ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅನೈತಿಕ ಸಂಬಂಧದ ಶಂಕೆ; ಲಿವ್‌ ಇನ್‌ ಪಾರ್ಟ್‌ನರ್‌ ಸಂಗಾತಿಯ ಕತ್ತು ಸೀಳಿದ ವ್ಯಕ್ತಿ

ಸಿಕ್ಕಿಂನ 22 ವರ್ಷದ ಮಹಿಳೆಯನ್ನು ಆಕೆಯ ಗೆಳೆಯನೇ ಕೊಲೆ ಮಾಡಿದ ಘಟನೆ ಸಿಕ್ಕಿಂನಲ್ಲಿ ನಡೆದಿದೆ. ಮೃತರನ್ನು ಸಿಕ್ಕಿಂ ಮೂಲದ 22 ವರ್ಷದ ಅತಿ ಹಂಗ್ಮಾ ಸುಬ್ಬಾ ಎಂದು ಗುರುತಿಸಲಾಗಿದ್ದು, ಆಕೆ ಸಲೂನ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದಳು.

ಸಂಗ್ರಹ ಚಿತ್ರ

ಬೆಂಗಳೂರು: ಸಿಕ್ಕಿಂನ 22 ವರ್ಷದ ಮಹಿಳೆಯನ್ನು ಆಕೆಯ ಗೆಳೆಯನೇ ಕೊಲೆ ಮಾಡಿದ ಘಟನೆ ಸಿಕ್ಕಿಂನಲ್ಲಿ ನಡೆದಿದೆ. ಮೃತರನ್ನು ಸಿಕ್ಕಿಂ ಮೂಲದ 22 ವರ್ಷದ ಅತಿ ಹಂಗ್ಮಾ ಸುಬ್ಬಾ ಎಂದು ಗುರುತಿಸಲಾಗಿದ್ದು, ಆಕೆ (Murder Case) ಸಲೂನ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಡಾರ್ಜಿಲಿಂಗ್ ಮೂಲದ ಪುರ್ಬಾ ಆಕೆಯನ್ನು ಕೊಲೆ ಮಾಡಿದ್ದಾನೆ. ಸುಮಾರು ಒಂದು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ದೊಡ್ಡಕನ್ನನಹಳ್ಳಿಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಮಹಿಳೆಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧವಿದೆ ಎಂದು ಪುರ್ಬಾ ಆಕೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದ. ಇದೇ ವಿಷಯಕ್ಕೆ ಭಾನುವಾರ ಬೆಳಿಗ್ಗೆ ಅವರಿಬ್ಬರ ನಡುವೆ ಜಗಳ ನಡೆದಿದೆ. ಈ ಜಗಳದಲ್ಲಿ, ಪುರ್ಬಾ ಲೆಪ್ಚಾ ಅತಿ ಹಂಗ್ಮಾ ಸುಬ್ಬಾ ಮೇಲೆ ಅಡುಗೆಮನೆಯಲ್ಲಿ ಬಳಸುವ ಚಾಕುವಿನಿಂದ ಹಲ್ಲೆ ನಡೆಸಿ, ಆಕೆಯ ಕತ್ತು ಸೀಳಿದ್ದಾನೆ. ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಘಟನೆ ಕುರಿತು ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮಾಜಿ ಪತ್ನಿಯನ್ನು ಕೊಂದ ಪತಿ!

ಹೈದರಾಬಾದ್‌ನಲ್ಲಿ ವಿಚ್ಛೇದನದ ನಂತರ ಮರು ಮದುವೆಯಾಗಿ ಗರ್ಭಿಣಿಯಾಗಿದ್ದ ಮಹಿಳೆಯನ್ನು ಆಕೆಯ ಮಾಜಿ ಪತಿಯೇ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ನಡೆದಿದೆ. 29 ವರ್ಷದ ಸುನೀತಾ ಕೊಲೆಯಾದ ಮಹಿಳೆ. ದೇವರಕೊಂಡ ಮಹೇಶ್ ಕೊಲೆ ಮಾಡಿದ ಮಾಜಿ ಪತಿ. ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದು ಕೆಲ ಕಾಲ ಇಬ್ಬರೂ ಕೆನಡಾದಲ್ಲಿ ನೆಲೆಸಿದ್ದರು. ಆಕೆಯ ಮರು ಮದುವೆಯಿಂದ ಅಸಮಾಧಾನಗೊಂಡ ಮಾಜಿ ಪತಿ ಮಹೇಶ್ ಆಕೆಯ ಗಂಡನ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಆಕೆಯನ್ನು ಕೊಲೆ ಮಾಡಿದ್ದಾನೆ. ಸುನೀತಾ ತಮ್ಮ ಮನೆಯಿಂದಲೇ ಕಂಪನಿಯೊಂದಕ್ಕೆ (ವರ್ಕ್ ಫ್ರಮ್ ಹೋಮ್) ಕೆಲಸ ಮಾಡುತ್ತಿದ್ದರು. ಘಟನೆ ನಡೆಯುವ ವೇಳೆ ಆಕೆಯ ಅತ್ತೆ ಟೆರೇಸ್ ಮೇಲೆ ಬಟ್ಟೆ ಒಣ ಹಾಕುತ್ತಿದ್ದರೆ ಮಾವ ಮತ್ತೊಂದು ಕೋಣೆಯಲ್ಲಿದ್ದರು. 2024ರಲ್ಲಿ ಸುನೀತಾ ಹಾಗೂ ಮಹೇಶ್‌ ಮಧ್ಯೆ ವಿಚ್ಚೇದನವಾಗಿತ್ತು. ಕೌಟುಂಬಿಕ ಕಲಹದ ನಂತರ ಆರೋಪಿ ಮಹೇಶ್ ವಿರುದ್ಧ ಸುನೀತಾ ಕೌಟುಂಬಿಕ ಹಿಂಸಾಚಾರ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಆತನ ವಿರುದ್ಧ ಪೊಲೀಸರು ಲುಕೌಟ್ ಸರ್ಕ್ಯುಲರ್ ಹೊರಡಿಸಿದ್ದರು.

ಬುಧವಾರ ಮಧ್ಯಾಹ್ನ ಆರೋಪಿ ಗ್ರೀನ್ ಸಿಟಿ ಕಾಲೋನಿಯಲ್ಲಿರುವ ಸುನಿತಾ ಅವರು ವಾಸವಿದ್ದ ಅವರ ನಾಲ್ಕನೇ ಮಹಡಿಯ ಅಪಾರ್ಟ್‌ಮೆಂಟ್‌ಗೆ ನುಗ್ಗಿದ್ದಾನೆ. ನೇರವಾಗಿ ಸುನೀತಾ ಇದ್ದ ಇದ್ದ ಕೋಣೆಗೆ ಹೋಗಿ ಒಳಗಿನಿಂದ ಲಾಕ್ ಮಾಡಿದ್ದಾನೆ . ಅವನ ಬಳಿ ಎರಡು ಚಾಕುಗಳು, ಒಂದು ಪೆಟ್ರೋಲ್ ಬಾಟಲಿ ಮತ್ತು ಒಂದು ಮರ ಕತ್ತರಿಸುವ ಸಣ್ಣ ಕೈ ಗರಗಸವಿತ್ತು. ಆರಂಭದಲ್ಲಿ ಮಹೇಶ್ ಆಕೆಯೊಂದಿಗೆ ತೀವ್ರ ವಾಗ್ವಾದಕ್ಕಿಳಿದು ಕೆಲವೇ ನಿಮಿಷಗಳಲ್ಲಿ ಸುನೀತಾಳ ಮೇಲೆ ಚಾಕುಗಳಿಂದ ಹಲ್ಲೆ ನಡೆಸಿದ್ದಾನೆ. ಆಕೆಯ ತಲೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ.

Vishakha Bhat Heggar

View all posts by this author