ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಗೆದಷ್ಟು ಬಯಲಾಗ್ತಿದೆ ಪುಣೆ ಉದ್ಯಮಿ ಕೊಲೆ ಪ್ರಕರಣ; ಪ್ರತ್ಯಕ್ಷದರ್ಶಿಗೆ ಬೆದರಿಕೆ ಹಾಕಿದ್ದ ಸಿಯಾ ಪ್ರಿಯತಮ!

ಸುಮಾರು 3 ತಿಂಗಳ ಹಿಂದೆ (ಜೂನ್ 18) ಮಹಾರಾಷ್ಟ್ರದ ಪ್ರಸಿದ್ಧ ಲೋಹಗಢ ಕೋಟೆಯಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಉದ್ಯಮಿ ಕೇತನ್ ಅಗರ್‌ವಾಲ್ ಕೊಲೆ ಪ್ರಕರಣದ ಕುರಿತು ಸ್ಪೋಟಕ ಮಾಹಿತಿಯೊಂದು ಹೊರಬಿದಿದ್ದೆ. ಕೊಲೆ ಕೃತ್ಯವನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗೆ ಆರೋಪಿ ಚೇತನ್ ಚೌಧರಿ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ.

ಸಂಗ್ರಹ ಚಿತ್ರ

ಪುಣೆ: ಸುಮಾರು 3 ತಿಂಗಳ ಹಿಂದೆ (ಜೂನ್ 18) ಮಹಾರಾಷ್ಟ್ರದ ಪ್ರಸಿದ್ಧ ಲೋಹಗಢ ಕೋಟೆಯಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಉದ್ಯಮಿ ಕೇತನ್ ಅಗರ್‌ವಾಲ್ ಕೊಲೆ (Pune Murder Case) ಪ್ರಕರಣದ ಕುರಿತು ಸ್ಪೋಟಕ ಮಾಹಿತಿಯೊಂದು ಹೊರಬಿದಿದ್ದೆ. ಕೊಲೆ ಕೃತ್ಯವನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗೆ ಆರೋಪಿ ಚೇತನ್ ಚೌಧರಿ, ʼಕಂಡಿದ್ದನ್ನು ಯಾರಿಗಾದರೂ ಹೇಳಿದರೆ ನಿನ್ನನ್ನೂ ಇದೇ ಬೆಟ್ಟದ ತುದಿಯಿಂದ ಕೆಳಗೆ ತಳ್ಳಿ ಕೊಲ್ಲುತ್ತೇನೆ!” ಎಂದು ಜೀವ ಬೆದರಿಕೆ ಹಾಕಿದ್ದ ಎಂದು ತಿಳಿದುಬಂದಿದೆ. ಕೇತನ್ ಅಗರ್‌ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಗ್ರಾಮಾಂತರ ಪೊಲೀಸರು ಇತ್ತೀಚೆಗಷ್ಟೇ ನ್ಯಾಯಾಲಯಕ್ಕೆ 5,053ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಇದರಲ್ಲಿ ಪ್ರತ್ಯಕ್ಷದರ್ಶಿಯ ಆಘಾತಕಾರಿ ಹೇಳಿಕೆಯನ್ನು ದಾಖಲಿಸಲಾಗಿದೆ.

ಪ್ರತ್ಯಕ್ಷದರ್ಶಿ ಹೇಳಿಕೆ ಪ್ರಕಾರ, ಜೂನ್‌ 18 ರಂದು ಲೋಹಗಡ್‌ ಕೋಟೆಗೆ ಚಾರಣಕ್ಕೆಂದು ತೆರಳಿದ್ದಾಗ ಅವರು ಉದ್ಯಮಿ ಕೇತನ್‌ ಅಗರವಾಲ್‌ ಅವರ ಕೊಲೆಯನ್ನು ಕಣ್ಣಾರೆ ಕಂಡಿ್ದ್ದರು. ಪ್ರತ್ಯಕ್ಷದರ್ಶಿಯು ಚಾರಣದ ವೇಳೆ ಮೆಟ್ಟಿಲುಗಳನ್ನು ಹತ್ತುವಾಗ ಬಿಸಿಲಿನ ವಾತಾವರಣವಿದ್ದರೂ ಆರೋಪಿ ಚೇತನ್‌ ಚೌಧರಿ ಹೂಡಿ ಧರಿಸದ್ದನು ನೋಡಿ, ʼಇಷ್ಟು ಸೆಖೆ ಇದ್ದರು ನೀವು ಏಕೆ ಹೂಡಿ ಹಾಕಿಕೊಂಡಿದ್ದರಿ? ಎಂದು ಕೇಳಿದ್ದರು ಹೀಗಾಗಿ ಪ್ರತ್ಯಕ್ಷದರ್ಶಿಗೆ ಆರೋಪಿ ಚೇತನ್‌ ಚೌದರಿ ಮುಖ ನೆನಪಿನಲ್ಲಿ ಉಳಿದಿತ್ತು. ಪ್ರತ್ಯಕ್ಷದರ್ಶಿ ಘಟನೆ ನಡೆದ ವೇಳೆ ಸಮೀಪದಲ್ಲೇ ಇದ್ದರು, ಕೋಟೆಯ ಬಳಿ ಉದ್ಯಮಿ ಕೇತನ್ ಅಗರ್‌ವಾಲ್ ಭಾವಿ ಪತ್ನಿ ಸಿಯಾ ಗೋಯಲ್ ತನ್ನ ಪ್ರೇಮಿ ಚೇತನ್ ಚೌಧರಿ ಕಡೆಗೆ ಸೈನ್ ಮಾಡಿ ಸಂಕೇತ ನೀಡಿದಳು. ತಕ್ಷಣವೇ ಚೇತನ್ ಬಂದು ಕೇತನ್ ಕಾಲಿಗೆ ಒದ್ದು ಪ್ರಪಾತಕ್ಕೆ ತಳ್ಳಿದನು. ಈ ಭೀಕರ ಕೃತ್ಯವನ್ನು ಕಣ್ಣಾರೆ ನೋಡಿದ್ದ ಪ್ರತ್ಯಕ್ಷದರ್ಶಿಗೆ, ʼʼಕಂಡಿದ್ದನ್ನು ಯಾರಿಗಾದರೂ ಹೇಳಿದರೆ ನಿನ್ನನ್ನೂ ಇದೇ ಬೆಟ್ಟದ ತುದಿಯಿಂದ ಕೆಳಗೆ ತಳ್ಳಿ ಕೊಲ್ಲುತ್ತೇನೆʼʼ ಎಂದು ಚೇತನ್ ಜೀವ ಬೆದರಿಕೆ ಹಾಕಿದ್ದ.

ಆರೋಪಿಯ ಬೆದರಿಕೆಯಿಂದ ಭಯಭೀತಗೊಂಡಿದ್ದ ಪ್ರತ್ಯಕ್ಷದರ್ಶಿಯು ಘಟನೆ ನಡೆದ ಐದು ದಿನಗಳ ನಂತರ, ಮಾಧ್ಯಮಗಳಲ್ಲಿ ಬಂದ ಸುದ್ದಿಗಳನ್ನು ನೋಡಿ ಧೈರ್ಯ ಮಾಡಿ ಪೊಲೀಸರನ್ನು ಸಂಪರ್ಕಿಸಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಪ್ರಸ್ತುತ ಪೊಲೀಸರು ಈ ಪ್ರತ್ಯಕ್ಷದರ್ಶಿಯ ಹೇಳಿಕೆಯನ್ನು ಲಭ್ಯವಿರುವ ಇತರ ಸಾಕ್ಷ್ಯಾಧಾರಗಳೊಂದಿಗೆ ಪರಿಶೀಲಿಸುತ್ತಿದ್ದಾರೆ.

ಪೊಲೀಸರು ತನಿಖೆಯ ಭಾಗವಾಗಿ 12 TB ಗೂ ಹೆಚ್ಚಿನ ಡಿಜಿಟಲ್ ಸಾಕ್ಷ್ಯಗಳು, 6 ಮೊಬೈಲ್ ಫೋನ್‌ಗಳು, 9 ಪೆನ್‌ಡ್ರೈವ್‌ಗಳು ಹಾಗೂ ಕಾಲ್ ರೆಕಾರ್ಡ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಸೋಶಿಯಲ್ ಮೀಡಿಯಾ ಖಾತೆಗಳು ಹಾಗೂ ಡಿಲೀಟ್ ಮಾಡಲಾದ ಚಾಟ್‌ಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಕೆಲವು ಪ್ರಮುಖ ಡೇಟಾಗಳನ್ನು ರಿಕವರಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತನಿಖೆಯಲ್ಲಿ ಸಿಯಾ ಗೋಯಲ್ ಐಫೋನ್‌ನಿಂದ ಚಾಟ್‌ಗಳನ್ನು ಶಾಶ್ವತವಾಗಿ ಹೇಗೆ ಡಿಲೀಟ್ ಮಾಡುವುದು ಎಂದು ಗೂಗಲ್‌ನಲ್ಲಿ ರಿಸರ್ಚ್ ಮಾಡಿದ್ದಳು ಎಂಬುದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದ ಮತ್ತೊಂದು ಮುರಿದ ಮೊಬೈಲ್ ಫೋನ್‌ನಿಂದಲೂ ಪೊಲೀಸರು ಬ್ಯಾಕಪ್ ಡೇಟಾ ಮತ್ತು ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

Murder Case: ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್‌ ಎಸ್ಟೇಟ್‌ ಉದ್ಯಮಿಯ ಕೊಲೆ, ಕೊಲೆ ಹಿಂದೆ ಲವ್‌ ಸ್ಟೋರಿ

ಮೃತ ಕೇತನ್ ಮತ್ತು ಆರೋಪಿ ಸಿಯಾ ಅವರಿಗೆ ಬರುವ ನವೆಂಬರ್‌ನಲ್ಲಿ ಮದುವೆ ನಿಶ್ಚಯವಾಗಿತ್ತು. ಜೂನ್ 18 ರಂದು ಲೋಹಗಢ ಕೋಟೆಗೆ ಚಾರಣಕ್ಕೆ ತೆರಳಿದ್ದಾಗ ಈ ಕೊಲೆ ನಡೆದಿದೆ. ಬೆಳಿಗ್ಗೆ 10:45 ರ ಸುಮಾರಿಗೆ ಸಿಯಾ, ಕೆತನ್ ತಾಯಿಗೆ ಕರೆ ಮಾಡಿ ಕೇತನ್ ಕಾಲು ಜಾರಿ ಪ್ರಪಾತಕ್ಕೆ ಬಿದ್ದಿದ್ದಾನೆ ಎಂದು ನಂಬಿಸಿದ್ದಳು. ಪ್ರಾರಂಭದಲ್ಲಿ ಪೊಲೀಸರು ಇದನ್ನೊಂದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಸಿಯಾ ಹೇಳಿಕೆಗಳಿಂದ ಅನುಮಾನ ಬಂದ ಕಾರಣ ಪೊಲೀಸರು ನಂತರ ಮರು ತನಿಖೆ ಆರಂಭಿಸಿದ್ದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಯಾ ಗೋಯಲ್, ಆಕೆಯ ಪ್ರೇಮಿ ಚೇತನ್ ಚೌಧರಿ ಹಾಗೂ ಕೊಲೆ ಯೋಜನೆಗೆ ನೆರವಾದ ಚೇತನ್‌ನ ಸ್ನೇಹಿತ ರಿತೇಶ್ ಹಂಗೆ ಎಂಬ ಮೂವರನ್ನು ಬಂಧಿಸಿದ್ದಾರೆ. ತಾಂತ್ರಿಕ ಆಧಾರಗಳು, ವಾಟ್ಸಾಪ್ ಚಾಟ್‌ಗಳು ಮತ್ತು ಪ್ರತ್ಯಕ್ಷದರ್ಶಿಯ ಹೇಳಿಕೆಗಳನ್ನು ಆಧರಿಸಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Vishakha Bhat Heggar

View all posts by this author