ಬೆಂಗಳೂರು, ಫೆ.17: ಕ್ರಿಕೆಟ್ ಟೂರ್ನಿ ಸಂದರ್ಭ ಶೌಚಾಲಯಕ್ಕೆ ಹೋದ ನಟಿ (Actress), ರಿಯಾಲಿಟಿ ಶೋ ಸ್ಪರ್ಧಿಯೊಬ್ಬರ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ (blackmail) ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಮಹಿಳಾ ಸೆಲೆಬ್ರೆಟಿ ಕ್ರಿಕೆಟ್ (Women’s Celebrity Cricket)ಟೂರ್ನಿಯಲ್ಲಿ ಈ ವಿಡಿಯೋ ರೆಕಾರ್ಡ್ ಮಾಡಲಾಗಿದೆ.
ನಟಿ ಬಾತ್‌ರೂಮ್‌ನಲ್ಲಿದ್ದಾಗ ಅಪರಿಚಿತನೊಬ್ಬ ಈ ವಿಡಿಯೋ ಮಾಡಿದ್ದಾನೆ. ಬಳಿಕ Swan.3704722 ಇನ್ಸ್ಟಾ ಅಕೌಂಟ್‌ನಿಂದ ಆಕೆಯ ಸ್ನೇಹಿತೆಯ ಅಕೌಂಟ್‌ಗೆ ನಾಲ್ಕಾರು ವೀಡಿಯೋಗಳನ್ನು ಕಳಿಸಿದ್ದ. ವಿಡಿಯೋ ಪಬ್ಲಿಕ್ ಮಾಡಬಾರದೆಂದರೆ ಇಂತಿಷ್ಟು ಹಣ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ. ವಿಡಿಯೋ ಕಾಲ್ ಮಾಡುವ ಮೂಲಕ ಮೂರ್ನಾಲ್ಕು ಬಾರಿ ಬೆದರಿಕೆ ಹಾಕಿದ್ದಾನೆ. ಹಣ ನೀಡದೇ ಹೋದರೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ಸಂಬಂಧ ಸಿಟಿ ಸೆನ್ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾಳೆ. ದೂರಿನ ಅನ್ವಯ ಆರೋಪಿ ವಿರುದ್ಧ ಐಟಿ ಆಕ್ಟ್ ಮತ್ತು ಬಿಎನ್‌ಎಸ್ 77, 351 ಮತ್ತು 308 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.
ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್‌ಗಾಗಿ ಹುಚ್ಚಾಟ, ಬಂಧನ
ಬಳ್ಳಾರಿ : ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದಕ್ಕೆ ಯುವಕನೊಬ್ಬನನ್ನು ಬಂಧಿಸಲಾಗಿದೆ. ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸರಿಂದ ವಿಶ್ವನಾಥ್ (29) ಎಂಬಾತ ಬಂಧಿಸಲ್ಪಟ್ಟಿದ್ದಾನೆ. ದುರ್ಗಮ್ಮ ದೇಗುಲ ಬಳಿ ರೈಲು ಸೇತುವೆ ಮೇಲೆ ನಿಂತು ಡ್ಯಾನ್ಸ್ ಮಾಡಿ, ರೀಲ್ಸ್ ಮಾಡುತ್ತಾ ವಿಶ್ವನಾಥ್ ಹುಚ್ಚಾಟ ಮೆರೆದಿದ್ದ.
ಸಾರ್ವಜನಿಕ ಸ್ಥಳದಲ್ಲಿ ಅಪಾಯಕಾರಿ ರೀತಿಯಲ್ಲಿ ರೀಲ್ಸ್ ಮಾಡಿದ್ದಕ್ಕಾಗಿ ಸಾರ್ವಜನಿಕರು ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಶ್ವನಾಥ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕ ವಿಶ್ವನಾಥ್ ಉತ್ತರ ಪ್ರದೇಶದವನು ಎಂದು ಗೊತ್ತಾಗಿದೆ.