ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಸ್ಪತ್ರೆಯ ಮುಖ್ಯ ದ್ವಾರಕ್ಕೆ ಬೀಗ; ಹಿಂಬದಿಯಿಂದ ಬಾಗಿಲು ತೆರೆದು ಚಿಕಿತ್ಸೆ: ಉತ್ತರ ಪ್ರದೇಶದಲ್ಲಿ ಹೆರಿಗೆ ವೇಳೆ ತಾಯಿ, ಮಗು ಸಾವು

Sealed Hospital: ಆರೋಗ್ಯ ಇಲಾಖೆಯಿಂದ ಸೀಲ್ ಮಾಡಲಾದ ಆಸ್ಪತ್ರೆಯೊಂದು ಹಿಂಬದಿಯ ಬಾಗಿಲು ತೆರೆದು ಕಾರ್ಯಾಚರಣೆ ನಡೆಸುತ್ತಿದ್ದದ್ದು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ಹೆರಿಗೆಗಾಗಿ ಬಂದ ಮಹಿಳೆ ಮತ್ತು ನವಜಾತ ಶಿಶು ಸಾವನ್ನಪ್ಪಿದೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಮತ್ತೆ ಆಸ್ಪತ್ರೆಯನ್ನು ಸೀಲ್ ಮಾಡಿದ್ದಾರೆ.

ಸಂಗ್ರಹ ಚಿತ್ರ

ಉತ್ತರ ಪ್ರದೇಶ: ವರ್ಷದ ಹಿಂದೆ ಸೀಲ್ ಮಾಡಲಾಗಿದ್ದ ಆಸ್ಪತ್ರೆಯಲ್ಲಿ (Sealed hospital) ಹೆರಿಗೆಗೆ ದಾಖಲಾದ ಮಹಿಳೆ ಮತ್ತು ನವಜಾತ ಶಿಶು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (uttar pradesh) ಮೌನಲ್ಲಿ ನಡೆದಿದೆ. ಖಾಸಗಿ ಆಸ್ಪತ್ರೆಯೊಂದರ (UP hospital) ಮುಖ್ಯ ದ್ವಾರಕ್ಕೆ ಬೀಗ ಹಾಕಿದ್ದರೂ ಪರ್ಯಾಯ ದ್ವಾರದ ಮೂಲಕ ಆಸ್ಪತ್ರೆಯನ್ನು ನಡೆಸಲಾಗುತ್ತಿತ್ತು. ಪ್ರಕರಣ ಬೆಳಕಿಗೆ ಬಂದ ಬಳಿಕ ಅದನ್ನು ಮತ್ತೆ ಸೀಲ್ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸೆಪ್ಟೆಂಬರ್ 8ರಂದು ರತನ್‌ಪುರದ ಇಂದ್ರಜಿತ್ ಆಸ್ಪತ್ರೆಯಲ್ಲಿ ನಡೆದಿದೆ. ಸರಿತಾ ಮತ್ತು ಅವರ ನವಜಾತ ಶಿಶು ಹೆರಿಗೆ ವೇಳೆ ಸಾವನ್ನಪ್ಪಿದೆ.

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ತಾರ್ಗೌಲಿ ಗ್ರಾಮದ ಅಜಿತ್ ರಾಜ್‌ಭರ್ ಎಂಬವರು ತಮ್ಮ ಪತ್ನಿ ಸರಿತಾ ಅವರನ್ನು ಸೆಪ್ಟೆಂಬರ್ 8 ರಂದು ರತನ್‌ಪುರದ ಇಂದ್ರಜಿತ್ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಿಸಿದ್ದರು. ಆದರೆ ತಮ್ಮ ಪತ್ನಿ ಮತ್ತು ಮಗು ಹೆರಿಗೆ ವೇಳೆ ಸಾವನ್ನಪ್ಪಿರುವುದಾಗಿ ಮುಖ್ಯ ವೈದ್ಯಾಧಿಕಾರಿಗೆ ದೂರು ನೀಡಿದ್ದಾರೆ.

ನೆಲಮಂಗಲದಲ್ಲಿ 3 ವರ್ಷದ ಬಾಲಕಿ ಅನುಮಾನಾಸ್ಪದ ಸಾವು; ಮಲ ತಾಯಿಯಿಂದ ಕೊಲೆ ಶಂಕೆ!

ರತನ್‌ಪುರದ ಇಂದ್ರಜಿತ್ ಆಸ್ಪತ್ರೆಯನ್ನು ಕಳೆದ ವರ್ಷ ಆಡಳಿತ ಮತ್ತು ಆರೋಗ್ಯ ಇಲಾಖೆಯಿಂದ ಸೀಲ್ ಮಾಡಿತ್ತು. ಆದರೆ ಆಸ್ಪತ್ರೆಯ ಹಿಂಬದಿ ಬಾಗಿಲು ತೆರೆದು ಜನರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆಶಾ ಕಾರ್ಯಕರ್ತರ ಸೂಚನೆ ಮೇರೆಗೆ ಸರಿತಾ ಅವರನ್ನು ಹೆರಿಗಾಗಿ ಇದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಲ್ಲಿ ಅವರು ಮತ್ತು ನವಜಾತ ಶಿಶು ಮೃತಪಟ್ಟಿದೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಅದನ್ನು ಮತ್ತೆ ಸೀಲ್ ಮಾಡಲಾಗಿದೆ.

ಆಶಾ ಕಾರ್ಯಕರ್ತೆಯೊಬ್ಬರು ಸರಿತಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಅಜಿತ್ ರಾಜ್‌ಭರ್ ಅವರಿಗೆ ಸೂಚಿಸಿದ್ದು, ತಕ್ಷಣವೇ ಅವರನ್ನು ಇಂದ್ರಜಿತ್ ಆಸ್ಪತ್ರೆಗೆ ಕರೆ ತಂದು ದಾಖಲಿಸಲಾಗಿದೆ. ಸರಿತಾ ಅವರನ್ನು ಪರೀಕ್ಷಿಸಿದ ಹಿಮಾಂಶು ಯಾದವ್ ಎಂಬ ವೈದ್ಯರು ಅವರ , ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದರು. ಹೆರಿಗೆ ಬಳಿಕ ನವಜಾತ ಶಿಶು ಮೃತಪಟ್ಟಿದ್ದು, ಸರಿತಾ ಅವರಿಗೆ ತೀವ್ರ ರಕ್ತಸ್ರಾವ ಪ್ರಾರಂಭವಾಗಿದೆ. ಬಳಿಕ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ಮುಂದುವರಿಸಲು ನಿರಾಕರಿಸಿದರು. ಬಳಿಕ ರಾಜ್‌ಭರ್ ಅವರು ಸರಿತಾ ಅವರನ್ನು ಮೌನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದ, ಅಲ್ಲಿಂದ ಮತ್ತೆ ವಾರಣಾಸಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಲ್ಲಿನ ವೈದ್ಯರು ಅವರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ ಎಂದು ಅಜಿತ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಮನೆಯಲ್ಲೇ ಮಾವನ ಭೀಕರ ಕೊಲೆ; ಪಾರ್ಟಿ ಮೂಡ್‌ನಲ್ಲಿ ಸೊಸೆ, 6 ಲಕ್ಷ ಸುಪಾರಿ ಕೊಟ್ಟವಳು ಸಿಕ್ಕಿ ಬಿದ್ದಿದ್ದೇಗೆ?

ಜಿಲ್ಲಾ ಮ್ಯಾಜಿಸ್ಟ್ರೇಟ್ ಸೂಚನೆಯ ಮೇರೆಗೆ ಇಂದ್ರಜಿತ್ ಆಸ್ಪತ್ರೆಯನ್ನು ವರ್ಷದ ಹಿಂದೆ ಸೀಲ್ ಮಾಡಲಾಗಿತ್ತು. ಮುಖ್ಯ ದ್ವಾರದ ಬೀಗ ಹಾಗೆಯೇ ಇತ್ತು. ಆದರೆ ಹಿಂಭಾಗದ ಬಾಗಿಲು ತೆರೆದು ಆಸ್ಪತ್ರೆಯನ್ನು ನಡೆಸಲಾಗುತ್ತಿತ್ತು. ಈ ಘಟನೆ ಬಗ್ಗೆ ಮಾಹಿತಿ ಪಡೆದ ಅನಂತರ ಆರೋಗ್ಯ ಇಲಾಖೆಯು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರ ಸಹಯೋಗದೊಂದಿಗೆ ಆಸ್ಪತ್ರೆಯನ್ನು ಮತ್ತೆ ಸೀಲ್ ಮಾಡಲಾಗಿದೆ. ಆಸ್ಪತ್ರೆಯ ನಿರ್ವಾಹಕರ ವಿರುದ್ಧ ದೂರು ದಾಖಲಿಸಲಾಗಿದ್ದು, ಆರೋಗ್ಯ ಇಲಾಖೆ ಆಡಳಿತ ಮಂಡಳಿಯು ತನಿಖೆ ನಡೆಸುತ್ತಿದೆ ಎಂದು ಮುಖ್ಯ ವೈದ್ಯಾಧಿಕಾರಿ ಪಂಕಜ್ ರೈ ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author