ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆನ್‌ಲೈನ್‌ ಗೇಮ್‌ ಆಡಬೇಡ ಎಂದಿದ್ದಕ್ಕೆ ಅಪ್ಪ, ಅಕ್ಕನನ್ನೇ ಕೊಂದ ದ್ವೀತಿಯ ಪಿಯುಸಿ ವಿದ್ಯಾರ್ಥಿ

ವಿದ್ಯಾರ್ಥಿಯೊಬ್ಬನಿಗೆ ಮೊಬೈಲ್ ನಲ್ಲಿ ಆನ್ ಲೈನ್ ಗೇಮ್ ಆಡದಂತೆ ಬುದ್ದಿವಾದ ಹೇಳಿದ್ದಕ್ಕೆ ತಂದೆ ಹಾಗೂ ಅಕ್ಕನನ್ನೇ ಕೊಲೆ ಮಾಡಿದ ಘಟನೆ ಅಯೋಧ್ಯೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಅಯೋಧ್ಯೆ ಗ್ರಾಮದ ಸರಕಾರಿ ಶಾಲೆಯ ಸಮೀಪದ ಮನೆಯೊಂದರಲ್ಲಿ ಘಟನೆ ಜರುಗಿದೆ.

ಸಂಗ್ರಹ ಚಿತ್ರ

ಗಂಗಾವತಿ: ವಿದ್ಯಾರ್ಥಿಯೊಬ್ಬನಿಗೆ ಮೊಬೈಲ್ ನಲ್ಲಿ ಆನ್ ಲೈನ್ ಗೇಮ್ ಆಡದಂತೆ ಬುದ್ದಿವಾದ ಹೇಳಿದ್ದಕ್ಕೆ ತಂದೆ ಹಾಗೂ ಅಕ್ಕನನ್ನೇ ಕೊಲೆ ಮಾಡಿದ ಘಟನೆ ಅಯೋಧ್ಯೆ (Murder Case)ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಅಯೋಧ್ಯೆ ಗ್ರಾಮದ ಸರಕಾರಿ ಶಾಲೆಯ ಸಮೀಪದ ಮನೆಯೊಂದರಲ್ಲಿ ಘಟನೆ ಜರುಗಿದ್ದು ಗಂಗಾವತಿ ವಡ್ಡರಹಟ್ಟಿಯ ವಿದ್ಯಾನಿಕೇತನ ಕಾಲೇಜಿ ದ್ವಿತೀಯ ಪಿಯುಸಿ ಓದುತ್ತಿರುವ ಸಾಯಿ ನಾಯ್ಡು (18) ಯಾವಾಗಲೂ ಮೊಬೈಲ್ ನಲ್ಲಿ ಆನ್ ಲೈನ್ ಗೇಮ್ ಆಡುತ್ತಿದ್ದ ಎಂದು ತಿಳಿದು ಬಂದಿದೆ.

ಶನಿವಾರ ರಾತ್ರಿ ಅಕ್ಕ ಪ್ರಗತಿ (20) ಆನ್‌ಲೈನ್‌ ಗೇಮಿಂಗ್‌ ಆಡದಂತೆ ಬುದ್ಧಿ ಮಾತು ಹೇಳಿದ್ದಾರೆ. ಇಬ್ಬರ ಮಧ್ಯೆ ತೀವ್ರ ಜಗಳವಾಗಿದ್ದು ಸಾಯಿ ನಾಯ್ಡು ಚಾಕುವಿನಿಂದ ಅಕ್ಕನಿಗೆ ಇರಿದಿದ್ದಾನೆ. ಜಗಳ ಬಿಡಿಸಲು ಬಂದ ತಂದೆ ಯಂಕಣ್ಣ ನಾಯ್ಡು (48) ತಾಯಿ ಸೌಜನ್ಯ (40) ಇವ ಮೇಲೂ ಸಾಯಿ ನಾಯ್ಡು ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ದಾಖಲ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಯಂಕಣ್ಣ (48) ಮೃತ ಪಟ್ಟಿದ್ದು ತಾಯಿ ಸೌಜನ್ಯ ಹಾಗೂ ಆರೋಪಿ ಸಾಯಿ ನಾಯ್ಡುಗೆ ಬಳ್ಳಾರಿ ವಿಮ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳಕ್ಕೆ ಗಂಗಾವತಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಗನೇ ಕೊಲೆ ಮಾಡಿರುವುದಾಗಿ ಮೃತ ವೆಂಕಟನಾಯ್ಡು ತಂದೆ ತಾತಾರಾವ್ ದೂರು ನೀಡಿದ್ದಾರೆ. ವೆಂಕಟ ನಾಯ್ಡು ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ 10.30 ಗಂಟೆಯ ವೇಳೆಗೆ ಗಲಾಟೆ ಕೇಳಿ ಬಂದಿದೆ. ಬಾಗಿಲು ಒಡೆದು ನೋಡಿದಾಗ ನಾಲ್ಕು ಜನರ ಮೇಲೆ ಚಾಕು ಹಾಕಿರುವುದು ಕಂಡು ಬಂದಿದೆ.

ಅಕ್ರಮ ಸಂಬಂಧಕ್ಕೆ ಕೊಲೆ

ಅಕ್ರಮ ಸಂಬಂಧ ಆರೋಪ ಹಿನ್ನೆಲೆ ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಜೆಜೆ ನಗರದಲ್ಲಿ ನಡೆದಿದೆ. ಅಕ್ರಂ ಪಾಷಾ (43) ಕೊಲೆಯಾದ ವ್ಯಕ್ತಿ. ಉಮರ್ ಖಾಲೀದ್ ಎಂಬವರ ಪತ್ನಿಯ ಜೊತೆ ಅಕ್ರಂನ ಪಾಷಾ ಅಕ್ರಮ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿದೆ. ಬುಧವಾರ ರಾತ್ರಿ ಅಕ್ರಂ ಪಾಷಾ ಉಮರ್ ಖಾಲಿದ್ ಮನೆ ಬಳಿ ಬಂದಿದ್ದ. ಈ ವೇಳೆ ಉಮರ್ ಖಾಲಿದ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಘಟನೆ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಕರಣ ಸಂಬಂಧ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್ ಪ್ರತಿಕ್ರಿಯಿಸಿ, ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸುಮಾರು 12:30ಕ್ಕೆ ಹಲ್ಲೆ ಆಗಿದೆ ಎಂದು ಮಾಹಿತಿ ಬಂದಿದೆ. ಮಾಹಿತಿ ಆಧರಿಸಿ ಪೊಲೀಸ್ ಹೋಗಿ ನೋಡಿದಾಗ ಓರ್ವ ವ್ಯಕ್ತಿ ಮೇಲೆ ಹಲ್ಲೆ ಆಗಿರುತ್ತದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಕ್ರಂ ಪಾಷಾ ಮೃತಪಟ್ಟಿದ್ದಾನೆ ಎಂದಿದ್ದಾರೆ.

Vishakha Bhat Heggar

View all posts by this author