂರಿನ ಹೈ ಸೆಕ್ಯುರಿಟಿ ಜೈಲಿನಲ್ಲಿ ನಡೆದಿದೆ. ಈ ಆರೋಪಿಗಳು, ಭಯೋತ್ಪಾದನಾ ಪ್ರಕರಣಗಳಲ್ಲಿ ಭಾಗಿಯಾಗಿದ್ದವರು ಮತ್ತು ಕೇರಳ ಸಮಾಜವಿರೋಧಿ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (KAAPA) ಅಡಿಯಲ್ಲಿ ಬಂಧಿತರಾಗಿರುವ ಕೈದಿಗಳಾದ ಅಜರುದ್ದೀನ್ ಮತ್ತು ಮನೋಜ್ ವಿರುದ್ಧ ವಿಯ್ಯೂರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ (Crime News).

ಎಫ್‌ಐಆರ್ ಪ್ರಕಾರ, ಗುರುವಾರ ಸಂಜೆ 5.20ರ ಸುಮಾರಿಗೆ ಈ ಘಟನೆ ನಡೆದಿದ್ದು, ಕೊಟ್ಟಾರಕರದ ಸಹಾಯಕ ಜೈಲು ಅಧಿಕಾರಿ ಅಭಿನವ್, ಜೈಲಿನ ಮೊದಲ ಮಹಡಿಯಲ್ಲಿದ್ದ ಇಬ್ಬರು ಕೈದಿಗಳಾದ ಅಜರುದ್ದೀನ್ ಮತ್ತು ಮನೋಜ್ ಅವರನ್ನು ತಮ್ಮ ಕೋಣೆಗಳಿಗೆ ಹಿಂತಿರುಗಲು ಹೇಳಿದ್ದಾರೆ. ತಮಗೆ ನಿರ್ದೇಶನ ನೀಡಿದ್ದರಿಂದ ಕೆರಳಿದ ಅಜರುದ್ದೀನ್, ಅಭಿನವ್‌ ಅವರ ಕುತ್ತಿಗೆಗೆ ಹರಿತವಾದ ಟೈಲ್ಸ್‌ನಿಂದ ಇರಿದಿದ್ದಾನೆ. ಪರಿಣಾಮ ಜೈಲಧಿಕಾರಿಯ ಎದೆ ಮತ್ತು ಎರಡೂ ಕೈಗಳಿಗೆ ಗಾಯಗಳಾಗಿವೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Pocso Case: ಪೋಕ್ಸೊ ಕೇಸ್‌ನಲ್ಲಿ ಬಿ.ಎಸ್. ಯಡಿಯೂರಪ್ಪಗೆ ನೀಡಿದ್ದ ಸಮನ್ಸ್‌ ರದ್ದು ಮಾಡಲು ಹೈಕೋರ್ಟ್‌ ನಕಾರ

ನಂತರ ಅಜರುದ್ದೀನ್ ಮತ್ತು ಮನೋಜ್ ಇಬ್ಬರೂ ಅಧಿಕಾರಿ ಅಭಿನವ್ ಮೇಲೆ ಕೀಲಿಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಮತ್ತೊಬ್ಬ ಕೈದಿ ರೆಜಿಕುಮಾರ್ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಇಬ್ಬರೂ ಅವನ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇತರ ಜೈಲು ಅಧಿಕಾರಿಗಳು ಶೀಘ್ರದಲ್ಲೇ ಸ್ಥಳಕ್ಕೆ ತಲುಪಿ, ಆರೋಪಿಗಳನ್ನು ಹತ್ತಿಕ್ಕಿದ್ದಾರೆ. ಕೂಡಲೇ ಜೈಲಧಿಕಾರಿ ಅಭಿನವ್ ಮತ್ತು ಗಾಯಗೊಂಡ ಕೈದಿ ರೆಜಿಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರು.

ಅಭಿನವ್ ಅವರ ದೂರಿನ ಆಧಾರದ ಮೇಲೆ, ವಿಯ್ಯೂರು ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 109(1) (ಕೊಲೆ ಯತ್ನ), 117(2) (ತೀವ್ರ ಗಾಯ ಉಂಟುಮಾಡುವುದು), 118(1) (ಅಪಾಯಕಾರಿ ಆಯುಧಗಳಿಂದ ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು), 115(2) (ಉದ್ದೇಶಪೂರ್ವಕವಾಗಿ ಗಾಯಗೊಳಿಸುವುದು), 126(2), 121(2) (ಸಾರ್ವಜನಿಕ ಸೇವಕನ ಮೇಲೆ ಸ್ವಯಂಪ್ರೇರಣೆಯಿಂದ ಗಂಭೀರ ಗಾಯಗೊಳಿಸುವುದು), 132 (ಸಾರ್ವಜನಿಕ ಸೇವಕನ ಮೇಲೆ ಹಲ್ಲೆ), ಮತ್ತು 296 (ಸಾಮಾನ್ಯ ಉದ್ದೇಶದಿಂದ ಬಹು ವ್ಯಕ್ತಿಗಳು ಮಾಡಿದ ಅಪರಾಧ ಕೃತ್ಯ) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: Pak Prisoners: ಭೂಕಂಪನದ ಲಾಭ ಪಡೆದು ಜೈಲಿನಿಂದ ತಪ್ಪಿಸಿಕೊಂಡ 216 ಕೈದಿಗಳು-ಪಾಕ್‌ನಲ್ಲಿ ಇದೆಂಥಾ ಅವ್ಯವಸ್ಥೆ!?

ಘಟನೆ ನಂತರ ಕೈದಿಗಳಾದ ಅಜರುದ್ದೀನ್ ಮತ್ತು ಮನೋಜ್‍ನನ್ನು ಅವರವರ ಸೆಲ್‌ಗಳೊಳಗೆ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳ ಬಂಧನವನ್ನು ಶೀಘ್ರದಲ್ಲೇ ಔಪಚಾರಿಕವಾಗಿ ದಾಖಲಿಸಲಾಗುವುದು. ನಂತರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಂಭೀರ ಗಾಯಗೊಂಡ ಜೈಲಧಿಕಾರಿ ಅಭಿನವ್ ಅವರ ಆರೋಗ್ಯ ಪ್ರಸ್ತುತ ಸ್ಥಿರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕ್ಯಾನ್ಸರ್‌ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಸೇರಿಸಿದ್ದ ಸಜಾ ಕೈದಿ ಆಸ್ಪತ್ರೆಯಿಂದ ಪರಾರಿಯಾಗಿದ್ದ ಘಟನೆ ಇತ್ತೀಚೆಗೆ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಡೆದಿತ್ತು. ಆತ ಓಡಿ ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಸಜಾ ಕೈದಿಯನ್ನು ಬಿಜಾಪುರದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌ ಮಾಡಲಾಗಿತ್ತು. ಬಾಯಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅಪರಾಧಿಯನ್ನ ಕಿದ್ವಾಯಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತಂದಿದ್ದ ವೇಳೆ ಜೈಲು ಸಿಬ್ಬಂದಿ ಕಣ್ತಪ್ಪಿಸಿ ಪರಾರಿಯಾಗಿದ್ದ.