ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತಂದೆಯ ಸ್ವರ್ಜಿತ ಆಸ್ತಿಯಲ್ಲಿ ಮಗನಿಗೆ ಹಕ್ಕಿಲ್ಲ: ಹೈಕೋರ್ಟ್ ಆದೇಶ

ತಂದೆ ಕಷ್ಟ ಪಟ್ಟು ಸಂಪಾದಿಸಿದ ಆಸ್ತಿ ಮೇಲೆ ಮಗನಿಗೆ ಹಕ್ಕು ಇರುವುದಿಲ್ಲ. ಅವರು ತಮ್ಮ ಆಸ್ತಿಯನ್ನು ಯಾರಿಗೆ ಬೇಕಾದರೂ ನೀಡಬಹುದು. ಪಿತ್ರಾರ್ಜಿತ ಆಸ್ತಿಯಂತೆ ಸ್ವರ್ಜಿತ ಆಸ್ತಿಯು ತಂದೆಯಿಂದ ಮಗನಿಗೆ ವರ್ಗಾವಣೆಯಾಗುವುದಿಲ್ಲ ಈ ಕುರಿತು ಕೇರಳ ಹೈಕೋರ್ಟ್ ಪೀಠ ಮಹತ್ವದ ಆದೇಶವನ್ನು ನೀಡಿದೆ.

ಸಂಗ್ರಹ ಚಿತ್ರ

ಕೇರಳ: ತಂದೆಯ ಆಸ್ತಿ (Father's property) ಮೇಲೆ ಮಗನಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಕೇರಳ ಹೈಕೋರ್ಟ್ (Kerala high court) ಮಹತ್ವದ ಆದೇಶ ನೀಡಿದೆ. ಹಿಂದೂ ಉತ್ತರಾಧಿಕಾರ ಕಾಯ್ದೆ (Hindu Succession Act) ಮತ್ತು ಆಸ್ತಿ ಹಕ್ಕುಗಳ (Property rights) ಕುರಿತು ವಿಚಾರಣೆ ವೇಳೆ ತಂದೆ ಕಷ್ಟ ಪಟ್ಟು ಸಂಪಾದಿಸಿದ ಆಸ್ತಿ ಮೇಲೆ ಮಗನಿಗೆ ಹಕ್ಕು ಇರುವುದಿಲ್ಲ. ಅವರು ತಮ್ಮ ಆಸ್ತಿಯನ್ನು ಯಾರಿಗೆ ಬೇಕಾದರೂ ನೀಡಬಹುದು. ಪಿತ್ರಾರ್ಜಿತ ಆಸ್ತಿಯಂತೆ ಸ್ವರ್ಜಿತಾ ಆಸ್ತಿಯು ತಂದೆಯಿಂದ ಮಗನಿಗೆ ವರ್ಗಾವಣೆಯಾಗುವುದಿಲ್ಲ ಎಂದು ತಿಳಿಸಿದೆ.

ತಂದೆಯ ಸ್ವರ್ಜಿತಾ ಆಸ್ತಿಯ ಬಗ್ಗೆ ಅನೇಕರಲ್ಲಿ ತಪ್ಪು ಕಲ್ಪನೆಗಳಿವೆ. ತಂದೆ ಕಷ್ಟಪಟ್ಟು ಗಳಿಸಿದ ಪ್ರತಿಯೊಂದು ಪೈಸೆ, ಪ್ರತಿ ಮಗನಿಗೆ ಸ್ವಯಂಚಾಲಿತವಾಗಿ ಹೋಗುತ್ತದೆ ಎಂದು ನಂಬುತ್ತಾರೆ. ಆದರೆ ಕಾನೂನಿನ ದೃಷ್ಟಿಯಲ್ಲಿ ಇದು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಬೆಂಗಳೂರಿನ ಹಾಸ್ಟೆಲ್‌ನಲ್ಲಿ ಕೇರಳ ಮೂಲದ ಮಹಿಳೆಗೆ ಕಿರುಕುಳ; ಆರೋಪಿ ಅರೆಸ್ಟ್‌

ಪಿತ್ರಾರ್ಜಿತ ಮತ್ತು ಸ್ವರ್ಜಿತಾ ಆಸ್ತಿ ನಡುವೆ ದೊಡ್ಡ ವ್ಯತ್ಯಾಸವಿದೆ ಎಂದು ಹೇಳಿರುವ ನ್ಯಾಯಾಲಯ ಈ ಸಂಬಂಧ ಸಂವೇದನಾಶೀಲ ತೀರ್ಪು ನೀಡಿದ್ದು, ಕಷ್ಟಪಟ್ಟು ತಂದೆ ಸಂಪಾದಿಸಿರುವ ಆಸ್ತಿಯ ಮೇಲೆ ಮಗನ ಹಕ್ಕುಗಳ ಬಗ್ಗೆ ಸ್ಪಷ್ಟಿಕರಣವನ್ನು ನೀಡಿದೆ.

ತಂದೆಯ ಸ್ವರ್ಜಿತಾ ಆಸ್ತಿಯ ಮೇಲೆ ಮಗನಿಗೆ ಜನ್ಮ ಸಿದ್ದವಾದ ಹಕ್ಕು ಸಾಧಿಸಲು ಬರುವುದಿಲ್ಲ ಅಥವಾ ಇದು ಆತನಿಗೆ ನೈಸರ್ಗಿಕವಾಗಿ ವರ್ಗಾವಣೆಯೂ ಆಗುವುದಿಲ್ಲ. ಈ ಆಸ್ತಿಯನ್ನು ಯಾರಿಗೆ ನೀಡಬೇಕು, ಯಾರಿಗೆ ಮಾರಾಟ ಮಾಡಬೇಕು ಅಥವಾ ಯಾರಿಗೆ ಉಡುಗೊರೆಯಾಗಿ ನೀಡಬೇಕು ಎಂಬುದನ್ನು ನಿರ್ಧರಿಸುವ ಸಂಪೂರ್ಣ ಅಧಿಕಾರ ತಂದೆಗೆ ಮಾತ್ರ ಇರುತ್ತದೆ. ತಂದೆ ತನ್ನ ಸ್ವರ್ಜಿತ ಆಸ್ತಿಯನ್ನು ಮಗನಿಗೆ ನೀಡಲು ನಿರಾಕರಿಸಲೂಬಹುದು ಎಂದು ನ್ಯಾಯಾಲಯ ತಿಳಿಸಿದೆ.

ಇನ್ನು ಪಿತ್ರಾರ್ಜಿತವಾಗಿ ಬಂಡ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಹಕ್ಕಿದೆ. ಇದು ಅವರ ಜನ್ಮಸಿದ್ಧ ಹಕ್ಕು. ಆದರೆ ತಂದೆಯ ಉದ್ಯೋಗ, ವ್ಯವಹಾರ ಅಥವಾ ಸ್ವಂತ ಸಂಪನ್ಮೂಲಗಳ ಮೂಲಕ ಖರೀದಿಸಿದ ಆಸ್ತಿಯಲ್ಲಿ ತಂದೆ ಜೀವಂತವಾಗಿರುವವರೆಗೆ ಮಕ್ಕಳಿಗೆ ಹಕ್ಕಿಲ್ಲ. ಅವರು ಅದನ್ನು ಯಾರಿಗೆ ಬೇಕಾದರೂ ನೀಡಬಹುದಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಚಿತ್ರದುರ್ಗದ ಬಳಿ ಭೀಕರ ಅಪಘಾತ; ಮೂವರು ರಿಸರ್ವ್ ಸಬ್‌ ಇನ್ಸ್‌ಪೆಕ್ಟರ್‌ಗಳು ಸ್ಥಳದಲ್ಲೇ ಸಾವು

ತಂದೆಗೆ ಸೇರಿದ್ದ 46 ಸೆಂಟ್ಸ್ ಭೂಮಿಯ ಬಗ್ಗೆ ಕೇರಳದ ವ್ಯಕ್ತಿಯೊಬ್ಬ ನ್ಯಾಯಾಲಯದ ಮೊರೆ ಹೋಗಿದ್ದು, ಇದು ತನ್ನ ತಂದೆಗೆ ಸೇರಿದ್ದು, ಅದು ನನಗೆ ಬರಬೇಕು ಎಂದು ವಾದಿಸಿದ್ದನು. ಆದರೆ ಆತನ ತಾಯಿ ಇದನ್ನು ಕುಟುಂಬದ ಇತರ ಐದು ಸದಸ್ಯರಿಗೆ ಹಂಚಲು ವಿಲ್ ಬರೆದಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಈ ಭೂಮಿ ಅವನ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲ. ಇದರಲ್ಲಿ ಮಗನಿಗೆ ಯಾವುದೇ ವಿಶೇಷ ಹಕ್ಕಿಲ್ಲ. ತಂದೆಯಿಂದ ಅವರ ಪತ್ನಿಗೆ ಇದು ಉಡುಗೊರೆಯಾಗಿ ಬಂದಿದ್ದು, ಅವರು ಅದನ್ನು ಇತರರಿಗೆ ನೀಡಬಹುದು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

ವಿದ್ಯಾ ಇರ್ವತ್ತೂರು

View all posts by this author