ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಬೈಕ್‌ ಖರೀದಿಗೆ ಹಣ ನೀಡದ ತಂದೆಯನ್ನೇ ಕೊಂದ ಮಗ

ಬೈಕ್ ಖರೀದಿಸಲು ಹಣ ನೀಡಿಲ್ಲವೆಂದು ಸಿಟ್ಟಿಗೆದ್ದ ಮಗ ತಂದೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮಗ ಶೇಖರ್ ಎಂಬಾತ ತನ್ನ ತಂದೆ ಚೆನ್ನಾರೆಡ್ಡಿ ರಾಠೋಡ್ (50) ಅವರ ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಕೇಸು ದಾಖಲಿಸಿಕೊಂಡಿದ್ದಾರೆ.

ಬೈಕ್‌ ಖರೀದಿಗೆ ಹಣ ನೀಡದ ತಂದೆಯನ್ನೇ ಕೊಂದ ಮಗ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Mar 11, 2025 8:59 AM

ಯಾದಗಿರಿ: ರಾಜ್ಯದಲ್ಲಿ ಪಾಪಿ ಮಗನೊಬ್ಬ (Son) ತಂದೆಯನ್ನು (Father) ಕೊಲೆ (Murder Case) ಮಾಡಿದ ಘೋರ ಘಟನೆ (Crime News) ನಡೆದಿದೆ. ಬೈಕ್‌ ಖರೀದಿಗೆ ಹಣ ನೀಡಿಲ್ಲವೆಂದು ತಂದೆಯನ್ನೇ ಮಗ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಯಾದಗಿರಿ (Yadagiri news) ಜಿಲ್ಲೆಯ ಸುರುಪರ ತಾಲೂಕಿನ ಕಿರದಳ್ಳಿ ತಾಂಡಾದಲ್ಲಿ ನಡೆದಿದೆ.

ಬೈಕ್ ಖರೀದಿಸಲು ಹಣ ನೀಡಿಲ್ಲವೆಂದು ಸಿಟ್ಟಿಗೆದ್ದ ಮಗ ತಂದೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮಗ ಶೇಖರ್ ಎಂಬಾತ ತನ್ನ ತಂದೆ ಚೆನ್ನಾರೆಡ್ಡಿ ರಾಠೋಡ್ (50) ಅವರ ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಕೇಸು ದಾಖಲಿಸಿಕೊಂಡಿದ್ದಾರೆ.

ನಟಿ ರನ್ಯಾ ರಾವ್‌ಗೆ 15 ದಿನಗಳ ನ್ಯಾಯಾಂಗ ಬಂಧನ

ಬೆಂಗಳೂರು: ದುಬೈನಿಂದ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ (Gold smuggling case) ಸಂಬಂಧಿಸಿ ನಟಿ ರನ್ಯಾ ರಾವ್ ಅವರಿಗೆ ಮತ್ತೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಳೆದ ಮೂರು ದಿನಗಳಿಂದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಕಸ್ಟಡಿಯಲ್ಲಿದ್ದ ನಟಿ ರನ್ಯಾ ರಾವ್ (Actress Ranya Rao ) ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಮತ್ತೆ ಅಧಿಕಾರಿಗಳು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರು ನಟಿಗೆ 15 ದಿನ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ. ಕೋರ್ಟ್‌ನಲ್ಲಿ ನಟಿ ರನ್ಯಾರಾವ್ ಹಾಜರಾದ ಬಳಿಕ ಕಣ್ಣೀರು ಹಾಕಿದ್ದಾರೆ. ಈ ವೇಳೆ ಪೊಲೀಸರು ಹಲ್ಲೆ ಮಾಡಿದರಾ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದಾಗ, ನಟಿ ರನ್ಯಾ ರಾವ್ ಅತ್ತಿದ್ದಾರೆ. ನನಗೆ ಕೆಟ್ಟದಾಗಿ ಬೈದಿದ್ದಾರೆ. ಮಾನಸಿಕವಾಗಿ ನಾನು ಕುಗ್ಗಿದ್ದೇನೆ. ಬೆದರಿಸುವ ರೀತಿಯಲ್ಲಿ ಅಧಿಕಾರಿಗಳು ಮಾತನಾಡಿದ್ದಾರೆ ಎಂದು ಜಡ್ಜ್ ಮುಂದೆ ಹೇಳಿದ್ದಾರೆ.

ಈ ವೇಳೆ ಡಿಆರ್‌ಐ ಅಧಿಕಾರಿಗಳು ಪ್ರತಿಕ್ರಿಯಿಸಿ, ರನ್ಯಾ ರಾವ್‌ ಮೇಲೆ ಹಲ್ಲೆ ಮಾಡಿಲ್ಲ. ವಿಚಾರಣೆಯ ಸಿಸಿಟಿವಿ ದೃಶ್ಯ ಕೋರ್ಟ್‌ಗೆ ಪ್ರೊಡ್ಯೂಸ್ ಮಾಡಲು ತಯಾರಿದ್ದೇವೆ ಎಂದಿದ್ದಾರೆ. ವಿಚಾರಣೆಯ ವೇಳೆ ಡಿಆರ್‌ಐ ಪರ ವಕೀಲರು ಉಪಸ್ಥಿತರಿದ್ದರಾ ? ಎಂದು ಕೇಳಿದಾಗ ನಟಿ ರನ್ಯಾ ರಾವ್ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.

ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್‌ ಅಲಿಯಾಸ್‌ ಹರ್ಷವರ್ಧಿನಿ ರನ್ಯಾ ಅವರನ್ನು ತನಿಖೆಗೆ ಒಳಪಡಿಸಲು ಈ ಹಿಂದೆ ಮೂರು ದಿನಗಳ ಕಾಲ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ವಶಕ್ಕೆ ನೀಡಲಾಗಿತ್ತು. ಇದೀಗ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ: Murder Case: ಪ್ರೇಯಸಿಯೊಂದಿಗೆ ಮದುವೆಗೆ ಹಠ; ಮಗನನ್ನೇ ಕೊಲೆಗೈದ ತಂದೆ, ಅಣ್ಣ!