ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೇತನ್ ಅಗರ್ವಾಲ್ ಕೊಲೆಗೆ ಸಂಚು ರೂಪಿಸುವ ಮೊದಲೇ ಮದುವೆಯಾಗಿದ್ದರಾ ಸಿಯಾ-ಚೇತನ್? ವಾಟ್ಸಾಪ್ ಚಾಟ್‌ನಲ್ಲಿ ಬಹಿರಂಗವಾಗಿದ್ದೇನು?

Crime News: ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಹೊಸ ಬೆಳವಣಿಗೆ ಬೆಳಕಿಗೆ ಬಂದಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಿಯಾ ಗೋಯಲ್ ಈಗಾಗಲೇ ಮದುವೆಯಾಗಿದ್ದಾಳೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳ ಫೋನ್‌ಗಳಿಂದ ವಶಪಡಿಸಿಕೊಂಡ ವಾಟ್ಸಾಪ್ ಚಾಟ್‌ಗಳ ಮೂಲಕ ಈ ಘಟನೆ ಬೆಳಕಿಗೆ ಬಂದಿದೆ.

ಕೇತನ್ ಅಗರ್ವಾಲ್ ಕೊಲೆಗೆ ಸಂಚು ರೂಪಿಸುವ ಮೊದಲೇ ಮದುವೆಯಾಗಿದ್ದ ಸಿಯಾ-ಚೇತನ್

ಪುಣೆ, ಜು.7: ಲೋನಾವಾಲ ಬಳಿಯ ಐತಿಹಾಸಿಕ ಲೋಹಗಡ್ ಕೋಟೆಯಿಂದ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal's Murder) ಅವರನ್ನು ತಳ್ಳಿ ಕೊಲೆ ಮಾಡಲಾಗಿತ್ತು. ಈ ಘಟನೆ ದೇಶದೆಲ್ಲೆಡೆ ಆಘಾತಕಾರಿ ಅಲೆಯನ್ನು ಸೃಷ್ಟಿಸಿತ್ತು. ಇದೀಗ ಕೊಲೆ ಪ್ರಕರಣದಲ್ಲಿ ಹೊಸ ಬೆಳವಣಿಗೆ ಬೆಳಕಿಗೆ ಬಂದಿದೆ. ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಿಯಾ ಗೋಯಲ್ ಈಗಾಗಲೇ ಮದುವೆಯಾಗಿದ್ದಾಳೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ (Crime News).

ಆರೋಪಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ನಾಲ್ಕು ತಿಂಗಳ ಹಿಂದೆ ರಹಸ್ಯವಾಗಿ ವಿವಾಹವಾಗಿದ್ದಾರೆ. ಮದುವೆಯಾಗಿರುವ ವಿಚಾರವನ್ನು ತಮ್ಮ ಕುಟುಂಬಸ್ಥರಿಂದ ಮರೆಮಾಚಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳ ಫೋನ್‌ಗಳಿಂದ ವಶಪಡಿಸಿಕೊಂಡ ವಾಟ್ಸಾಪ್ ಚಾಟ್‌ಗಳ ಮೂಲಕ ಈ ಘಟನೆ ಬೆಳಕಿಗೆ ಬಂದಿದೆ. ರಹಸ್ಯ ವಿವಾಹವು ಇಡೀ ಪ್ರಕರಣಕ್ಕೆ ಹೊಸ ಆಯಾಮವನ್ನು ನೀಡಿದೆ.

ಜೂನ್ 18 ರಂದು ಕೇತನ್ ಅಗರ್ವಾಲ್ ಅವರನ್ನು ಲೋಹಗಡ್ ಕೋಟೆಯಿಂದ ತಳ್ಳಿ ಕೊಲ್ಲಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಯಾ ಗೋಯಲ್ ಮತ್ತು ಚೇತನ್ ಚೌಧರಿಯನ್ನು ಬಂಧಿಸಿದ್ದಾರೆ. ಆರಂಭದಲ್ಲಿ ತ್ರಿಕೋನ ಪ್ರೇಮ ಪ್ರಕರಣದಂತೆ ಕಂಡುಬಂದ ಪ್ರಕರಣವು ತನಿಖೆಯ ಸಮಯದಲ್ಲಿ ಡಿಜಿಟಲ್ ಸಾಕ್ಷ್ಯಗಳು ಹೊರಬಂದ ನಂತರ ತನಿಖಾಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿದೆ.

ಪ್ರೇಯಸಿಯನ್ನು ಕೊಂದು ಶವ ಕತ್ತರಿಸಿ ವಿಲೇವಾರಿ ಮಾಡಿದ ಪ್ರಿಯಕರ

ಆರೋಪಿಗಳ ಮೊಬೈಲ್‌ಗಳಿಂದ ಪಡೆದ ಕರೆ ದಾಖಲೆಗಳು, ಸ್ಥಳ ಮಾಹಿತಿ, ಚಾಟ್‌ಗಳು ಹಾಗೂ ಇಂಟರ್‌ನೆಟ್ ಹುಡುಕಾಟದ ಇತಿಹಾಸವನ್ನು ಪೊಲೀಸರು ಸೂಕ್ಷ್ಮವಾಗಿ ಪರಿಶೀಲಿಸಿದರು. ಕಳೆದ ಆರರಿಂದ ಏಳು ತಿಂಗಳ ಡಿಜಿಟಲ್ ಡೇಟಾವನ್ನು ಪರಿಶೀಲಿಸಿದಾಗ, ಸಿಯಾ ಮತ್ತು ಚೇತನ್ ನಾಲ್ಕು ತಿಂಗಳ ಹಿಂದೆಯೇ ವಿವಾಹವಾಗಿದ್ದರು ಎಂದು ಹೇಳಲಾಗಿದ್ದು, ಭಯದಿಂದ ಕುಟುಂಬಸ್ಥರಿಂದ ಮರೆಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಈ ರಹಸ್ಯ ವಿವಾಹದ ನಂತರ ಕೇತನ್‌ನನ್ನು ಕೊಲ್ಲಲು ಸಂಚು ರೂಪಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕೇತನ್ ಅಗರ್ವಾಲ್ ಅವರನ್ನು ಕೊಲ್ಲಲು ಮೊದಲ ಪ್ರಯತ್ನ ಜೂನ್ 14 ರಂದು ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಸಿಯಾ ಕೊನೆಯ ಕ್ಷಣದಲ್ಲಿ ಧೈರ್ಯ ಕಳೆದುಕೊಂಡಳು, ಪ್ರಯತ್ನ ವಿಫಲವಾಯಿತು. ನಂತರ ಚೇತನ್‌ಗೆ ಸಂದೇಶ ಕಳುಹಿಸಿದ ಸಿಯಾ, ತನಗೆ ಆತನನ್ನು ಸಾಯಿಸಲು ಧೈರ್ಯವಿಲ್ಲ, ನೀನೂ ಬಾ ಎಂದು ಕರೆದಿದ್ದಾಳೆ. ಇಬ್ಬರೂ ಒಟ್ಟಿಗೆ ಸೇರಿ ಆತನನ್ನು ಬಂಡೆಯಿಂದ ಕೆಳಕ್ಕೆ ತಳ್ಳೋಣ ಎಂದು ಸಂದೇಶ ಕಳುಹಿಸಿದ್ದಾಳೆ. ಜೂನ್ 18 ರಂದು ಇಬ್ಬರೂ ಸೇರಿ ಕೇತನ್ ಅಗರ್ವಾಲ್‌ನನ್ನು ಕೊಲೆ ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.