ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಂಜಾಬ್ ಪೊಲೀಸ್ ಅಧಿಕಾರಿ ಹತ್ಯೆ: ಪಾಕಿಸ್ತಾನ ಮೂಲದ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದ ಆರೋಪಿಯ ಎನ್‌ಕೌಂಟರ್‌

Punjab Cop Murder case: ಪಂಜಾಬ್ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ ಆರೋಪಿಯನ್ನು ಎನ್‌ಕೌಂಟರ್‌ ಮಾಡಲಾಗಿದ್ದು, ಆತ ಸಾವನ್ನಪ್ಪಿದ್ದಾನೆ. ತರ್ನ್ ತರನ್ ಜಿಲ್ಲೆಯ ನಿವಾಸಿ ಹರ್ಜಿತ್ ಸಿಂಗ್ ಅವರನ್ನು ಶುಕ್ರವಾರ ಬೈಕ್‌ನಲ್ಲಿದ್ದ ಇಬ್ಬರು ವ್ಯಕ್ತಿಗಳು ಅತ್ಯಂತ ಸಮೀಪದಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇವರು ಪಾಕಿಸ್ತಾನ ಮೂಲದ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.

ಸಂಗ್ರಹ ಚಿತ್ರ

ಪಂಜಾಬ್: ಪೊಲೀಸ್ ಅಧಿಕಾರಿಯನ್ನು ಹತ್ಯೆಗೈದ (Punjab Cop Murder case) ಪಾಕಿಸ್ತಾನ ಮೂಲದ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾದ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್‌ (encounter) ಮಾಡಿದ್ದು ಆತ ಸಾವನ್ನಪ್ಪಿದ್ದಾನೆ. ಪಂಜಾಬ್ (Punjab ) ನ ತರ್ನ್ ತರನ್ ಜಿಲ್ಲೆಯ ನಿವಾಸಿ, ಪೊಲೀಸ್ ಅಧಿಕಾರಿ ಹರ್ಜಿತ್ ಸಿಂಗ್ ಅವರನ್ನು ಶುಕ್ರವಾರ ಬೈಕ್‌ನಲ್ಲಿದ್ದ ಇಬ್ಬರು ವ್ಯಕ್ತಿಗಳು ಅತ್ಯಂತ ಸಮೀಪದಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಪ್ರಕರಣದ ಆರೋಪಿಯಲ್ಲಿ ಒಬ್ಬ ಇದೀಗ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾನೆ.

ಪೊಲೀಸ್ ಅಧಿಕಾರಿಯ ಹತ್ಯೆ ಆರೋಪಿಯು ಪಾಕಿಸ್ತಾನ ಮೂಲದ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ SIR: ಮುಖ್ಯಮಂತ್ರಿ ರೇಖಾ ಗುಪ್ತಾ, ಕೇಜ್ರಿವಾಲ್‌ಗೆ ಚುನಾವಣಾ ಆಯೋಗದಿಂದ ನೋಟೀಸ್‌

ಪಂಜಾಬ್ ಪೊಲೀಸ್‌ನ ಸಹಾಯಕ ಸಬ್-ಇನ್ಸ್‌ಪೆಕ್ಟರ್ ಆಗಿದ್ದ ಹರ್ಜಿತ್ ಸಿಂಗ್ ಅವರ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳ ಪೈಕಿ ಒಬ್ಬನಾದ ಅಮೃತಸರದ ಮುಲ್‌ಚಕ್ ನಿವಾಸಿ ದೀಪಕ್ ಸಿಂಗ್ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾನೆ. ದೀಪಕ್ ಸಿಂಗ್ ಪಾಕಿಸ್ತಾನ ಮೂಲದ ಉಗ್ರಗಾಮಿಯೊಬ್ಬನೊಂದಿಗೆ ಸಂಪರ್ಕ ಹೊಂದಿದ್ದ ಎಂದು ಆರೋಪಿಸಲಾಗಿದೆ. ಈ ಕುರಿತು ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ಹರ್ಜಿತ್ ಸಿಂಗ್ ಮತ್ತು ಅವರ ಸಹಾಯಕನನ್ನು ಶುಕ್ರವಾರ ಬೈಕ್ ನಲ್ಲಿ ಬೆನ್ನಟ್ಟಿದ ದೀಪಕ್ ಸಿಂಗ್ ಹಾಗೂ ಇನ್ನೋರ್ವ ಹರ್ಜಿತ್ ಸಿಂಗ್ ಅವರನ್ನು ಹತ್ಯೆ ಮಾಡಿದ್ದರು.

ಸಹಾಯಕನೊಂದಿಗೆ ಹರ್ಜಿತ್ ಸಿಂಗ್ ಅವರು ಶುಕ್ರವಾರ ಪಿಸಿಆರ್ ಕರ್ತವ್ಯದಲ್ಲಿದ್ದಾಗ ಮಧ್ಯರಾತ್ರಿಯ ಸುಮಾರಿಗೆ ಬೈಕ್ ನಲ್ಲಿ ಬೆನ್ನಟ್ಟಿದ ದೀಪಕ್ ಸಿಂಗ್ ಭಗತಾನ್‌ವಾಲಾ ಧಾನ್ಯ ಮಾರುಕಟ್ಟೆಯಲ್ಲಿ ಅತ್ಯಂತ ಸಮೀಪದಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದರು. ದೀಪಕ್ ಸಿಂಗ್ ಜೊತೆ ಇನ್ನೋರ್ವ ಕೂಡ ಇದ್ದ ಎನ್ನಲಾಗಿದೆ.

ಹರ್ಜಿತ್ ಸಿಂಗ್ ಮೇಲೆ ದಾಳಿಯಾದ ತಕ್ಷಣ ಆರೋಪಿಗಳನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳು, ತಾಂತ್ರಿಕ ಮಾಹಿತಿ, ಟವರ್-ಡಂಪ್ ವಿಶ್ಲೇಷಣೆ, ಸ್ಥಳೀಯ ಗುಪ್ತಚರ ಮಾಹಿತಿ ಮತ್ತು ಮಾನವ ಮೂಲಗಳ ನೆರವು ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ 9.45ರ ಸುಮಾರಿಗೆ ಪೊಲೀಸ್ ತಪಾಸಣಾ ಕೇಂದ್ರವೊಂದರ ಬಳಿ ಸ್ಕೂಟರ್‌ನಲ್ಲಿದ್ದ ಇಬ್ಬರು ಪೊಲೀಸರ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿದರು. ಇದರಿಂದಾಗಿ ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿದಾಳಿ ಮಾಡಬೇಕಾಯಿತು. ಈ ಸಂದರ್ಭದಲ್ಲಿ ಗುಂಡೇಟಿಗೆ ಒಳಗಾದ ದೀಪಕ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಇನ್ನೋರ್ವ ಆರೋಪಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದು, ಆತನನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳು ಪ್ರಯತ್ನ ಮುಂದುವರಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಂಸಿಡಿ ವಿರುದ್ಧದ ಅಸಮಾಧಾನದಿಂದ Gen Z ಅಲೆಯವರೆಗೆ: ದೆಹಲಿ ವಿವಿ ಚುನಾವಣೆಯಲ್ಲಿ ಎಬಿವಿಪಿಯ ಅಭೂತಪೂರ್ವ ಗೆಲುವಿನ ಹಿಂದಿನ ರಾಜಕೀಯ

ಆರೋಪಿಗಳ ಬಳಿ ಇದ್ದ 30 ಬೋರ್ ಪಿಸ್ತೂಲ್, ಎರಡು ಮ್ಯಾಗಜೀನ್‌ಗಳು, ಎಂಟು ಜೀವಂತ ಗುಂಡುಗಳು, ಮೊಬೈಲ್ ಫೋನ್ ಮತ್ತು ಹೋಂಡಾ ಆಕ್ಟಿವಾ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಅಧಿಕಾರಿ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಮೂಲದ ಉಗ್ರನೊಬ್ಬ ಆರೋಪಿಗೆ ಹಣದ ಆಮಿಷವೊಡ್ಡಿದ್ದ ಎನ್ನುವ ಶಂಕೆ ವ್ಯಕ್ತವಾಗಿರುವುದರಿಂದ ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪಂಜಾಬ್‌ನ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author