ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೃತ್ಯಕ್ಕೆ ಬಳಸಿದ 5 ಗೂಡ್ಸ್ ವಾಹನ ಹಾಗೂ ನಾಲ್ಕು ಜನ ಆರೋಪಿಗಳ ವಶಕ್ಕೆ ಪಡೆದ ರಾಮದುರ್ಗ ಪೊಲೀಸರು

ಗೋಹತ್ಯೆ ನಿಷೇಧ ಕಾಯ್ದೆ ಗಾಳಿಗೆ ತೂರಿ ಹೋಗಿದ್ದು, ಅಕ್ರಮ ಕಸಾಯಿಖಾನೆಯೊಂದರ ಮೇಲೆ ಹಿಂದೂ ಕಾರ್ಯಕರ್ತರು ಮತ್ತು ಸಾರ್ವಜನಿಕರು ಬುಧವಾರ ದಿಢೀರ್ ದಾಳಿ ನಡೆಸಿದ್ದಾರೆ. ಕಾನೂನು ಬಾಹಿರವಾಗಿ ಜಿವಂತ ಹಸುಗಳನ್ನು ಹಾಗೂ ಎತ್ತುಗಳನ್ನು ಕಟಾವು ಮಾಡುತ್ತಿದ್ದ ವೇಳೆ ಪೊಲೀಸರ ಸಹಾಯದಿಂದ ಮಾಲೀಕನನ್ನು ವಶಕ್ಕೆ ಪಡೆಯಲಾಗಿದ್ದು, ಆತನನ್ನು ಕಾನೂನು ಕ್ರಮಕ್ಕಾಗಿ ಪೊಲೀಸರಿಗೆ ಒಪ್ಪಿಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

ರಾಮದುರ್ಗ: ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಅದನ್ನು ಲೆಕ್ಕಿಸದೆ ಗುಟ್ಟಾಗಿ ಪಟ್ಟಣದ ಹೊರ ವಲಯದಲ್ಲಿ ಅಕ್ರಮ ಕಸಾಯಿಖಾನೆಯನ್ನು ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಹಿಂದೂ ಕಾರ್ಯಕರ್ತರು ಮೇಲೆ ದಾಳಿ ನಡೆಸಿ, ಕಸಾಯಿಖಾನೆ ಮಾಲೀಕರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿಗಳಾದ ಪಟ್ಟಣದ ರಿಯಾನ್ ಬೇಪಾರಿ (21), ಅರ್ಷದ್ ಬೇಪಾರಿ (24), ಅಜನ್ ಬೇಪಾರಿ (27) ಹಾಗೂ ಯಾಸಿನ್ ಬೇಪಾರಿ (65) ಹಾಗೂ ಕೃತ್ಯಕ್ಕೆ ಬಳಸಿದ್ದ 5 ಗೂಡ್ಸ್ ವಾಹನ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Crime News: ಅನುಕಂಪದ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ತಾಯಿಯನ್ನೇ ಕೊಂದ ಪಾಪಿ ಮಗಳು; ಸಹೋದರನ ಸಣ್ಣ ಅನುಮಾನದಿಂದ ಬೆಳಕಿಗೆ ಬಂತು ಭಯಾನಕ ಸಂಚು

ಗೋಹತ್ಯೆ ನಿಷೇಧ ಕಾಯ್ದೆ ಗಾಳಿಗೆ ತೂರಿ ಹೋಗಿದ್ದು, ಅಕ್ರಮ ಕಸಾಯಿಖಾನೆಯೊಂದರ ಮೇಲೆ ಹಿಂದೂ ಕಾರ್ಯಕರ್ತರು ಮತ್ತು ಸಾರ್ವಜನಿಕರು ಬುಧವಾರ ದಿಢೀರ್ ದಾಳಿ ನಡೆಸಿದ್ದಾರೆ. ಕಾನೂನು ಬಾಹಿರವಾಗಿ ಜಿವಂತ ಹಸುಗಳನ್ನು ಹಾಗೂ ಎತ್ತುಗಳನ್ನು ಕಟಾವು ಮಾಡುತ್ತಿದ್ದ ವೇಳೆ ಪೊಲೀಸರ ಸಹಾಯದಿಂದ ಮಾಲೀಕನನ್ನು ವಶಕ್ಕೆ ಪಡೆಯಲಾಗಿದ್ದು, ಆತನನ್ನು ಕಾನೂನು ಕ್ರಮಕ್ಕಾಗಿ ಪೊಲೀಸರಿಗೆ ಒಪ್ಪಿಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾನೂನು ಲೆಕ್ಕಿಸದೇ ಅಕ್ರಮ ಕಸಾಯಿಖಾನೆ ಮೂಲಕ ರಾಜ್ಯದಾದ್ಯಂತ ಹಾಗೂ ನೆರೆಯ ಆಂದ್ರ ಪ್ರದೇಶಕ್ಕೆ ಇಲ್ಲಿಂದ ಗೋಮಾಂಸ ರಪ್ತು ಮಾಡಲಾಗುತ್ತಿದೆ ಎಂದು ಆರೋಪಿಸಿದ ಹಿಂದೂ ಕಾರ್ಯಕರ್ತರು ಇನ್ನು ಮುಂದೆಯೂ ಈ ರೀತಿಯ ಕಾನೂನು ಬಾಹಿರ ಕತ್ಯಗಳು ಮುಂದುವರಿದರೆ, ಹಿಂದೂ ಸಂಘಟನೆಗಳಿಂದ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.

ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಸವಿತಾ ಮುನ್ಯಾಳ ತಣಿಕೆ ನಡೆಸಿದ್ದಾರೆ.