ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಎಂಟು ವರ್ಷಗಳಿಂದ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ ಪತ್ನಿಯನ್ನು ಕೊಂದ ಪತಿ

ಕಳೆದ ಎಂಟು ವರ್ಷಗಳಿಂದ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ ಪತ್ನಿಯನ್ನು ಪತಿ ಕೊಂದು ಹಾಕಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. 40 ವರ್ಷದ ಮಹಿಳೆಯನ್ನು ಕೊಂದ ಆರೋಪದಲ್ಲಿ ವ್ಯಕ್ತಿಯನ್ನು ಬಂಧಿಸಿರುವುದಾಗಿ ಉಪ ಪೊಲೀಸ್ ಆಯುಕ್ತ ಶ್ರೀಕೃಷ್ಣ ಲಾಲ್‌ಚಂದಾನಿ ಅವರು ತಿಳಿಸಿದ್ದಾರೆ.

ಲೈಂಗಿಕ ಕ್ರಿಯೆಗೆ ನಿರಾಕರಣೆ ಮಾಡಿದ ಪತ್ನಿಯ ಕೊಲೆ

ಸಾಂದರ್ಭಿಕ ಚಿತ್ರ -

ಇಂದೋರ್: ದೈಹಿಕ ಸಂಬಂಧ (physical relation) ನಡೆಸಲು ನಿರಂತರವಾಗಿ ಎಂಟು ವರ್ಷಗಳಲ್ಲಿ ಪತ್ನಿಯಿಂದ ನಿರಾಕರಣೆ ಕೇಳಿದ ಪತಿ ಕೋಪಗೊಂಡು ಆಕೆಯನ್ನು ಕೊಂದು (Murder case) ಹಾಕಿರುವ ಘಟನೆ ಮಧ್ಯಪ್ರದೇಶದ (Madhya Pradesh) ಇಂದೋರ್ (Indore) ನಲ್ಲಿ ನಡೆದಿದೆ. ಜನವರಿ 9 ರಂದು ಏರೋಡ್ರೋಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ 40 ವರ್ಷದ ಮಹಿಳೆಯನ್ನು ಕೊಂದು ಹಾಕಿದ್ದಾನೆ. ಆರೋಪಿಯನ್ನುಭಾನುವಾರ ಬಂಧಿಸಿರುವುದಾಗಿ ಉಪ ಪೊಲೀಸ್ ಆಯುಕ್ತ ಶ್ರೀಕೃಷ್ಣ ಲಾಲ್‌ಚಂದಾನಿ ಅವರು ಸೋಮವಾರ ತಿಳಿಸಿದ್ದು, ಈ ಕುರಿತು ಹೆಚ್ಚಿನ ವಿಚಾರಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ಮೆಕ್ಯಾನಿಕ್ ಆಗಿರುವ ಆರೋಪಿಯು ಪತ್ನಿಯನ್ನು ಕೊಂದು ಬಳಿಕ ಆಕೆಯ ಶವವನ್ನು ಸರ್ಕಾರಿ ಮಹಾರಾಜ ಯಶವಂತರಾವ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಾಖಲಿಸಿದ್ದಾನೆ. ಮಡದಿ ಹಠಾತ್ ರಕ್ತದೊತ್ತಡ ಹೆಚ್ಚಳದಿಂದಾಗಿ ಮನೆಯಲ್ಲಿ ಬಿದ್ದು ತಲೆಗೆ ಬಿದ್ದು ಗಾಯವಾಗಿದೆ ಎಂದು ಹೇಳಿದ್ದಾನೆ. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯ ಕತ್ತು ಹಿಸುಕಿರುವುದು ದೃಢಪಟ್ಟಿದೆ.

ಧಾರವಾಡದಲ್ಲಿ ಕಿಡ್ನ್ಯಾಪ್‌ ಆಗಿದ್ದ ಇಬ್ಬರು ಮಕ್ಕಳು ದಾಂಡೇಲಿಯಲ್ಲಿ ಪತ್ತೆ; ಬೈಕ್​​ನಲ್ಲೇ ಕೂರಿಸಿಕೊಂಡು ಪರಾರಿಯಾಗಿದ್ದ ಕಳ್ಳ!

ಬಳಿಕ ಪೊಲೀಸರು ವಿಚಾರಣೆ ನಡೆಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಕಳೆದ ಎಂಟು ವರ್ಷಗಳಿಂದ ಆಕೆ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡು ತಾನು ಆಕೆಯನ್ನು ಕೊಲೆ ಮಾಡಿರುವುದಾಗಿ ಆತ ಹೇಳಿದ್ದಾನೆ ಎಂದು ಅಧಿಕಾರಿ ಹೇಳಿದರು.

ಆರೋಪಿಯನ್ನು ಭಾನುವಾರ ವಶಕ್ಕೆ ಪಡೆಯಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪತ್ನಿಯೊಂದಿಗೆ ಜಗಳದ ಬಳಿಕ ಪತಿ ಆತ್ಮಹತ್ಯೆ

ಪತ್ನಿಯೊಂದಿಗೆ ಜಗಳವಾಡಿದ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದದ ಬಂದಾದಲ್ಲಿ ನಡೆದಿದೆ. ಶಾಂತಿನಗರ ಪ್ರದೇಶದ ನಿವಾಸಿ ಶುಭಂ ಮೃತ ವ್ಯಕ್ತಿ. ಹಿಂದಿನ ದಿನ ಕೆಲಸ ಮುಗಿಸಿ ಬಂದಿದ್ದ ಶುಭಂ ಪತ್ನಿಗೆ ಮೊಟ್ಟೆ ಕರಿ ಮಾಡಲು ಹೇಳಿದಾಗ ಆಕೆ ನಿರಾಕರಿಸಿದ್ದಾಳೆ. ಇದರಿಂದ ಶುಭಂ ಹೊರಗಿನಿಂದ ಆಹಾರ ತಂದಿದ್ದನು. ಆದರೆ ಅದನ್ನು ತಿನ್ನಲು ಪತ್ನಿ ನಿರಾಕರಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ಸಾಕಷ್ಟು ಜಗಳವಾಗಿದೆ. ಅತ್ತೆ ಅವರಿಬ್ಬರ ಮಧ್ಯೆ ಪ್ರವೇಶಿಸಿ ಶಾಂತಗೊಳಿಸಲು ಪ್ರಯತ್ನಿಸಿದರು. ಪತಿ ಪತ್ನಿಯ ಜಗಳ ಬೀದಿಯಲ್ಲಿದ್ದವರಿಗೆಲ್ಲ ಗೊತ್ತಾಗಿತ್ತು. ಇದರಿಂದ ನೊಂದ ಶುಭಂ ತುಂಬಾ ಬೇಸರ ಮಾಡಿಕೊಂಡಿದ್ದ ಎನ್ನಲಾಗಿದೆ. ಬಳಿಕ ಇದೇ ಬೇಸರದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಸೈನಿಕನ ಅಂತಿಮ ದರ್ಶನಕ್ಕೆ ಆಸ್ಪತ್ರೆಯಿಂದ ಆಗ ತಾನೇ ಜನಿಸಿದ ಮಗುವಿನೊಂದಿಗೆ ಸ್ಟ್ರೆಚರ್‌ನಲ್ಲಿ ಬಂದ ಪತ್ನಿ

ಶುಭಂ ತಾಯಿ ಮುನ್ನಿ ದೇವಿಯು ತಮ್ಮ ಸೊಸೆ ಆಗಾಗ ಜಗಳಗಳನ್ನು ಪ್ರಚೋದಿಸುತ್ತಿದ್ದಳು ಎಂದು ಆರೋಪಿಸಿದ್ದಾರೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಇವರ ಮದುವೆಯಾಗಿದ್ದು, ಒಂದು ವರ್ಷ ತುಂಬುವುದರೊಳಗೆ ಈ ದುರಂತ ಸಂಭವಿಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಿಟಿ ಕೊಟ್ವಾಲಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.